Date: 20-01-2023
Location: ಜೈಪುರ
ಜೈಪುರ ಸಾಹಿತ್ಯ ಉತ್ಸವದಲ್ಲಿ ಪತ್ರಕರ್ತ, ನಿರೂಪಕ ಹಾಗೂ ಲೇಖಕ ರವೀಶ್ ಕುಮಾರ್ ಭಾಗವಹಿಸಿದ್ದಾರೆ. ಆತಂಕದ ಸ್ವರೂಪ ಹಾಗೂ ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಲಕ್ಷಣಗಳ ಕುರಿತು ಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ವೃತ್ತಿ ಹಾಗೂ ಬದುಕಿನ ನಂಬಿಕೆಗಳು ಮತ್ತು ಸ್ಪೂರ್ತಿದಾಯಕ ಸಂಗತಿಗಳು ವೃತ್ತಿಯ ಮೇಲೆ ಬೀರುವ ಫಲಿತಾಂಶಗಳ ಕುರಿತು ಸುದೀರ್ಘ ಭಾಷಣ ಮಾಡಿದ್ದಾರೆ. ಸರ್ಕಾರ, ಬಿಜೆಪಿ, ಮಾಧ್ಯಮಗಳು ಮತ್ತು ಕೆಲವು ಪ್ರಮುಖರನ್ನು ಗುರಿಯಾಗಿಸಿ ಲಘುವಾಗಿ ತಿವಿದರು.
ರವೀಶ್ ಮಾತನಾಡಿ, ಪ್ರಸ್ತುತ ಪ್ರತಿ ದಿನ ದುಡಿದು ಹೊಟ್ಟೆ ತುಂಬಿಸಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ನಾವು ಕೇವಲ ಮತದಾರರಲ್ಲ. ಯಾರನ್ನು ಚುನಾಯಿಸುತ್ತೇವೋ ಅವರನ್ನುಪ್ರಶ್ನಿಸುವ ಹಕ್ಕು ಕೂಡ ನಮಗಿದೆ. ಆದರೆ, ನಿರ್ಭಯವಾಗಿ ಪ್ರಶ್ನೆ ಕೇಳಬೇಕು ಎಂದರು.
ಅಪರಾಧಿಗಳಿಗೆ ಜಾಮೀನು ನೀಡಲು ನ್ಯಾಯಾಧೀಶರಿಗೂ ಭಯ, ಇದನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರೇ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಇನ್ನೂ ಹಣವಿರುವವರು ಹೆಚ್ಚು ಖರ್ಚು ಮಾಡುತ್ತಾರೆ. ಆದರೆ, ಮನಸ್ಸಿನ ಮೂಲೆಯಲ್ಲಿ ಭಯವಿದ್ದೆ ಇರುತ್ತದೆ. ಇನ್ನೂ, ಜನರಿಗೆ ನನ್ನ ಅನಿಸಿಕೆಗಳು ಇಷ್ಟವಾದರೂ ಮರುಟ್ವೀಟ್ ಮಾಡಲು ಹೆದರುತ್ತಾರೆ.
ಬಿಬಿಸಿ ಗುಜರಾತ್ ಕುರಿತು ಸಾಕ್ಷ್ಯಚಿತ್ರವನ್ನು ಮಾಡಿದಾಗ ಅದನ್ನು ಯೂಟ್ಯೂಬ್ನಲ್ಲಿ ನಿಷೇಧಿಸಲಾಯಿತು. ಸಾಮಾಜಿಕ ಮಾಧ್ಯಮದಲ್ಲಿ ನಿರ್ಬಂಧಿಸುವುದು ಯಾವ ಸಂದೇಶ ಹರಿದಾಡಿತು ಎಂಬುದನ್ನು ನೀವೇ ಆಲೋಚಿಸಬಹುದು ಎಂದ ರವೀಶ್, ಒಮ್ಮೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಹೆದ್ದರಿದ್ದಾರೆ ಎಂದು ಚಟಾಕಿ ಹಾರಿಸಿದರು.
ಈ ಗೋಷ್ಠಿಯನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಯುವಜನರು ಸೇರಿದ್ದು ವಿಶೇಷವಾಗಿತ್ತು.
ಜೈಪುರ: 17ನೇ ಆವೃತ್ತಿಯ ಸಾಹಿತ್ಯ ಉತ್ಸವಕ್ಕೆ ‘ಭಾರತದ ಪಿಂಕ್ ಸಿಟಿ’ ಎಂದೇ ಹೆಸರಾಗಿರುವ ಜೈಪುರದಲ್ಲಿ ಸಂಭ...
16ನೇ ಆವೃತ್ತಿಯ ಪ್ರತಿಷ್ಠಿತ, ಜೈಪುರ ಸಾಹಿತ್ಯ ಉತ್ಸವವು ಇದೇ 19ರಿಂದ ಆರಂಭಗೊಂಡು ಇಂದು ತೆರೆಕಂಡಿದೆ. ಐದು ದಿನಗಳ ಸಾಹಿ...
ಜೈಪುರ ಸಾಹಿತ್ಯೋತ್ಸವದ 16ನೇ ಆವೃತ್ತಿಗೆ ಸೋಮವಾರ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಈ ಬಾರಿಯ ಉತ್ಸವದಲ್ಲಿ ಹೆಚ್ಚು ಯುವ...
©2024 Book Brahma Private Limited.