"ಲೇಖಕರೇ ಹೇಳಿದಂತೆ ಇದು ಕ್ರೂರ, ಸ್ವಾರ್ಥಿ, ವಿವೇಚನಾರಹಿತ ಗಂಡಸರ ಕೈಯ್ಯಲ್ಲಿ ಸಿಕ್ಕಿಕೊಂಡ ಅನೇಕ ಹೆಣ್ಣುಮಕ್ಕಳ ಕಥೆಯೂ ಹೌದು. ಓದಿ ಪುಸ್ತಕ ಕೆಳಗಿಟ್ಟ ಮೇಲೆ ವಿಷಾದದ ಪಲುಕೊಂದು ಮತ್ತೆ ಮತ್ತೆ ಹಾದು ಮನಸ್ಸನ್ನು ಭಾರವಾಗಿಸುತ್ತದೆ. 'ಮೂಕತೋಳ' ಎಲ್ಲೂ ಹೆಚ್ಚು ಮಾತನಾಡದಿರುವುದು ಕಾದಂಬರಿಯ ಅತಿದೊಡ್ಡ ಶಕ್ತಿ!," ಎನ್ನುತ್ತಾರೆ ಉಮಶಂಕರ ಕೆಳತ್ತಾಯ. ಅವರು ಕೆ. ಪ್ರಭಾಕರನ್ ಅವರ ‘ಮೂಕ ತೋಳ’ ಕಾದಂಬರಿ ಕುರಿತು ಬರೆದ ಅನಿಸಿಕೆ.
ಗುಲಾಮಗಿರಿ ಒಂದು ಅಫೀಮು ಇದ್ದಂತೆ. ಒಮ್ಮೆ ಅಭ್ಯಾಸವಾದರೆ ಮನಸ್ಸು ಅದನ್ನು ಒಪ್ಪಿ ಅಪ್ಪಿಕೊಳ್ಳುತ್ತದೆ. ಆಮೇಲೆ ಅದರಿಂದ ಹೊರಬರಲು ಭಯಂಕರ ಹೋರಾಟ ನಡೆಸಬೇಕು. ಅದು ಸಾಧ್ಯವಾಗದಿದ್ದಾಗ ಅಸಹಾಯಕತೆ ಆವರಿಸಿ ತಾನೇ ಬಲಿಯಾಗಿಬಿಡುವ ಸಂಭವ ಹೆಚ್ಚು. ಇದನ್ನು ಮಾರ್ಮಿಕವಾಗಿ ಹೇಳಿದ ಕತೆ ಮಲೆಯಾಳಂ ಸಾಹಿತಿ ಜಯಮೋಹನ್ ಅವರ ಕಿರು ಕಾದಂಬರಿ 'ಮೂಕತೋಳ'. ಲೇಖಕರೇ ಹೇಳಿದಂತೆ ಇದು ಕ್ರೂರ, ಸ್ವಾರ್ಥಿ, ವಿವೇಚನಾರಹಿತ ಗಂಡಸರ ಕೈಯ್ಯಲ್ಲಿ ಸಿಕ್ಕಿಕೊಂಡ ಅನೇಕ ಹೆಣ್ಣುಮಕ್ಕಳ ಕಥೆಯೂ ಹೌದು. ಓದಿ ಪುಸ್ತಕ ಕೆಳಗಿಟ್ಟ ಮೇಲೆ ವಿಷಾದದ ಪಲುಕೊಂದು ಮತ್ತೆ ಮತ್ತೆ ಹಾದು ಮನಸ್ಸನ್ನು ಭಾರವಾಗಿಸುತ್ತದೆ. 'ಮೂಕತೋಳ' ಎಲ್ಲೂ ಹೆಚ್ಚು ಮಾತನಾಡದಿರುವುದು ಕಾದಂಬರಿಯ ಅತಿದೊಡ್ಡ ಶಕ್ತಿ!
ಓದಿ ನೋಡಿ!
ಜಯಮೋಹನ್ ಅವರ ಬಗ್ಗೆ ತಿಳಿದದ್ದು ಕಳೆದ ವಾರವಷ್ಟೇ (ಪ್ರಶಾಂತ್ ಭಟ್ಟರ ಪೋಸ್ಟ್ ನಿಂದ). ಸಿಕ್ಕಿದ ಪುಸ್ತಕಗಳನ್ನೆಲ್ಲಾ ತರಿಸಿಕೊಂಡೆ. 'ಆನೆ ಡಾಕ್ಟರ್' ಎಂಬ ಒಂದು ಕಥೆ ಸಾಕಾಗಿತ್ತು ನನಗೆ, ಅವರ ಅಭಿಮಾನಿಯಾಗಲು!. 'ಊಟದ ಲೆಕ್ಕ' ಕಥೆ ಓದಿ ಕಣ್ಣೀರಿಳಿಸದವರು ಬಹುಶಃ ಯಾರೂ ಇರಲಿಕ್ಕಿಲ್ಲ. ಆಮೇಲೆ ಓದಿದ್ದು ಈ ಕಿರು ಕಾದಂಬರಿ 'ಮೂಕತೋಳ'. ಅದರ ಬಗ್ಗೆ ಮೇಲೆಯೇ ಹೇಳಿದ್ದೇನೆ. 2020ರಲ್ಲಿ ಮಹಾಭಾರತವನ್ನು ಆಧರಿಸಿ 22,400 ಪುಟಗಳ 'ವೆನ್ಮುರಸು' ಎಂಬ ಮಹಾಕಾದಂಬರಿ ತಮಿಳಿನಲ್ಲಿ ಬರೆದು ಮುಗಿಸಿದ್ದಾರಂತೆ. ಅದು ಕನ್ನಡಕ್ಕೆ ಅನುವಾದವಾಗಲು ಉತ್ಕಂಠತೆಯಿಂದ ಕಾಯುತ್ತಿದ್ದೇನೆ!
"'ಹವೇಲಿ ದೊರೆಸಾನಿ 'ಕಥಾ ಸಂಕಲನದ ಮೊದಲ ಕಥೆ,'ಅನ್ಪಡ ಕಂಟೆವ್ವ ', ಊರಿಗೆ ಶಾಲೆ ಬರಬೇಕೆಂದು ಊರ...
"ಜಮ್ಮು-ಕಾಶ್ಮೀರದ ಬೇಸಿಗೆ ತಂಗು ಧಾಮವಾದ ದಲ್ ಲೇಕ್ ಶ್ರೀನಗರದ ಒಳಗಿರುವ ಒಂದು ಸಿಹಿನೀರಿನ ಸರೋವರ. ಪ್ರವಾಸಿಗರು ಮ...
"ಭುಜಂಗಾಚಾರ್ಯ ಎನ್ನುವುದು ಒಂದು ಶಕ್ತಿಯಾಗಿ ಆ ಕುಟುಂಬವನ್ನು ಕಾಪಾಡುತ್ತದೆ. ಒಂದು ಆದರ್ಶವಾಗಿ ಮನೆಯ ಹಿರಿ ಮಗನ ಕ...
©2025 Book Brahma Private Limited.