"ಐತಾಳರ ಮನೆಯ ಸುತ್ತಮುತ್ತಲಿನ ಪರಿಸರವನ್ನು ಎದುರು ನಿಂತು ಅವರ ಜೀವನ ನೋಡಿದ ಅನುಭವವಾಗುತ್ತದೆ. ತಾಯಿ, ಮಗ, ಅಪ್ಪ, ಅಮ್ಮ, ನೆರೆಹೊರೆಯ, ದೊಡ್ಡಮ್ಮ, ತಂಗಿ ಇಂತಹ ಪಾತ್ರಗಳನ್ನು ಸೃಷ್ಟಿಸಿ ಸಮಭಾರ ನೀಡಿ ಕಾದಂಬರಿ ಅನ್ನುವ ಬದಲು ಒಂದು ಕುಟುಂಬದ ಜೀವನಚಿತ್ರ ಓದಿದ ಅನುಭವವಾಗುತ್ತದೆ," ಎನ್ನುತ್ತಾರೆ ಪುಸ್ತಕಮರೆ ಪ್ರಸಾದ. ಅವರು ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕೃತಿ ಕುರಿತು ಬರೆದ ವಿಮರ್ಶೆ.
ಐತಾಳರ ಕುಟುಂಬದಲ್ಲಿ ನಮ್ಮನ್ನೂ ಒಬ್ಬೊರನ್ನಾಗಿಸಿ ಓದಿಸಿಕೊಂಡು, ಪಾರೋತಿ ಸರಸ್ವತಿಯಂತಹ ಪಾತ್ರಗಳನ್ನ ಸೃಷ್ಟಿಸಿ ಎಲ್ಲೋ ಒಂದು ಕಡೆ ನಮ್ಮ ನೆನಪುಗಳಿಗೆ ಕನ್ನಡಿ ಹಿಡಿದಹಾಗೆ ಭಾಸವಾಗುವ ರೀತಿಯಲ್ಲಿ ಬರೆದಿದ್ದಾರೆ ಕಾರಂತರು. ಬರುವ ಎಲ್ಲಾ ಪಾತ್ರಗಳು ಸಹ ಬಹಳ ಹತ್ತಿರವಾಗಿ ಎಲ್ಲೋ ನೋಡಿದ, ಕೇಳಿದ, ಓದಿದ, ಅನುಭವಿಸಿದ ನೆನಪು ಬರೋದು ಖಂಡಿತ. ಪಾತ್ರ ಸೃಷ್ಟಿ ಎಷ್ಟೊಂದು ಅದ್ಭುತವಾಗಿ ಅಂದರೆ ಅಕ್ಕ ಪಕ್ಕದ ಆಳುಗಳಿಂದ ಹಿಡಿದು ಹಿರಿಕಿರಿ ಸಂಬಂಧಿಕರು ಸಹ ಹತ್ತಿರವಾಗುತ್ತ ಹೋಗುತ್ತಾರೆ. ತೀರ ಅನ್ನುವ ಬದಲು ನೈಜ ಪಾತ್ರಗಳೇ ಅನ್ನುವ ಯೋಚನೆ ಹುಟ್ಟುತ್ತದೆ. ಅದು ಸಹ ಕುಂದಾಪುರದ ಸುತ್ತಮುತ್ತ ನಡೆಯೋದರಿಂದ ನನಗಂತೂ ಅತೀ ಹತ್ತಿರವಾಗಿದ್ದು ಸಹ ಹೌದು.
ಐತಾಳರ ಮನೆಯ ಸುತ್ತಮುತ್ತಲಿನ ಪರಿಸರವನ್ನು ಎದುರು ನಿಂತು ಅವರ ಜೀವನ ನೋಡಿದ ಅನುಭವವಾಗುತ್ತದೆ. ತಾಯಿ, ಮಗ, ಅಪ್ಪ, ಅಮ್ಮ, ನೆರೆಹೊರೆಯ, ದೊಡ್ಡಮ್ಮ, ತಂಗಿ ಇಂತಹ ಪಾತ್ರಗಳನ್ನು ಸೃಷ್ಟಿಸಿ ಸಮಭಾರ ನೀಡಿ ಕಾದಂಬರಿ ಅನ್ನುವ ಬದಲು ಒಂದು ಕುಟುಂಬದ ಜೀವನಚಿತ್ರ ಓದಿದ ಅನುಭವವಾಗುತ್ತದೆ. ಇಂದಿಗೂ ಕಾಣಸಿಗಲಿರುವ ಕುಟುಂಬದ ಸಮಸ್ಯೆಗಳನ್ನೇ ನೀಡಿ ಇಂದಿಗೂ ಹೊಂದಾಣಿಕೆಯಾಗುವ ಹಾಗೆ ಬರೆದಿದ್ದಾರೆ. ಪಾತ್ರಗಳಲ್ಲಿ ಒಂದಾಗಿ ಓದಿಸಿಕೊಂಡು ಹೋಗುತ್ತದೆ ಈ ಕಾದಂಬರಿ. ಅಂದಿನ ಸಾಮಾಜಿಕ, ಆರ್ಥಿಕ, ನೈತಿಕ ಜೀವನ ಪರಿಸ್ಥಿತಿ ಬಗ್ಗೆಯೂ ಮನಮುಟ್ಟುವಂತೆ ವಿವರಿಸಿದ್ದಾರೆ. ಓದುತ್ತಾ ಹೋದಂತೆ ಒಂದೊಳ್ಳೆ ಸ್ಪೂರ್ತಿ ಸಿಗೋದಂತು ಖಂಡಿತ.
ಕಥೆ ಒಂದು ಕಾಲದಿಂದ ಇನ್ನೊಂದಕ್ಕೆ ಸರಿದಂತೆ ಅಲ್ಲಾಗುವ ಬದಲಾವಣೆಗಳಿಗೆ ಸಮನಾಗಿ ನಾವು ಸಹ ಕಥೆಯಲ್ಲಿ ಬದಲಾಗುತ್ತಾ ಹೋಗುತ್ತೇವೆ. ಐತಾಳರ ಕುಟುಂಬ ತೀರ ಹತ್ತಿರವಾಗೋದು ಖಂಡಿತ. ಕನ್ನಡದ ಶ್ರೇಷ್ಠ ಕೃತಿಗಳಲ್ಲಿ ಒಂದು ಅಂತು ಹೌದು. ಮನೆಯಲ್ಲಾಗುವ ಅಲ್ಲೋಲ ಕಲ್ಲೋಲಗಳ ಪರಿಣಾಮ ನಮ್ಮ ಮೇಲೆ ಸಹ ಬೀಳುವಂತೆ ಬರೆದಿದ್ದಾರೆ. ತೀರ ಮನಸಿಗೆ ಹತ್ತಿರವಾಗಿ ಜೀವನ ಮೌಲ್ಯಗಳನ್ನು ಹೇಳುವಂತೆ ಕಾದಂಬರಿ ಓದಿಸಿಕೊಂಡು ಹೋಗುತ್ತದೆ.
"ಒಂದು ಕತೆಯ ಪಾತ್ರಗಳು, ಅವು ಬದುಕುತ್ತಿರುವ ಸಮಾಜ ಮತ್ತು ಕುಟುಂಬದ ಚಿತ್ರಣ, ಅವುಗಳ ಒಟ್ಟು ವ್ಯಕ್ತಿತ್ವದ ಅಭಿವ್ಯ...
"ಭಾವ ಸಮುದ್ರದಲ್ಲಿ ಮಿಂದೆದ್ದರೂ, ಎಲ್ಲಿಯೂ ಗೋಳು ಅನಿಸುವುದಿಲ್ಲ. ಒಬ್ಬ ಕಲಾವಿದೆಯ ಬದುಕನ್ನು ಇಷ್ಟು ತೀವ್ರವಾಗಿ ...
"ಆತ್ಮವಾದರೋ ಅಲೆಮಾರಿಯಾಗಿ ಸುತ್ತುತ್ತಲೇ ಇರುತ್ತದೆ ಅದಕ್ಕೆ ದೇಹಭಾದೆಗಳಿಲ್ಲ, ಆದರೆ ಅದನ್ನು ಧರಿಸುವ ದೇಹಕ್ಕೆ ಮಾ...
©2024 Book Brahma Private Limited.