Date: 18-01-2023
Location: ಬೆಂಗಳೂರು
ಜೈಪುರ ಸಾಹಿತ್ಯ ಉತ್ಸವಕ್ಕೆ ನಾಳೆ ಅದ್ಧೂರಿ ಚಾಲನೆ ದೊರೆಯಲಿದೆ. ಇದೇ 19 ರಿಂದ 23ರ ವರೆಗೆ ಭಾರತೀಯ ಭಾಷೆಗಳನ್ನು ಕೇಂದ್ರೀಕರಿಸಿದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಸಾಹಿತ್ಯ ಉತ್ಸವ ನಡೆಯಲಿದೆ. ಹದಿನಾರನೇ ಆವೃತ್ತಿಯಾಗಿದ್ದು, ಈ ಬಾರಿಯ ಸಮ್ಮೇಳನ 21 ಭಾರತೀಯ ಮತ್ತು 14 ಅಂತಾರಾಷ್ಟ್ರೀಯ ಭಾಷೆಗಳ ಗೋಷ್ಠಿಗಳನ್ನು ಒಳಗೊಂಡಿರಲಿದೆ.
ಉತ್ಸವದ ಪ್ರಮುಖ ಆಕರ್ಷಣೆಗಳು: ಹಿಂದಿ,ಉರ್ದು, ಭೋಜ್ಪುರಿ ಮತ್ತು ರಾಜಸ್ಥಾನಿ ಭಾಷೆಗಳನ್ನು ಒಳಗೊಂಡ ಗೋಷ್ಠಿಗಳು ನಡೆಯಲಿವೆ. ಗಾಯಕಿ ಲತಾ ಮಂಗೇಶ್ಕರ್ ಅವರ ಸುದೀರ್ಘ ಪ್ರಯಾಣ, ಕೆಲವು ಅಪರೂಪದ ಯಾರಿಗೂ ತಿಳಿದಿರದ ಸಂತಿಗಳು ಉತ್ಸವದ ವೇದಿಕೆಯಲ್ಲಿ ತಿಳಿಯಲಿದೆ. ಚಿತ್ರಕಥೆಗಾರ ಜಾವೇದ್ ಅಖ್ತರ್ ಮತ್ತು ನಟಿ-ಸಾಮಾಜಿಕ ಕಾರ್ಯಕರ್ತೆ ಶಬಾನಾ ಅಜ್ಮಿ, ಇತಿಹಾಸಕಾರ ರಕ್ಷಂದಾ ಜಲೀಲ್ ಅವರುಗಳ ಸಂವಾದ ನಡೆಯಲಿದೆ.
ಕಾರ್ಯಕ್ರಮದಲ್ಲಿ ಲೇಖಕಿ ಅಲ್ಕಾ ಸರೋಗಿ ಮತ್ತು ಕಾದಂಬರಿಗಾರ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಅನಾಮಿಕ ಅವರನ್ನೊಳಗೊಂಡ ಗೋಷ್ಠಿ ನಡೆಯಲಿದೆ. ಪತ್ರಕರ್ತ ನಿಶ್ತಾ ಗೌತಮ್ ಅವರೊಂದಿಗೆ ಸಂಭಾಷಣೆ ನಡೆಯಲಿದ್ದು, ಹಿಂದಿ ಸಾಹಿತ್ಯದ ಇಬ್ಬರು ದಿಗ್ಗಜರು ತಮ್ಮ ಸೃಜನಶೀಲ ಜೀವನದ ಕುರಿತು ಚರ್ಚಿಸಲಿದ್ದಾರೆ ಮತ್ತು ಅವರ ಇತ್ತೀಚಿನ ಕೃತಿಗಳನ್ನು ಓದಲಿದ್ದಾರೆ.
ಮತ್ತೊಂದು ಕಾರ್ಯಕ್ರಮದಲ್ಲಿ ಸಂಸ್ಕೃತ ವಿದ್ವಾಂಸ ಮತ್ತು ನವದೆಹಲಿಯ ಇನ್ಸ್ಟಿಟ್ಯೂಟೋ ಸೆರ್ವಾಂಟೆಸ್ನ ನಿರ್ದೇಶಕ ಆಸ್ಕರ್ ಪೂಜೋಲ್, ಭಾರತದಲ್ಲಿನ ಪೋಲೆಂಡ್ ರಾಯಭಾರಿ ಆಡಮ್ ಬುರಾಕೋವ್ಸ್ಕಿ ಹಾಗೂ ಲೇಖಕ, ಭಾರತೀಯ ರಾಜತಾಂತ್ರಿಕ ಅಭಯ್ ಕೆ. ಅವರೊಂದಿಗೆ 'ಗ್ಲೋಬಲ್ ಹಿಂದಿ' ಎಂಬ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಗೀತಾಂಜಲಿ ಶ್ರೀ, ಜೊತೆಗೆ ಅವರ ʻಡೈಸಿ ರಾಕ್ವೆಲ್ʼ ಕಾದಂಬರಿಯ ಅನುವಾದಕಿ ಡೈಸಿ ರಾಕ್ವೆಲ್ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ವಿಜೇತ ತನುಜ್ ಸೋಲಂಕಿ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಹಿಂದಿಯ ಈ ಅಧಿವೇಶನವು ಮೂಲ ಕಾದಂಬರಿಯ ಮೇಲೆ ಕೇಂದ್ರೀಕರಿಸುತ್ತಿದ್ದು, ಅದರ ಪ್ರಾಯೋಗಿಕ ಕಥೆ ಹೇಳುವಿಕೆ, ನವೀನ ಭಿನ್ನತೆಗಳು ಮುಂತಾದ ಬಗ್ಗೆ ಚರ್ಚಿಸಲಿದ್ದಾರೆ.
ಕಾದಂಬರಿಗಾರ್ತಿ ಅನಾಮಿಕಾ, ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಗೀತಾಂಜಲಿ ಶ್ರೀ, ಬರಹಗಾರ ನಂದ್ ಭಾರದ್ವಾಜ್ ಮತ್ತು ಲೇಖಕ ಪುಷ್ಪೇಶ್ ಪಂತ್ ಅವರು ಕವಿ, ಸಂಗೀತ ಮತ್ತು ಚಲನಚಿತ್ರ ವಿದ್ವಾಂಸ ಯತೀಂದ್ರ ಮಿಶ್ರಾ ಅವರೊಂದಿಗೆ 'ಏಕ್ ಹಿಂದಿ ಅನೆಕ್ ಹಿಂದಿ' ಎಂಬ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಲೇಖಕಿ, ʻಗ್ರೇಟೆಸ್ಟ್ ಲಿಟರರಿ ಶೋ ಆನ್ ಅರ್ಥ್ʼನ ಉತ್ಸವದ ಸಹ-ನಿರ್ದೇಶಕಿ ಹಾಗೂ ಸಹ-ಸಂಸ್ಥಾಪಕಿ ನಮಿತಾ ಗೋಖಲೆ ಮತ್ತು ಅನುವಾದಕರಾದ ಪುಷ್ಪೇಶ್ ಪಂತ್ ಮತ್ತು ಪ್ರಭಾತ್ ರಂಜನ್ ಅವರು ಪ್ರಕಾಶಕಿ ಅದಿತಿ ಮಹೇಶ್ವರಿ ಗೋಯಲ್ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಟೀಮ್ ವರ್ಕ್ ಆರ್ಟ್ಸ್ ಮತ್ತು ಉತ್ಸವದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಮ್ಮೇಳನದ ನಿರ್ಮಾಪಕ ಸಂಜೋಯ್ ಕೆ. ರಾಯ್, ಲೇಖಕ, ಇತಿಹಾಸಕಾರ ಮತ್ತು ಸಮ್ಮೇಳನದ ಸಹ-ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ವಿಲಿಯಂ ಡಾಲ್ರಿಂಪಲ್, ಹಾಗೂ ʻವಾಣಿ ಪ್ರಕಾಶನ ಗ್ರೂಪ್ʼನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅದರ ಅಧ್ಯಕ್ಷ ಅರುಣ್ ಮಹೇಶ್ವರಿ ಉಪಸ್ಥಿತರಿರಲಿದ್ದಾರೆ.
ಪುಸ್ತಕ ಬಿಡುಗಡೆ ನಂತರ, ಜೈಪುರ್ ಸಾಹಿತ್ಯ ಸಮ್ಮೇಳನದ ಬಗೆಗಿನ ಆಂತರಿಕ ದೃಷ್ಟಿಕೋನದೊಂದಿಗೆ ಗೋಖಲೆ ಅವರ ಕಾದಂಬರಿಯ ಹಿಂದಿ ಅನುವಾದವನ್ನು ಕೇಂದ್ರೀಕರಿಸುವ ʻಮೊದಲ ಆವೃತ್ತಿ: ಜೈಪೂರ್ಣಮಾʼ ಎಂಬ ಶೀರ್ಷಿಕೆಯಡಿ ಚರ್ಚೆ ನಡೆಯಲಿದೆ.
ಗಾಯಕಿ, ದಿವಂಗತ ಲತಾ ಮಂಗೇಶ್ಕರ್ ಅವರ ಸುದೀರ್ಘ ಪ್ರಯಾಣದ ಬಗ್ಗೆ ಕೆಲವು ಅಪರೂಪದ, ಯಾರಿಗೂ ತಿಳಿದಿರದ ಸಂತಿಗಳನ್ನು ಕವಿ, ಸಂಗೀತ ಮತ್ತು ಸಿನೆಮಾ ವಿದ್ವಾಂಸ ಯತೀಂದ್ರ ಮಿಶ್ರಾ ಅವರು ತಮ್ಮ ʻಲತಾ: ಲತಾ: ಸುರ್ ಗಾಥಾʼ ಕೃತಿಯಲ್ಲಿ ಆಕರ್ಷಕ ಭಾವಚಿತ್ರವನ್ನು ರಚಿಸಿದ್ದಾರೆ. ಹಿಂದಿ ಮೂಲದ ಈ ಕೃತಿಯನ್ನು ಇರಾ ಪಾಂಡೆ ಅವರು ಇಂಗ್ಲೀಷ್ಗೆ ಭಾಷಾಂತರಿಸಿದ್ದಾರೆ. ಸಮ್ಮೇಳನದಲ್ಲಿ ಯತೀಂದ್ರ ಮಿಶ್ರಾ ಅವರು ಅನುವಾದಕಿ ಮತ್ತು ಬರಹಗಾರ್ತಿ ಅನು ಸಿಂಗ್ ಚೌಧರಿ ಅವರೊಂದಿಗೆ ಸಂವಾದ ನಡೆಸಲಿದ್ದಾರೆ.
ಈ ಸಮ್ಮೇಳನದಲ್ಲಿ ಹಿಂದಿ ಭಾಷೆಯ ವಿವಿಧ ಉಪಭಾಷೆಗಳಾದ ರಾಜಸ್ಥಾನಿ ಮತ್ತು ಭೋಜ್ಪುರಿಯನ್ನು ಪ್ರದರ್ಶಿಸಲಾಗುವುದು. ರಾಜಸ್ಥಾನದ ಈ ವಿಶಾಲವಾದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸ್ಪರ್ಶಿಸುವ ಈ ಅಧಿವೇಶನದಲ್ಲಿ ರಾಜಸ್ಥಾನಿ ಬರಹಗಾರ ಚಂದ್ರ ಪ್ರಕಾಶ್ ದೇವಲ್ ಅವರು ಲೇಖಕ ಮಾಲ್ಚಂದ್ ತಿವಾರಿ ಅವರೊಂದಿಗೆ ಸಂವಾದ ನಡೆಸಲಿದ್ದಾರೆ.
ಕವಿ-ರಾಜತಾಂತ್ರಿಕ ಅಭಯ್ ಕೆ. ಅವರು ಬಿಹಾರಿ ಸಾಹಿತ್ಯದ ವ್ಯಾಪ್ತಿ ಮತ್ತು ಅದರ ಅತ್ಯಾಧುನಿಕತೆಯನ್ನು ಪ್ರಸ್ತುತಪಡಿಸಲಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕವಿ, ಶೈಕ್ಷಣಿಕ ಮತ್ತು ಕಾದಂಬರಿಗಾರ್ತಿ ಅನಾಮಿಕಾ ಅವರು ಪ್ರಶಸ್ತಿ ವಿಜೇತ ಲೇಖಕಿ ಅಕ್ಷಯ ಮುಕುಲ್ ಸಂವಾದದಲ್ಲಿ ಅಭಯ್ ಕೆ. ಅವರೊಂದಿಗೆ ಬಿಹಾರಿನ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಂಪರೆಗೆ ಕುರಿತು ಚರ್ಚಿಸಲಿದ್ದಾರೆ.
ಉರ್ದು, ಭೋಜ್ಪುರಿ ಮತ್ತು ರಾಜಸ್ಥಾನಿ ಭಾಷೆಗಳನ್ನು ಒಳಗೊಂಡ ಕೆಲವು ಗೋಷ್ಠಿಗಳಲ್ಲಿ ಭಾರತೀಯ ಭಾಷೆಗಳ ವೈವಿಧ್ಯತೆಯನ್ನು ಪ್ರದರ್ಶಿಸಲಾಗುವುದು. ಕವಿ, ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್ ಮತ್ತು ನಟಿ-ಸಾಮಾಜಿಕ ಕಾರ್ಯಕರ್ತೆ ಶಬಾನಾ ಅಜ್ಮಿ ಅವರು ಬಹು ಪ್ರಶಸ್ತಿ ವಿಜೇತ ಅನುವಾದಕ, ಬರಹಗಾರ ಮತ್ತು ಸಾಹಿತ್ಯ ಇತಿಹಾಸಕಾರ ರಕ್ಷಂದಾ ಜಲೀಲ್ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಉತ್ಸವದ ಅಧಿವೇಶನದಲ್ಲಿ, ಅಖ್ತರ್ ಅವರು ʻಧನಕ್ʼ ಮತ್ತು ʻಡೈರಾʼ ಎಂಬ ಎರಡು ಪುಸ್ತಕಗಳ ಬಗ್ಗೆ ಕವಿತೆಯೊಂದಿಗೆ ಚರ್ಚಿಸಲಿದ್ದಾರೆ.
2022ರ ಸಾಹಿತ್ಯಕ್ಕಾಗಿ ʻಜೆಸಿಬಿʼ ಪ್ರಶಸ್ತಿ ವಿಜೇತ ಬರನ್ ಫಾರೂಕಿ ಅವರು ಜಾವೇದ್ ಅವರ ಉರ್ದು ಕ್ಲಾಸಿಕ್ನ್ನು ಇಂಗ್ಲಿಷ್ಗೆ ಭಾಷಾಂತರಿಸಿದ ʻದಿ ಪ್ಯಾರಡೈಸ್ ಆಫ್ ಫುಡ್ʼ ಕೃತಿಯ ಕುರಿತು ಸಂವಾದ ನಡೆಯಲಿದೆ. ನಂತರ, ಓಯಿಜೋ ಮೀಡಿಯಾದ ಕ್ರಿಯೇಟಿವ್ ಡೈರೆಕ್ಟರ್ ಮತ್ತು ಇಂಡಿಯನ್ ಹಿಸ್ಟರಿ ಕಲೆಕ್ಟಿವ್ನ ಸಹ-ಸಂಸ್ಥಾಪಕಿ ಪ್ರಾಗ್ಯ ತಿವಾರಿ ಅವರೊಂದಿಗಿನ ಸಂಭಾಷಣೆಯಲ್ಲಿ ಜಾವೇದ್ ಅವರು ಆಹಾರ, ನಷ್ಟ ಮತ್ತು ದುರ್ಬಲತೆಗಳ ಕುರಿತು ಮಾತನಾಡಲಿದ್ದಾರೆ.
ಜೈಪುರ: 17ನೇ ಆವೃತ್ತಿಯ ಸಾಹಿತ್ಯ ಉತ್ಸವಕ್ಕೆ ‘ಭಾರತದ ಪಿಂಕ್ ಸಿಟಿ’ ಎಂದೇ ಹೆಸರಾಗಿರುವ ಜೈಪುರದಲ್ಲಿ ಸಂಭ...
16ನೇ ಆವೃತ್ತಿಯ ಪ್ರತಿಷ್ಠಿತ, ಜೈಪುರ ಸಾಹಿತ್ಯ ಉತ್ಸವವು ಇದೇ 19ರಿಂದ ಆರಂಭಗೊಂಡು ಇಂದು ತೆರೆಕಂಡಿದೆ. ಐದು ದಿನಗಳ ಸಾಹಿ...
ಜೈಪುರ ಸಾಹಿತ್ಯೋತ್ಸವದ 16ನೇ ಆವೃತ್ತಿಗೆ ಸೋಮವಾರ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಈ ಬಾರಿಯ ಉತ್ಸವದಲ್ಲಿ ಹೆಚ್ಚು ಯುವ...
©2024 Book Brahma Private Limited.