ಸಾಮಾನ್ಯ ಓದುಗರನ್ನೊಳಗೊಂಡಂತೆ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಅನುಕೂಲವಾಗುವ ಕೃತಿಯಿದು


“ಈ ಪುಸ್ತಕಗಳು ಸ್ನಾತಕ ಹಾಗೂ ಸ್ನಾತಕೋತ್ತರ ತರಗತಿಗಳಿಗೆ ಪಠ್ಯಪುಸ್ತಕಗಳಾಗಿ ನಿಗದಿಯಾಗಿರುವುದು ಇವುಗಳ ಮೌಲ್ಯಕ್ಕೆ ಸಾಕ್ಷಿಯಾಗಿದೆ” ಎನ್ನುತ್ತಾರೆ ಪ್ರೊ. ದಯಾನಂದ ಅಗಸರ ಕುಲಪತಿಗಳು. ಅವರು ಡಾ. ಎಂ.ಬಿ. ಕಟ್ಟಿ ಅವರಕಳೆದ ಕಾಲ ನಡೆದ ದೂರ’ ಆತ್ಮಕಥನಕ್ಕೆ ಬರೆದ ಸಂಪಾದಕೀಯ ನಿಮ್ಮ ಓದಿಗಾಗಿ.

ವಿಶ್ವವಿದ್ಯಾಲಯಕ್ಕೆ ಅತ್ಯುತ್ತಮವಾದ ನಾಲ್ಕು ಅಂಗಗಳಿವೆ. ಬೋಧನಾಂಗ, ಆಡಳಿತಾಂಗ, ಪರೀಕ್ಷಾಂಗ, ಪ್ರಸಾರಾಂಗ ಈ ಅಂಗಗಳು ಬಹಳ ಮುಖ್ಯವಾಗಿವೆ. ಇದರಲ್ಲಿ ಯಾವುದೇ ಅಂಗವಿಕಲತೆಯನ್ನು ಅನುಭವಿಸಬಾರದೆಂಬ ಕಾರಣಕ್ಕಾಗಿ ಪ್ರತಿಯೊಬ್ಬ ಅಧ್ಯಾಪಕ, ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿ, ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನಾ ಚಟುವಟಿಕೆಗಳ ಮೂಲಕ, ವಿಶ್ವವಿದ್ಯಾಲಯದ ಜ್ಞಾನ ಕ್ಷಿತಿಜವನ್ನು ವಿಸ್ತರಿಸುವುದು ಮತ್ತು ಜ್ಞಾನವನ್ನು ಪ್ರಸಾರಗೊಳಿಸುವುದು ನಮ್ಮ ವಿಶ್ವವಿದ್ಯಾಲಯದ ಕರ್ತವ್ಯವಾಗಿದೆ. ನಮ್ಮ ವಿಶ್ವವಿದ್ಯಾಲಯದ ಒಂದು ಪ್ರಮುಖ ಭಾಗವಾದ ಪ್ರಸಾರಾಂಗವು ತನ್ನ ಕರ್ತವ್ಯವನ್ನು ತೃಪ್ತಿಕರವಾಗಿ ಮಾಡುತ್ತ ಬಂದುದಲ್ಲದೆ ಸ್ನಾತಕ ಹಾಗೂ ಸ್ನಾತಕೋತ್ತರ ತರಗತಿಗಳ ಪಠ್ಯಪುಸ್ತಕಗಳನ್ನು ಈ ಬಾರಿ ಹೊಸ ಬದಲಾವಣೆಯೊಂದಿಗೆ ಟೆಂಡರ್ ಮೂಲಕ ಸ್ಥಳೀಯ ಪ್ರಕಾಶಕರಾದ ಶ್ರೀ ಬಸವರಾಜ ಜಿ. ಕೊನೇಕ ಅವರಿಗೆ ನೀಡಲಾಗಿದೆ. ಪ್ರಸಾರಾಂಗದ ಕಾರ್ಯವ್ಯಾಪ್ತಿ ಈಗ ಸೂಕ್ತ ಬದಲಾವಣೆಯೊಂದಿಗೆ ಪ್ರಗತಿ ಹಾಗೂ ಸುಧಾರಣೆ ಕಂಡುಕೊಂಡಿದೆಯೆಂಬುದಕ್ಕೆ ಬದಲಾವಣೆಗೊಂಡ ಈ ಕಾರ್ಯಶೈಲಿ ಸಾಕ್ಷಿಯಾಗಿದೆ.

ಸಾಮಾನ್ಯ ಓದುಗರನ್ನೊಳಗೊಂಡಂತೆ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಅನುಕೂಲವಾಗುವಂತೆ ಕನ್ನಡ ಅಧ್ಯಯನ ಸಂಸ್ಥೆಯು ಕನ್ನಡ ಸಾಹಿತ್ಯದ ಪ್ರಮುಖ ಕೃತಿಗಳನ್ನು ಸಂಪಾದಿಸಿ, ಪಠ್ಯಪುಸ್ತಕಗಳ ಮಾಲೆಯ ಅಡಿಯಲ್ಲಿ ಓದುಗರ ಕೈಗೆ ನೀಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ಈ ಪುಸ್ತಕಗಳು ಸ್ನಾತಕ ಹಾಗೂ ಸ್ನಾತಕೋತ್ತರ ತರಗತಿಗಳಿಗೆ ಪಠ್ಯಪುಸ್ತಕಗಳಾಗಿ ನಿಗದಿಯಾಗಿರುವುದು ಇವುಗಳ ಮೌಲ್ಯಕ್ಕೆ ಸಾಕ್ಷಿಯಾಗಿದೆ. ರಾಜ್ಯದ ಹಾಗೂ ಹೊರ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳಲ್ಲಿಯೂ ಇವುಗಳನ್ನು ಪಠ್ಯಗಳನ್ನಾಗಿ ಓದಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪಠ್ಯಪುಸ್ತಕಗಳ ಜೊತೆಗೆ ಸಾಹಿತ್ಯ ಹಾಗೂ ಜಾನಪದಕ್ಕೆ ಸಂಬಂಧಿಸಿದ ಮಹತ್ವದ ಪುಸ್ತಕಗಳನ್ನು ಸಿದ್ಧಪಡಿಸಿಕೊಡುತ್ತಿರುವ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ಪ್ರಾಧ್ಯಾಪಕರು, ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎಚ್.ಟಿ. ಪೋತೆ ಅವರಿಗೆ ಧನ್ಯವಾದಗಳು. ಕಳೆದ ಕಾಲ ನಡೆದ ದೂರ (ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರ ಆತ್ಮಕಥನ) ಪುಸ್ತಕ ರಚಿಸಿದ ಡಾ. ಎಂ.ಬಿ. ಕಟ್ಟಿ ಅವರಿಗೂ, ಅಂದವಾಗಿ ಮುದ್ರಿಸಿ, ಪ್ರಕಟಿಸುತ್ತಿರುವ ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಮಾಲೀಕರಾದ ಬಸವರಾಜ ಜಿ. ಕೊನೇಕ ಅವರಿಗೆ ಕೃತಜ್ಞತೆಗಳು.

- ಪ್ರೊ. ದಯಾನಂದ ಅಗಸರ ಕುಲಪತಿಗಳು
ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ

MORE FEATURES

ಮರೆತು ಹೋದ ವಾಸ್ತವಗಳಿಗೆ ಬರಹದ ರೂಪ ಕೊಟ್ಟಿರುವುದು ಆಕಸ್ಮಿಕ: ಶ್ರೀಧರ್ ನಾಯಕ್

21-10-2024 ಬೆಂಗಳೂರು

“ನಾನು ಹತ್ತು ಹಲವು ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಪುಸ್ತಕಗಳ ಓದು, ಪ್ರವಾಸ, ಛಾಯಾಚಿತ್ರಗ್ರಹಣ, ಇಂಗ್ಲಿ...

'ಸದರಬಜಾ‌ರ್' ಕಾದಂಬರಿಯ ವಸ್ತು ಎಂಬತ್ತನೆಯ ದಶಕದ್ದು

21-10-2024 ಬೆಂಗಳೂರು

“ಬೃಹತ್ ಕಾದಂಬರಿಯ ರಚನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವಂತೆ, ಟೆಸ್ಟ್ ಕ್ರಿಕೆಟ...

ಹೂವು-ಹಣ್ಣು-ಹಸಿರು ತರಕಾರಿಗಳಿಲ್ಲದ ಜೀವನ ಬೇಗೆಯ ಬರಡು..

20-10-2024 ಬೆಂಗಳೂರು

“ಕಾಡು ನಾಡಾಗುತ್ತಿದೆ, ಹೊಲಗದ್ದೆಗಳು ನಿವೇಶನಗಳಾಗುತ್ತಿವೆ. ನೆಲದ ಕಸುವು ಇಲ್ಲವಾಗುತ್ತಿದೆ. ಬಗೆಬಗೆಯ ಹಣ್ಣು, ತ...