ಆಮೂರ ಅವರು ಬರವಣಿಗೆಯ ಬದುಕನ್ನು ತಪಸ್ಸಿನಂತೆ ಸಾಗಿಸಿದರು; ರಾಘವೇಂದ್ರ

Date: 21-10-2024

Location: ಬೆಂಗಳೂರು


ಧಾರವಾಡ: ಜಿ.ಬಿ. ಜೋಶಿ ಮೆಮೊರಿಯಲ್‌ ಟ್ರಸ್ಟ್‌ ಹಾಗೂ ಡಾ.ಜಿ.ಎಸ್ ಆಮೂರ ಜನ್ಮ ಶತಮಾನೋತ್ಸವ ಸಮಿತಿಯಿಂದ ‘ಜಿ.ಎನ್. ಆಮೂರ ಜನ್ಮಶತಮಾನೋತ್ಸವ ಸಮಾರಂಭವನ್ನು 2024 ಅ. 20 ಭಾನುವಾರದಂದು ಆಲೂರು ವೆಂಕಟರಾವ್‌ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಮರ್ಶಕ ಎಚ್. ಎಸ್‌. ರಾಘವೇಂದ್ರ ಅವರು ಮಾತನಾಡಿ, "ವಿಮರ್ಶಕ ಜಿ.ಎಸ್.‌ ಆಮೂರ ಅವರು ಬರವಣಿಗೆಯ ಬದುಕನ್ನು ತಪಸ್ಸಿನಂತೆ ಸಾಗಿಸಿದರು. ಅವರ ಕಾರ್ಯಗಳು, ದಾರಿಗಳು ಬರಹಗಾರರಿಗೆ ಪ್ರೇರಕ ಶಕ್ತಿಯಾಗಿದೆ. ಎರಡು ಪರ್ವಗಳಲ್ಲಿ ಅಂದರೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಆಮೂರ ಅವರ ಬರವಣಿಗೆಯನ್ನು ಕಾಣಬಹುದು. ಇಂಗ್ಲಿಷ್‌ ಪರ್ವದಲ್ಲಿ ಅವರು 57 ವರ್ಷದವರೆಗೆ ತೊಡಗಿಕೊಂಡಿದ್ದರು. ಆನಂತರ ಕನ್ನಡ ಪರ್ವದಲ್ಲಿ ತೊಡಗಿಕೊಂಡರು. ಕುವೆಂಪು, ಬೇಂದ್ರೆ, ಯು.ಆರ್ ಅನಂತಮೂರ್ತಿ, ನಿರಂಜನ ಅವರೆಲ್ಲರ ಕುರಿತು ಸಮಗ್ರ ಅಧ್ಯಯನ ಪುಸ್ತಕಗಳನ್ನು ಆಮೂರ ಅವರು ರಚಿಸಿದ್ದಾರೆ," ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಡುಗಡೆಯಾದ ʻಒಳಗಿರುವ ಬೆಳಕುʼ ಕೃತಿ ಕುರಿತು ಕೃತಿ ಸಂಪಾದಕ ಜಿ.ಎಂ.ಹೆಗಡೆ ಮಾತನಾಡಿ,ʻಬೇಂದ್ರೆ ಸಾಹಿತ್ಯ ವಿಮರ್ಶೆ ಕುರಿತು ಆಮೂರ ಅವರ ಅಧ್ಯಯನದ ಆಳ ಜ್ಙಾನದ ವಿವಿಧ ಮುಖಗಳನ್ನು ಕಟ್ಟಿಕೊಡಲಾಗಿದೆʼ ಎಂದರು.

ವೇದಿಕೆಯಲ್ಲಿ ಸಾಹಿತಿ ರಾಜೇಂದ್ರ ಚೆನ್ನಿ, ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಲೇಖಕಿ‌ ಎಂ.ಎಸ್.‌ ಆಶಾದೇವಿ, ಪ್ರೊ.ಮಲ್ಲಿಕಾರ್ಜುನ ಹಿರೇಮಠ, ರಾಘವೇಂದ್ರ ಪಾಟೀಲ್‌, ರಮಾಕಾಂತ ಜೋಶಿ, ವೀಣಾಶಾಂತೇಶ್ವರ ಜಿ.ಎಂ.ಹೆಗಡೆ, ಶ್ಯಾಮ ಆಮೂರ ಅವರು ಉಪಸ್ಥಿತರಿದ್ದರು.

MORE NEWS

‘ಸಾಹಿತ್ಯ ಬಂಗಾರ ಪ್ರಶಸ್ತಿ’ ಗೆ ಕುಂ.ವಿ, ಸುಶೀಲಮ್ಮ, ಪ್ರತಿಭಾ ಆಯ್ಕೆ

22-10-2024 ಬೆಂಗಳೂರು

ಬೆಂಗಳೂರು: ಎಸ್. ಬಂಗಾರಪ್ಪ ವಿಚಾರ ವೇದಿಕೆಯಿಂದ ಕೊಡಮಾಡುವ 2024ನೇ ಸಾಲಿನ ’ಸೇವಾ ಬಂಗಾರ ಪ್ರಶಸ್ತಿ’ ಗೆ ...

‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಸಮಾರಂಭ

21-10-2024 ಬೆಂಗಳೂರು

ಬೆಂಗಳೂರು: ಶ್ರೀಮಧ್ವ ಜಯಂತಿ ಅಂಗವಾಗಿ ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಿಗೆ ...

ಮಲರ್ ವಿಳಿ. ಕೆ ಅವರಿಗೆ 2024ನೇ ಸಾಲಿನ ‘ಕೆ.ಎನ್. ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿ’

21-10-2024 ಬೆಂಗಳೂರು

ಬೆಂಗಳೂರು: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ. ಮಲರ್ ವಿಳಿ. ಕೆ ಅವರು ಪ್ರತಿಷ್ಠಿತ 2024ನೇ ಸಾಲ...