Vyasti-samasti pampana drusti; ಸಂಶೋಧನಾ ಕ್ಷೇತ್ರಕ್ಕೆ ವಿಪುಲವಾದ ಅವಕಾಶಗಳಿವೆ


“ಶ್ರೀ ಶಾಂತಿನಾಥ ದಿಬ್ಬದ ಅವರು ಮಾಡಿರುವ ಈ ಕೆಲಸವನ್ನು ಕನ್ನಡ ಸಾಹಿತ್ಯ ಲೋಕ ಹೆಮ್ಮೆಯಿಂದ ಸ್ಮರಿಸುತ್ತದೆ,” ಎನ್ನುತ್ತಾರೆ ನ. ರವಿಕುಮಾರ ಅವರು ಶಾಂತಿನಾಥ ದಿಬ್ಬದ ಅವರ “ವ್ಯಷ್ಟಿ - ಸಮಷ್ಟಿ” ಕೃತಿಗೆ ಬರೆದ ನುಡಿವ ಬೆಡಗು.

ಅಭಿನವ ಪ್ರಕಟಿಸುತ್ತಿರುವ ಶೆಟ್ಟರ್ ಅವರ ಇಪ್ಪತ್ತೇಳನೆಯ ಪುಸ್ತಕವಿದು. ಅವರ ಬಿಡಿ ಲೇಖನಗಳ ಸಂಗ್ರಹಗಳು, ಕನ್ನಡದ 40 ಕಾವ್ಯಗಳ ಪದಕೋಶಗಳು, 'ಕವಿರಾಜಮಾರ್ಗ'ದ ಹೊಸ ಆವೃತ್ತಿ ಮತ್ತು ನಿಘಂಟು, 'ವಡ್ಡಾರಾಧನೆ'ಯ ಸಂಪುಟವೂ ಪ್ರಕಟಣೆಗೆ ಸಿದ್ಧವಾಗುತ್ತಿವೆ. ಇನ್ನು ಅವರ ಎಲ್ಲ ಸಾಹಿತ್ಯವನ್ನು ಮುದ್ರಣಕ್ಕೆ ಸಜ್ಜುಗೊಳಿಸಿ ಪ್ರಕಟಿಸಲು ಅಭಿನವಕ್ಕೆ ಸುಮಾರು 10 ವರ್ಷಗಳು ಬೇಕು. ಹೀಗೆ ಕನ್ನಡ ಸಾಹಿತ್ಯದಲ್ಲಿ ಅಪಾರ ಪ್ರಮಾಣದ ಪ್ರಕಟಣಾ ಸಾಹಿತ್ಯವನ್ನು ಬಿಟ್ಟುಹೋದ ಸಂಶೋಧಕರಲ್ಲಿ ಶೆಟ್ಟರ್ ಪ್ರಮುಖರು. ಅದಕ್ಕಿಂತ ಹೆಚ್ಚಾಗಿ ಮುಂದಿನ ದಿನಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಸಾಗಬೇಕಾದ ಹಾದಿಯನ್ನು ತೋರಿಸಿಕೊಟ್ಟಿದ್ದು ಅವರ ದೊಡ್ಡ ಸಾಧನೆ. ನಿಸ್ಸಂಶಯವಾಗಿ ಕನ್ನಡ ಸಂಶೋಧನೆ 50 ವರ್ಷಗಳ ಶೆಟ್ಟರ್‌ರ ಸಾಧನೆಯನ್ನು ಗಮನಿಸಿ ಮುಂದುವರೆಯುತ್ತದೆ ಅಥವಾ ಅವರ ಕೆಲಸಗಳನ್ನು ಮುಂದುವರೆಸುತ್ತದೆ.

ಶೆಟ್ಟರ್ ಅವರ ಅಪಾರ ಪ್ರಮಾಣದ ಹಸ್ತಪ್ರತಿಗಳನ್ನು ಗಮನಿಸುವಾಗ ಕಣ್ಣಿಗೆ ಬಿದ್ದ ಮುಖ್ಯವಾದ ಹಸ್ತಪ್ರತಿಗಳಲ್ಲಿ ಇದೂ ಒಂದು. ಮದ್ರಾಸಿನಲ್ಲಿ ನಡೆದ ಅಭಿನವಗುಪ್ತನ ಸಮಸ್ರಮಾನೋತ್ಸವ ಸಮಾರಂಭದಲ್ಲಿ ಇಂಗ್ಲಿಷಿನಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧವಿದು. ಈ ಕುರಿತು ಮಾಹಿತಿ ನೀಡಿದವರು ರವಿ ಕೋರಿಶೆಟ್ಟರ್. ಶ್ರೀಮತಿ ಕಪಿಲವಾತ್ಸಾಯನ ಮುಂತಾದವರು ಭಾಗವಹಿಸಿದ್ದ ವಿಚಾರ ಸಂಕಿರಣವದು. ಈ ಪ್ರಬಂಧ ಅಂತರರಾಷ್ಟ್ರೀಯಮಟ್ಟದಲ್ಲಿ ಗಮನ ಸೆಳೆದದ್ದು ಮಾತ್ರವಲ್ಲ; ಕನ್ನಡ ಮಹತ್ವದ ಸಂಶೋಧಕರ - ಮುಖ್ಯವಾಗಿ ಕುರ್ಕ್ಯಾಲಂ ಶಾಸನವು ಬೆಳಕು ಕಂಡ ನಂತರ ಪಂಪನ ಸಾಹಿತ್ಯ ಮತ್ತು ಜೀವನದ ಬಗೆಗೆ - ಹಲವು ಹೊಸ ವಿಚಾರಗಳು, ಶೋಧನೆಗಳಿಗೂ ಕಾರಣವಾಯಿತು. ಈ ಪ್ರಬಂಧವನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟವರು ಪಂಪನ ಕುರಿತ ಸಂಶೋಧನೆ ಮತ್ತು ಅಧ್ಯಯನಗಳಲ್ಲಿ ತೊಡಗಿಸಿಕೊಂಡವರು ಶ್ರೀ ಶಾಂತಿನಾಥ ದಿಬ್ಬದ ಅವರು, ಪಂಪನ ಕುರಿತು ಈವರೆವಿಗೆ ಬಂದ ಪುಸ್ತಕಗಳು ಮತ್ತು ಲೇಖನಗಳ ಸಮಗ್ರ ಮಾಹಿತಿ ಒಂದೆಡೆ ಸಿಗುತ್ತಿಲ್ಲ (ಸಂಕ್ಷಿಪ್ತ ಮಾಹಿತಿ ಈ ಪ್ರಬಂಧದ ಕೊನೆಯಲ್ಲಿದೆ). ಇದು ಒಂದು ಮಹಾಪ್ರಬಂಧಕ್ಕೆ ವಸ್ತುವಾಗಬಲ್ಲ ವಿಷಯ.

ಪಂಪನ ಕುರಿತು ಮಾತ್ರವಲ್ಲ; ಈ ಬಗೆಯ ಸಮಗ್ರ ಮಾಹಿತಿ ಕೋಶವನ್ನು ಡಾ. ನರಹಳ್ಳಿ ಸರ್ ಮಾರ್ಗದರ್ಶನದಲ್ಲಿ ಅಭಿನವವೇ ಆರಂಭಿಸುತ್ತದೆ. ಇವತ್ತು ಸಂಶೋಧನಾ ಕ್ಷೇತ್ರಕ್ಕೆ ವಿಪುಲವಾದ ಅವಕಾಶಗಳಿವೆ. ಅದಕ್ಕೆ ಪೂರಕವಾದ ಆಕರ ಸಾಮಗ್ರಿಯನ್ನು ಒದಗಿಸಿಕೊಡುವ ಕೆಲಸ ಜರೂರಾಗಿ ಆಗಬೇಕಿದೆ.

ಶ್ರೀ ಶಾಂತಿನಾಥ ದಿಬ್ಬದ ಅವರು ಮಾಡಿರುವ ಈ ಕೆಲಸವನ್ನು ಕನ್ನಡ ಸಾಹಿತ್ಯ ಲೋಕ ಹೆಮ್ಮೆಯಿಂದ ಸ್ಮರಿಸುತ್ತದೆ. ಶೆಟ್ಟರ್ ಅವರ ಎಲ್ಲ ಕೃತಿಗಳ ಪ್ರಕಟಣೆಯ ಸಂಯೋಜಕರೂ, ಖ್ಯಾತ ಪ್ರಾಗೈತಿಹಾಸಿಕಾರರು ಆದ ಶ್ರೀ ರವಿ ಕೋರಿಶೆಟ್ಟರ್, ಷ. ಶೆಟ್ಟರ್ ಅವರ ಕುಟುಂಬ ವರ್ಗ, ಪುಸ್ತಕ ವಿನ್ಯಾಸ ಮಾಡಿದ ಬ್ರಾಹ್ಮ ಕ್ರಿಯೇಷನ್ಸ್‌ನ ಸಚಿನ್ ಕೃಷ್ಣ, ಕರಡು ತಿದ್ದಿದ ಶ್ರೀ ಎಚ್. ಎಸ್. ಗೋಪಾಲರಾವ್, ಶ್ರೀ ಇಂದ್ರಕುಮಾರ್ ಅವರಿಗೆ ಮುದ್ರಿಸಿದ ಧರಣಿ ಪ್ರಿಂಟರ್ಸ್‌ನ ಹೂವಪ್ಪ ಮತ್ತು ಸಿಬ್ಬಂದಿ ವರ್ಗದವರಿಗೆ ಅಭಿನವ ಋಣಿ.

- ನ. ರವಿಕುಮಾರ

MORE FEATURES

Gandasaagi kavithe bareyuvudu sulabha; ಪುರುಷತ್ವದ ಮದವಿಲ್ಲ ಬದಲಾಗಿ ಒಲವು ಚೆಲುವಿನ ಹದವಿದೆ

10-01-2025 ಬೆಂಗಳೂರು

"ಗಂಡಸಾಗಿ ಕವಿತೆ ಬರೆಯುವುದು ಸುಲಭ ಕೃತಿಯ ಕವಿತೆಗಳು ಎಲ್ಲ ಗಂಡಸರ ಮತ್ತು ಹೆಂಗಳೆಯರ ಬದುಕಿನ ಅನುಭವದ ಪ್ರತಿಫಲನಗಳ...

Nadavargal; ಇಲ್ಲಿರುವ ಎಲ್ಲ ಬರಹಗಳೂ ಸಾಂದರ್ಭಿಕವಾದಂಥವು

10-01-2025 ಬೆಂಗಳೂರು

“ನನ್ನ ಈ 'ನಾಡವರ್ಗಳ್' ಪುಸ್ತಕವನ್ನು ಸಿದ್ದಗೊಳಿಸುತ್ತಿರುವಾಗ ನಾನು ಇನ್ನೂ ಎಷ್ಟೊಂದು ಸಂಪನ್ನರ ಬಗ್ಗೆ...

Pritish nandy; ಮರೆಯಲಾಗದ “ನಂದಿ”

09-01-2025 ಬೆಂಗಳೂರು

"ಕನ್ನಡಿಗರಿಗೆ ಪ್ರೀತೀಶ್ ನೆನಪಾಗುವುದು ಕನ್ನಡದ ಮಹತ್ವದ ಕವಿ-ಕಥೆಗಾರ ಲಂಕೇಶರನ್ನು ಭಾರತೀಯ ಸಾಹಿತ್ಯವಲಯಕ್ಕೆ (ತಮ...