10 ಹಿರಿಯ ಪತ್ರಕರ್ತರಿಗೆ ಟಿಎಸ್‍ಆರ್ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ

Date: 22-09-2024

Location: ಬೆಂಗಳೂರು


ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕನ್ನಡ ಪತ್ರಿಕೋದ್ಯಮದಲ್ಲಿ ಉನ್ನತ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ಕೊಡಮಾಡಲಾಗುವ ಟಿ.ಎಸ್.ರಾಮಚಂದ್ರರಾವ್ ( ಟಿಎಸ್ ಆರ್) ಪ್ರಶಸ್ತಿ ಹಾಗೂ ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹ ಕಟ್ಟಿ ಬೆಳೆಸಿದ ಪತ್ರಕರ್ತರಿಗೆ ನೀಡುವ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪ್ರಕಟಿಸಿದೆ. 

2019 ರಿಂದ 2023ನೇ ಸಾಲಿನ ಒಟ್ಟು 5 ವರ್ಷಗಳ ಅವಧಿಯ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಟಿಎಸ್ ಆರ್ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರ ಪಟ್ಟಿ ಹೀಗಿದೆ.

1. ಹಿರಿಯ ಪತ್ರಕರ್ತಶಿವಾಜಿ ಎಸ್. ಗಣೇಶನ್ (2019ನೇ ಸಾಲಿನ ಪ್ರಶಸ್ತಿ) 

2. ಶ್ರೀಕಾಂತಾ ಚಾರ್ಯ ಆರ್.ಮಣೂರ (2020)

3. ಡಾ.ಆರ್ .ಪೂರ್ಣಿಮಾ (2021)

4. ಪದ್ಮರಾಜ ದಂಡಾವತಿ (2022)

5. ಡಾ.ಸರಜೂ ಕಾಟ್ಕರ್ (2023) ಆಯ್ಕೆಗೊಂಡಿದ್ದಾರೆ.

ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರ ಪಟ್ಟಿ ಹೀಗಿದೆ: 

1.ಗದಗ-ಬೆಟಗೇರಿಯ ರಾಜೀವ್ ಕಿದಿಯೂರ (2019)

2. ಬೆಂಗಳೂರಿನ ಇಂದೂಧರ ಹೊನ್ನಾಪುರ (2020)

3. ಶಿವಮೊಗ್ಗದ ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್. ಮಂಜುನಾಥ (2021)

4. ದಕ್ಷಿಣ ಕನ್ನಡ ಜಿಲ್ಲೆಯ ಚಂದ್ರಶೇಖರ್‌ಪಾಲೆತ್ತಾಡಿ (2022)

5. ಕಲಬುರಗಿ ಜಿಲ್ಲೆಯ ಅಫಜಲಪುರದ ಶಿವಲಿಂಗಪ್ಪ ದೊಡ್ಡಮನಿ (2023)

ಟಿಎಸ್ ಆರ್ ಪತ್ರಿಕೋದ್ಯಮ ಪ್ರಶಸ್ತಿ ಮತ್ತು ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಯು ತಲಾ 2 ಲಕ್ಷ ರೂ.ನಗದು ಬಹುಮಾನವನ್ನು ಒಳಗೊಂಡಿದ್ದು, ಹೈಕೋರ್ಟ್ ನಿವೃತ್ತ ನ್ಯಾ. ಪಿ.ಎನ್.ದೇಸಾಯಿ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿ ಘೋಷಿಸಿದೆ. 

MORE NEWS

ಅಪರಾಧ ಪತ್ತೆಗಿಂತ ಅಪರಾಧ ತಡೆ ಬಹು ಮುಖ್ಯ; ಡಿ.ವಿ. ಗುರುಪ್ರಸಾದ್

21-06-2024 ಬೆಂಗಳೂರು

‘ಹೇಗೆ ಅಪರಾಧಗಳು ನಡೆಯುತ್ತವೆ ಎಂದು ಗೊತ್ತಾದರೆ ನಾವು ಆ ರೀತಿಯ ಅಪರಾಧಗಳಿಗೆ ಹೇಗೆ ಬಲಿಯಾಗದಿರಬಹುದು ಎಂಬ ತಿಳುವ...

ಈ ಕೃತಿ ಪ್ರಕಾಶ ಭಟ್ ಅವರ ಮೂರು ದಶಕಗಳ ಅನುಭವದ ಮೂಸೆಯಿಂದ ಬಂದಿರುವ ಪುಸ್ತಕ; ತೇಜಸ್ವಿ ಕಟ್ಟಿಮನಿ

21-06-2024 ಬೆಂಗಳೂರು

‘ಗ್ರಾಮ-ವಿಕಾಸದ ತಂತ್ರಗಳ ಜೊತೆ ಜೊತೆಯಲ್ಲಿ ಅದರಲ್ಲಿ ತೊಡಗಿರುವವರು ಹೇಗಿರಬೇಕು ಎನ್ನುವುದನ್ನು ಉದಾಹರಣೆಗಳೊಂದಿಗ...

ಸವಿರಾಜ್ ಆನಂದೂರು ಅವರ ‘ಗಂಡಸರನ್ನು ಕೊಲ್ಲಿರಿ’ ಕವನ ಸಂಕಲನ ಲೋಕಾರ್ಪಣೆ

10-06-2024 ಬೆಂಗಳೂರು

ಬೆಂಗಳೂರು: ಸವಿರಾಜ್ ಆನಂದೂರು ಅವರ ‘ಗಂಡಸರನ್ನು ಕೊಲ್ಲಿರಿ’ ಕವನ ಸಂಕಲನವನ್ನು 2024 ಜೂನ್ 09ರಂದು ಕಲಾಗ್...