"ಭಾವನಾತ್ಮಕತೆಯ ಜೊತೆಗೆ ವೈಚಾರಿಕತೆಯನ್ನು ಮೈಗೂಡಿಸಿಕೊಂಡ ಆನಂದನಿಗೆ ವಿನಯಳ ಅತಿ ಭಾವನಾತ್ಮಕತೆ ಮತ್ತು ಅಸಹಾಯಕತೆಯೇ ಅವರಿಬ್ಬರ ಪ್ರೀತಿಗೆ ಮುಳುವಾಗತ್ತದೆ," ಎನ್ನುತ್ತಾರೆ ಸಂಜಯ್ ಮಂಜುನಾಥ್. ಅವರು ಎಸ್.ಎಲ್. ಭೈರಪ್ಪ ಅವರ ‘ದೂರ ಸರಿದರು’ ಕೃತಿ ಕುರಿತು ಬರೆದ ಅನಿಸಿಕೆ.
ಪ್ರೀತಿಯನ್ನು ವ್ಯಾಖ್ಯಾನ ಮಾಡುವುದು ಕಷ್ಟ. ಎಲ್ಲದಕ್ಕೂ ಮೀರಿದ ಪ್ರೀತಿಯು ಎಲ್ಲರಿಗೂ ದಕ್ಕುವುದು ಅಪರೂಪ. ಈ ಕೃತಿಯಲ್ಲಿ ಬರುವ ಜೋಡಿಗಳಿಗೆ ಪ್ರೀತಿ ದಕ್ಕುವುದಿಲ್ಲ. ತಮ್ಮದೇ ಆದ ಪರಿಸ್ಥಿತಿಗಳಿಂದ ದೂರ ಸರಿಯುತ್ತಾರೆ. ಆ ದೂರ ಸರಿಯುವ ಕ್ರಿಯೆ ಓದುಗನನ್ನು ಕದಡಿಸುವುದೇ ಇರುವುದಿಲ್ಲ. ವಿಚಾರವಂತಿಕೆ ಮತ್ತು ಭಾವನಾತ್ಮಕತೆಯ ತಳಹದಿಯಲ್ಲಿ ಪ್ರೀತಿಯ ಸ್ವರೂಪವನ್ನು ನಿರೂಪಿಸಿರುವ ಕೃತಿ ದೂರ ಸರಿದರು.
ವೈಚಾರಿಕತೆಯನ್ನು ಹೆಗಲಗೇರಿಸಿಕೊಂಡಿರುವ ವಸಂತನಿಗೆ ಉಮೆಯ ಸಹಚರ್ಯ ಮೊದಲಿಗೆ ಖುಷಿಯೆನಿಸಿದರು ನಂತರ ಅವಳು ವೈಚಾರಿಕತೆಯಿಂದ ವಿಮುಖಳಾದ್ದರಿಂದ ಅವರಿಬ್ಬರೂ ದೂರ ಸರಿಯುತ್ತಾರೆ. ವಸಂತನ ವಿಚಾರವಂತಿಕೆ ಸರಿಯಿದ್ದರೂ ಅದು ಭಾವದ ಅಭಿವ್ಯಕ್ತಿಯೊಳಗೆ ಮಿಳಿತಗೊಳ್ಳದೆ ಇರುವುದು ಪ್ರೀತಿಫಲಿಸದೆ ಇರುವುದಕ್ಕೆ ಮುಖ್ಯ ಕಾರಣವಾಗುತ್ತದೆ.
ಭಾವನಾತ್ಮಕತೆಯ ಜೊತೆಗೆ ವೈಚಾರಿಕತೆಯನ್ನು ಮೈಗೂಡಿಸಿಕೊಂಡ ಆನಂದನಿಗೆ ವಿನಯಳ ಅತಿ ಭಾವನಾತ್ಮಕತೆ ಮತ್ತು ಅಸಹಾಯಕತೆಯೇ ಅವರಿಬ್ಬರ ಪ್ರೀತಿಗೆ ಮುಳುವಾಗತ್ತದೆ.
ಒಂದು ಅಭಿಪ್ರಾಯವನ್ನು ಸಕಲರು ಒಪ್ಪುವುದಿಲ್ಲ. ಅದು ಒಬ್ಬರಿಂದ ಒಬ್ಬರಿಗೆ ಬೇರೆಯಾಗಿಯೇ ಇರುತ್ತದೆ. ಇಲ್ಲಿಯ ಪಾತ್ರಗಳ ದೃಷ್ಟಿಯಲ್ಲಿ ಅವುಗಳ ಅಭಿಪ್ರಾಯ ಅವುಗಳಿಗೆ ಸರಿ ಎಂದೇ ಅನಿಸುತ್ತದೆ.
ಇನ್ನೂ ಈ ಕೃತಿಯಲ್ಲಿ ಆನಂದ-ರಮ ರ ಅಮೂರ್ತ ಪ್ರೀತಿ, ಜಗದಾಂಬೆ-ವಿನುತಾಳ ಸ್ನೇಹ ಪ್ರೀತಿ, ನರೋತ್ತಮ್-ರಮ..ರಾಮಮೂರ್ತಿ-ವಿಜಯಳ ವಂಚನೆಯ ಪ್ರೀತಿ, ವಾಸನ್-ವಿಜಯರ ಅವಸರದ ಪ್ರೀತಿ, ಆನಂದ್ ಮತ್ತು ಅವನ ತಾಯಿಯ ವಾತ್ಸಲ್ಯ ಪ್ರೀತಿ, ವಿನುತಾ ಮತ್ತು ಅವಳ ತಾಯಿಯ ಜಿಗುಟು ಪ್ರೀತಿ. ಹೀಗೆ ಪ್ರೀತಿಯ ವಿವಿಧ ಸ್ವರೂಪಗಳು ಕಾಣಿಸುತ್ತವೆ.
ಮೊದಲಿಗೆ ತರ್ಕ ವಿಚಾರಗಳೇ ಜಾಸ್ತಿಯೆಂದೆನಿಸಿ ಕೃತಿಯ ಪ್ರವೇಶಕ್ಕೆ ಸ್ವಲ್ಪ ನಿಧಾನವಾಯಿತು. ಆದರೆ ಮುಂದೆ ಕಥೆಯು ಸರಾಗವಾಗಿ ಸಾಗಿದಂತೆ ನನ್ನೊಳಗೆ ಮಥಿಸಲು ಶುರುವಾಗಿದ್ದಂತೂ ನಿಜ.
ಪ್ರೀತಿಯ ಕಥಾವಸ್ತುನಿಟ್ಟುಕೊಂಡ ಕೃತಿಗಳಲ್ಲಿ ಸಾಮಾನ್ಯವಾಗಿ ಭಾವುಕತೆಯೇ ವಿಜೃಂಭಿಸುತ್ತದೆ. ಆದರೆ ಈ ಕೃತಿಯು ಮನುಷ್ಯನ ಮನೋವ್ಯಾಪರವನ್ನು ತರ್ಕದೊಂದಿಗೆ ಸಮೀಕರಿಸಿಕೊಂಡು ಅತ್ಯಂತ ಸಹಜವಾಗಿ ಪ್ರೀತಿಯನ್ನು ಪ್ರಸ್ತುತಪಡಿಸುತ್ತದೆ.
“ಇಡೀ ಬಾಳೆ ಅದೃಷ್ಟ ರೇಖೆಯ ಕೈಗೊಂಬೆ ಎಂದು ಸ್ಪಷ್ಟಪಡಿಸುವುದು ಲೇಖಕರ ಇರಾದೆ ಇದ್ದಂತಿದೆ. ಇದು ಕೊನೆಯ ಕಥೆಯಲ್ಲಿಯ...
“ಈ ಕಾದಂಬರಿಯನ್ನು ಬರೆಯಲು ಕನಿಷ್ಠವೆಂದರೂ ಒಂದೂವರೆ ವರ್ಷ ತೆಗೆದುಕೊಂಡಿದ್ದೇನೆ. ಇದಕ್ಕಾಗಿ ಸಾಕಷ್ಟು ಅಧ್ಯಯನ ಮಾ...
“ಕೊಡಗಿನ ಪ್ರಕೃತಿ ಹಾಗೂ ಸಂಸ್ಕೃತಿಗಳನ್ನು ಬಣ್ಣಿಸಿದ ಈ ಕಥೆ ಎಲ್ಲರ ಮನದಲ್ಲಿ ಕೊಡಗಿನ ಬಗೆಗಿನ ಅಭಿಮಾನವನ್ನು ಇಮ್...
©2025 Book Brahma Private Limited.