ಸಮಾಜೋನ್ನತಿಯಲ್ಲಿ ದಾಸವರೇಣ್ಯರ ಕೊಡುಗೆ ಅಪಾರ; ಸುಗುಣೇಂದ್ರ ತೀರ್ಥಶ್ರೀಪಾದರು

Date: 13-11-2024

Location: ಬೆಂಗಳೂರು


 

" ಉಡುಪಿಯ ಪರ್ಯಾಯ ಪುತ್ತಿಗೆ ಮಠದಲ್ಲಿ ಶ್ರೀ ವಿಜಯ ದಾಸರ ಆರಾಧನಾಂಗವಾಗಿ ಶ್ರೀನಿವಾಸ ಉತ್ಸವ ಬಳಗದವರಿಂದ ಮೂರು ದಿನ ನಡೆದ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ ಸಂಪನ್ನ "

 

 

 

ಸಮಾಜೋನ್ನತಿಯಲ್ಲಿ ದಾಸವರೇಣ್ಯರ ಕೊಡುಗೆ ಅಪಾರ – ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರು.

 

 

 

 ಹರಿದಾಸರ ಅಚ್ಚುಮೆಚ್ಚಿನ ಕೃಷ್ಣನ ನೆಲವೀಡಾದವೀಡಾದ ಉಡುಪಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನ, ಬೆಂಗಳೂರಿನ ಶ್ರೀ ಶ್ರೀನಿವಾಸ ಉತ್ಸವ ಬಳಗ ಸಂಯುಕ್ತ ಆಶ್ರಯದಲ್ಲಿ ಶ್ರೀ ವಿಜಯದಾಸರ ಆರಾಧನಾ ಅಂಗವಾಗಿ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ,  ಶ್ರೀನಿವಾಸ ಕಲ್ಯಾಣ ಮಹೋತ್ಸವ, ಸಹಸ್ರ ಕಂಠ ಗಾಯನ - ಭಜನಾ ಮಂಡಳಿಗಳ ಸಮಾವೇಶ, ಮಧ್ವ ಪುರಂದರ ಪ್ರಶಸ್ತಿ ಪ್ರದಾನ  ಮೊದಲಾದ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು..

 

 

 

ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತ ಹರಿದಾಸರು ಭಾವದ ಸಿರಿನುಡಿ ಸಮಾಜಕ್ಕೆ ಪೂರಕವಾಗಿದೆ .ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅವಿಭಕ್ತ ಕುಟುಂಬಗಳಿಲ್ಲ ಅಲ್ಲಿಯವರಿಗೆ ನಮ್ಮ ರಾಷ್ಟ್ರದ ಸುಂದರ ಸಂಸ್ಕೃತಿಯ ಚಿತ್ರಣ ಬಹು ಮೆಚ್ಚುಗೆ ನೀಡಿದೆ. ಇಂತಹ ಸುಂದರ ಸಮಾಜಕ್ಕೆ ದಿಕ್ಸೂಚಿ  ಸಾಹಿತ್ಯ ಪ್ರಕಾರವನ್ನು ನೀಡಿದ ದಾಸರು ಹಾಗೂ ಶರಣರು ಬಹುದೊಡ್ಡ ಕಾರ್ಯ ಮಾಡಿದ್ದಾರೆ. ಸಮಾಜೋನ್ನತಿಯಲ್ಲಿ ದಾಸವರೇಣ್ಯರ ಕೊಡುಗೆ ಅಪಾರ ಎಂದು ಅಭಿಪ್ರಾಯಪಟ್ಟರು.

 

ಕಿರಿಯ ಪಟ್ಟ ಶ್ರೀಸುಶ್ರೀಂದ್ರ  ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಬೆಂಗಳೂರು ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ದಿಕ್ಸೂಚಿ ಭಾಷಣದಲ್ಲಿ , ದಾಸರು ಹಾಗೂ ಶರಣರು ಎಲ್ಲ ಜಾತಿ ಧರ್ಮ ಗಳು ಸುಂದರ ಸಮಾಜ ಕಟ್ಟುವಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕು. ಮನಸ್ಸು ಶುದ್ಧವಾಗಿರಬೇಕು ಎಂಬ ವಿಷಯಕ್ಕೆ ಗಂಗೆಯ ಉದಾಹರಣೆ ನೀಡಿದರು ,ಹಿಂದು ಧರ್ಮ ರಕ್ಷಣೆಯಲ್ಲಿ ದಾಸರ ಪಾತ್ರ ಹಿರಿದು , ನಮ್ಮ ಮುಂದಿನ ಪೀಳಿಗೆಗಾಗಿ ಮತಾಂತರ ಷಡ್ಯಂತರ ತಡೆಯುವುದಕೋಸ್ಕರ ದಾಸಸಾಹಿತ್ಯವನ್ನು ರಕ್ಷಿಸಲೇಬೇಕಾದ ಅಗತ್ಯವಿದೆಎಂದು ವಿವರಿಸಿದರು. 

 

ಖ್ಯಾತ ದಾಸ ಸಾಹಿತ್ಯ ಸಂಶೋಧಕ ಡಾ. ಎ.ಬಿ. ಶ್ಯಾಮಾಚಾರ್ಯರು ಸಮ್ಮೇಳನದ  ಸರ್ವಾಧ್ಯಕ್ಷರಾಗಿದ್ದರು.ಅವರು ರಚಿಸಿರುವ 'ವಿಜಯ ಚಿಂತನಾಮೋದ'  ಹಾಗು ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ಬಿ ಗೋಪಾಲಾಚಾರ್ಯ ಪ್ರಧಾನ ಸಂಪಾದಕತ್ವದಲ್ಲಿ ಮತ್ತು ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಸಂಪಾದಕತ್ವದಲ್ಲಿ  ಸಮ್ಮೇಳನದಲ್ಲಿ ಮಂಡಿಸಿದ  ಪ್ರಬಂಧಗಳ ಸಂಕಲನ 'ವಿಜಯ ವಿಠಲ' ಕೃತಿಗಳು ,ಸಮ್ಮೇಳನದ ಅಂಗವಾಗಿ ಹೊರತಂದ ಕೋಲಾರ ವಾಣಿ ದಿನಪತ್ರಿಕೆ ಮತ್ತು  ಸರ್ವಜ್ಞ ಮಾಸ ಪತ್ರಿಕೆಯ ವಿಶೇಷ ಸಂಚಿಕೆ ಲೋಕಾರ್ಪಣೆ ನಡೆಯಿತು. 

 

ಬೆಂಗಳೂರಿನ ಖ್ಯಾತ ವೈದ್ಯ ಡಾ.ವೇಣುಗೋಪಾಲ್ ವಿಶೇಷ ಆಹ್ವಾನಿತ ರಾಗಿ ವೇದಿಕೆಯಲ್ಲಿದ್ದರು .ಸೇಡಂನ  ದಾಸಧೇನು ಟ್ರಸ್ಟ್ ಅಧ್ಯಕ್ಷ ಡಾ.ವಾಸುದೇವ ಅಗ್ನಿಹೋತ್ರಿ ಆಶಯ ಭಾಷಣಮಾಡುತ್ತ  ಕರ್ನಾಟಕದಲ್ಲಿರುವ ಎಲ್ಲಾ ದಾಸಸಾಹಿತ್ಯ ಸಂಘಗಳ ಒಕ್ಕೂಟ ಒಂದು ಗೂಡಿಸಬೇಕು ದಾಸಸಾಹಿತ್ಯದ ವಿಶ್ವರೂಪ ತೋರ್ಪಡಿಸಬೇಕು ಎಂದರು.

 

ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಡಾ.ಮುದ್ದು ಮೋಹನ್ ರವರಿಂದ  ದಾಸವಾಣಿ ಕಾರ್ಯಕ್ರಮ ನಡೆಯಿತು.  ನಂತರ ಸಮ್ಮೇಳನ ದಲ್ಲಿ ನೊಂದಾಯಿಸಿಕೊಂಡ ಪ್ರತಿನಿಧಿ ಗಳಿಂದ ಪ್ರಬಂಧ ಮಂಡನೆ- ವಿಚಾರಗೋಷ್ಠಿ, ಸಂಜೆ ಶ್ರೀಶೈಲ ಪ್ರಭ ಕನ್ನಡ ವಿಭಾಗದ ವಿದ್ವಾನ್ ಗೊಗ್ಗಿ ಬಲರಾಮಚಾರ್ಯರಿಂದ ಮತ್ತು ಗುಂಡೂರು ಪವನ ಕುಮಾರ್ ಗಂಗಾವತಿ ರವರಿಂದ ವಿಜಯ ದಾಸರ ಕುರಿತು ಧಾರ್ಮಿಕ ಪ್ರವಚನ ಏರ್ಪಡಿಸಲಾಗಿತ್ತು..

 

 

 

ಶ್ರೀನಿವಾಸ ಉತ್ಸವ ಬಳಗದ ತಾಯಲೂರು ವಾದಿರಾಜ ನೇತೃತ್ವದಲ್ಲಿ ಕಲಿಯುಗದ ಆರಾಧ್ಯ  ದೈವ ತಿರುಮಲ ಶ್ರೀನಿವಾಸನ ವೈಭವದ ಕಲ್ಯಾಣ ಮಹೋತ್ಸವದಲ್ಲಿ ಮೇಘಾಲಯದ ರಾಜ್ಯಪಾಲರಾದ ಸಿ ಎಚ್ ವಿಜಯಶಂಕರ್ ಪಾಲ್ಗೊಂಡರು.ಡಾ. ಬಿ ಗೋಪಾಲಾಚಾರ್ಯರ ವ್ಯಾಖ್ಯಾನ,ವಿದ್ವಾನ್ ಡಾ.ರಾಯಚೂರು ಶೇಷಗಿರಿ ದಾಸ್ ಮತ್ತು ವಿದುಷಿ ಶುಭ ಸಂತೋಷ  ರವರ ಗಾಯನದೊಂದಿಗೆ . ಕಲಬುರ್ಗಿಯ ಉದ್ಯಮಿ ಸಂಜೀವ ಗುಪ್ತ, ದಾಸ ಸೌರಭದ  ಪಾಂಡುರಂಗ ರಾವ್ ಕಂಪ್ಲಿ ಮತ್ತು ಕೆ ಆರ್ ಗುರುರಾಜ ರಾವ್ ಕುಟುಂಬದವರು ವಿಶೇಷ ಸೇವಾಕರ್ತರಾಗಿ  ಭಾಗವಹಿಸಿದ್ದರು.

 

 

 

  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು, ಉಡುಪಿ  ತಾಲೂಕು ಇವರ ಸಹಯೋಗದಲ್ಲಿ ವಿದುಷಿ ಉಷಾ ಹೆಬ್ಬಾರ್ ನೇತೃತ್ವದಲ್ಲಿ ಸಹಸ್ರ ಕಂಠ ಗಾಯನ ಮತ್ತು ಭಜನಾ ಮಂಡಳಿಗಳ  ಸಮಾವೇಶ ಹಮ್ಮಿಕೊಳ್ಳಲಾಗಿತ್ತು.ಉಷಾ ಹೆಬ್ಬಾರ್ ರವರಿಗೆ ಹರಿದಾಸಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು,. ಇದೇ  ಸಂದರ್ಭದಲ್ಲಿ ಸಾಫಲ್ಯ ಮೂವೀಸ್ ನಿರ್ಮಾಣದ ಭಕ್ತಿ ಪ್ರಧಾನ 'ಸಂಕೀರ್ತನ ' ಚಲನಚಿತ್ರ ಟೀಸರ್ ಬಿಡುಗಡೆಗೊಂಡಿತು. ನಿರ್ಮಾಪಕ ಪದ್ಮಕಲಾ ಗುಂಡು ರಾವ್, ನಿರ್ದೇಶಕ ಕಲಾ ಗಂಗೋತ್ರಿ ಮಂಜು, ಸಂಭಾಷಣಕಾರ ಜೆ ಎಂ ಪ್ರಹ್ಲಾದ್, ಸಂಗೀತ ನಿರ್ದೇಶಕ ಪ್ರವೀಣ್ ಡಿ ರಾವ್ ಹಾಗೂ ಚಿತ್ರ ತಂಡ ಭಾಗವಹಿಸಿದ್ದರು. 

 

 

 

 ಶ್ರೀ ವಿಜಯ ದಾಸರ ಆರಾಧನಾ ಮಹೋತ್ಸವದಂದು ನಗರ ಸಂಕೀರ್ತನೆ ಯಾಯೀವಾರ ನಡೆದು ಸಂಜೆ ರಥ ಬೀದಿಯಲ್ಲಿ ಶ್ರೀ ವಿಜಯದಾಸರ ಭಾವಚಿತ್ರದ ಶೋಭಾ ಯಾತ್ರೆ, ಪರ್ಯಾಯ ಶ್ರೀಪಾದದ್ವಯರ ಮತ್ತು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷ, ಹಿರಿಯ ವೈದ್ಯ -ಕಲಾಪೋಷಕ ಡಾ. ಎಂ ಆರ್ ವಿ ಪ್ರಸಾದ್ ರವರಿಗೆ ಮಧ್ವ ಪುರಂದರ ಪ್ರಶಸ್ತಿ ಪ್ರದಾನ, ಡಾ.ವಿದ್ಯಾಭೂಷಣರು ಪುರಂದರದಾಸರಾಗಿ ಅಭಿನಯಿಸಿರುವ ಕರಿಗಿರಿ ಫಿಲಂಸ್ ನ ಸಂಗೀತ ಪ್ರಧಾನ ಚಲನಚಿತ್ರ ‘ಹರಿದಾಸರ ದಿನಚರಿ’ಯ ಟ್ರೈಲರ್ ಬಿಡುಗೊಂಡಿತು. 

 

ಮೈಸೂರು ವಿಶ್ವವಿದ್ಯಾಲಯ ಪ್ರಸಾರಂಗದ ಸಹ ನಿರ್ದೇಶಕ ಡಾ. ಬಿ ಎಸ್ ಅನಿಲ ಕುಮಾರ ಬೊಮ್ಮಘಟ್ಟ  ರವರು ಸಮಾರೋಪ ನುಡಿಗಳನ್ನಾಡಿದರು.. ಭಾರತ ವಿಕಾಸ ಸಂಗಮ ಮಹಿಳಾ ವಿಭಾಗದ ಹುಬ್ಬಳ್ಳಿಯ ರೂಪಾ ಢವಳಗಿ,ಹರಿದಾಸ ಸಂಪದ ಟ್ರಸ್ಟ್ ಕಾರ್ಯದರ್ಶಿ ಮಧುಸೂದನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಈ ಮೂರು ದಿನಗಳ ಸಮಾವೇಶದಲ್ಲಿ ವಿದ್ವಾಂಸರಾದ ಡಾ. ಎನ್ ಕೆ ರಾಮಶೇಷನ್, ಪರಶುರಾಮ ಬೆಟಗೇರಿ, ವಾರುಣಿ ಜಯತೀರ್ಥ, ಲಕ್ಷ್ಮಿಕಾಂತ್ ಮೋಹರೀರ, ಮೊದಲಾದರು ಭಾಗವಹಿಸಿದ್ದರು

MORE NEWS

ಈ ಕಥಾ ಸಂಕಲನದಲ್ಲಿ ದಟ್ಟ ಕಾಡಿನ ರೌದ್ರ ವರ್ಣನೆ ಓದುಗರನ್ನು ಮೋಹಗೊಳಿಸುತ್ತದೆ‌

22-10-2024 ಬೆಂಗಳೂರು

“ಈ ಸಂಕಲನ ಮಲೆಯ ಮಹದೇಶ್ವರದ ತಪ್ಪಲಿನ ಗುಡ್ಡಗಾಡು ಜನರ ಬದುಕುಗಳ ಚಿತ್ರಣಗಳನ್ನು ಬಲು ನಿಖರವಾಗಿ ಕೊಡುತ್ತದೆ&rdqu...

ಈ ಕೃತಿ ಶ್ರೀಧರ ನಾಯಕ್ ಅವರ ಆತ್ಮಚರಿತ್ರೆಯ ಆಯ್ದ ಭಾಗವಿದ್ದಂತೆ

15-10-2024 ಬೆಂಗಳೂರು

“ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಎನ್ನುವುದು ವಾಸ್ತವಾಂಶಗಳನ್ನು ಜಾಗರೂಕವಾಗಿ, ನಿಖರವಾಗಿ ಮರು ಸೃಷ್ಟಿಸುವ ಕಲೆ&...

ಈ ಕವನ ಸಂಕಲನದಲ್ಲಿ ಬೇರೆ ಬೇರೆ ಆಸಕ್ತಿಯ ವಿಚಾರಗಳನ್ನು ಕಾಣಬಹುದು

15-10-2024 ಬೆಂಗಳೂರು

“ಭೂತಾಯಿಯ ಹೊರತಾಗಿ ಬಂದ ಕವನಗಳನ್ನೆಲ್ಲಾ ಸೇರಿಸಿ ಪ್ರತ್ಯೇಕವಾದ ಒಂದು ಕವನ ಸಂಕಲನವನ್ನು ಹೊರ ತರುವ ಆಲೋಚನೆ ಮನಸ್...