“ಕೊಲೆ ಹೇಗಾಯ್ತು, ಹೇಗೆ ಪತ್ತೆ ಆಯ್ತು, ವಿಚಾರಣೆ ಹೇಗೆಲ್ಲಾ ನಡೀತು, ಮೊದಲು ಪೋಸ್ಟ್ ಮಾರ್ಟಂ ಮಾಡಿದ ಸಾರಂಗಿ ಕೋಡಂಗಿ ತರಹ ಮಾಡಿದ ಎಡಬಿಡಂಗಿ ಆಟಗಳೇನು, ಅಪರಾಧಿ ಎಲ್ಲಿ ಸಿಕ್ದ, ಕೇಸು ಹೇಗೆಲ್ಲಾ ಉದ್ದುದ್ದ ವರ್ಷ ವರ್ಷಗಳನ್ನೇ ಉರುಳಿಸಿತು, ಸಾಕ್ಷ್ಯಗಳೇನು ಎಲ್ಲಾ ಹೀಗೆ ಕೊಲೆ ಬೆಳಕಿಗೆ ಬಂದಲ್ಲಿಂದ ಅಪರಾಧಿಗೆ ಎಂಟೂ ವರೆ ವರ್ಷ ಕೋರ್ಟು ಕತೆ ಕೇಳಿ ಗಲ್ಲು ನೀಡಿದವರೆಗಿನ ಪೂರ್ತಿ ಮಾಹಿತಿಯನ್ನ ಇಲ್ಲಿ ಹೇಳ್ತಾ ಹೋಗಿದ್ದಾರೆ” ಎನ್ನುತ್ತಾರೆ ಪ್ರಸಾದ್. ಅವರು ಡಾ ಡಿ.ವಿ. ಗುರುಪ್ರಸಾದ್ ಅವರ ‘ತಂದೂರ್ ಮರ್ಡರ್’ ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.
ಕೃತಿ: ತಂದೂರ್ ಮರ್ಡರ್
ಇಂಗ್ಲಿಷ್ ಮೂಲ: ಮ್ಯಾಕ್ಸ್ ವೆಲ್ ಪೆರೇರಾ
ಕನ್ನಡ ಭಾಷಾಂತರ: ಡಾ ಡಿ.ವಿ. ಗುರುಪ್ರಸಾದ್
ಪ್ರಕಾಶನ: ಸಪ್ನ ಪ್ರಕಾಶನ
ತಂದೂರ್ ಒಲೆಯಲ್ಲಿ ಬೇಯ್ತಾ ಇರೋ ಕೊಲೆಯಾದ ಹೆಣ್ಣಿನ ದೇಹ. ಬೀಟಿಗೆ ಬಂದ ಕಾನ್ಸ್ಟೇಬಲ್ ಮತ್ತು ಹೋಮ್ ಗಾರ್ಡ್ ಕಣ್ಣಿಗೆ ಅರೆಸರಕಾರಿ ಹೋಟೆಲಿನ ಒಲೆ ದಗದಗ ಉರಿಯೋದು ಕಾಣಿಸಿ ಎರಡು ಸಾರಿ ವಿಚಾರಿಸೋಕೆ ಹೋದ್ರೂ ಸೆಕ್ಯುರಿಟಿಗಳು ಬಿಡದೆ, ಹಿಂದಿನಿಂದ ಕಾಂಪೌಂಡು ಹಾರಿ ಒಳಗೆ ನುಗ್ಗಿ ಬಯಲು ಮಾಡಿದ ಪ್ರಕರಣ ದೇಶಾನ ರೊಚ್ಚಿಗೆಬ್ಬಿಸಿತು. ಅವರಿಗೆ ಪ್ರಮೋಷನ್ ಸಿಗೋವಂತೆ ಮಾಡ್ತು.
ಕಾಂಗ್ರೆಸ್ಸಿನ ಪಕ್ಷಕ್ಕೆ ಸೇರಿದ ಯುವ ರಾಜಕಾರಣಿ ಕೊಲೆಗೆ ಕಾರಣಿ. ಆದ್ರೆ ಪರಾರಿ. ಕೊಲೆ ಹೇಗಾಯ್ತು, ಹೇಗೆ ಪತ್ತೆ ಆಯ್ತು, ವಿಚಾರಣೆ ಹೇಗೆಲ್ಲಾ ನಡೀತು, ಮೊದಲು ಪೋಸ್ಟ್ ಮಾರ್ಟಂ ಮಾಡಿದ ಸಾರಂಗಿ ಕೋಡಂಗಿ ತರಹ ಮಾಡಿದ ಎಡಬಿಡಂಗಿ ಆಟಗಳೇನು, ಅಪರಾಧಿ ಎಲ್ಲಿ ಸಿಕ್ದ, ಕೇಸು ಹೇಗೆಲ್ಲಾ ಉದ್ದುದ್ದ ವರ್ಷ ವರ್ಷಗಳನ್ನೇ ಉರುಳಿಸಿತು, ಸಾಕ್ಷ್ಯಗಳೇನು ಎಲ್ಲಾ ಹೀಗೆ ಕೊಲೆ ಬೆಳಕಿಗೆ ಬಂದಲ್ಲಿಂದ ಅಪರಾಧಿಗೆ ಎಂಟೂ ವರೆ ವರ್ಷ ಕೋರ್ಟು ಕತೆ ಕೇಳಿ ಗಲ್ಲು ನೀಡಿದವರೆಗಿನ ಪೂರ್ತಿ ಮಾಹಿತಿಯನ್ನ ಇಲ್ಲಿ ಹೇಳ್ತಾ ಹೋಗಿದ್ದಾರೆ.
ಪುಸ್ತಕ ಸರಳವಾಗಿ ಓದಿಸಿಕೊಂಡು ಹೋಗುತ್ತೆ. ಚೆನ್ನಾಗಿದೆ. ಜೈ.
- ಪ್ರಸಾದ್
"ಇದ್ದ ಉತ್ತಮ ನೌಕರಿಯ ಹಂಗ ತೊರೆದು ಶಿಕ್ಷಣ ಸಂಸ್ಥೆ ಆರಂಭಿಸಿದಾಗ, ತಮ್ಮವರೇ ತೊಡಕಾದಾಗ ಆದ ನೋವು, ಹಿಂಸೆ ಅಷ್ಟಿಷ್...
"ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಚರಿತ್ರೆಗಳಿಗೆ ಒಂದು ಶತಮಾನದ ಇತಿಹಾಸವಿದೆ. ಅದು ಜೀವನ ಚರಿತ್ರೆ ಅಥವಾ ಆತ...
"ಲೇಖಕರ ಕಲ್ಪನೆಯ ಮೂಸೆಯಲ್ಲಿ ಅವರು ಕಂಡು ಕೇಳಿದ. ಓದಿ ತಿಳಿದ, ನೋಡಿ ಅನುಭವಿಸಿದ್ದು ಸೇರಿದಂತೆ ಹಲವು ರೀತಿಯಲ್ಲಿ ...
©2024 Book Brahma Private Limited.