ಇಲ್ಲಿ ಕಥೆಗಾರ್ತಿಗೆ ನಿಜವಾಗಿಯೂ ಭಾಷೆ ಅನ್ನುವುದು ಅಷ್ಟು ಲೀಲಾಜಾಲ


"ಇಲ್ಲಿ ಕಥೆಗಾರ್ತಿಗೆ ನಿಜವಾಗಿಯೂ ಭಾಷೆ ಅನ್ನುವುದು ಅಷ್ಟು ಲೀಲಾಜಾಲ. ನುಡಿಗಟ್ಟುಗಳನ್ನು ಸಂಧರ್ಭೋಚಿತವಾಗಿ ಬಳಸುವ ಅವರ ಭಾಷೆ ಕಾವ್ಯತ್ಮಕ ಅನಿಸುವುದು ಸುಳ್ಳಲ್ಲ. ಆ ಕಥೆ ಹೀಗಿತ್ತು, ಈ ತಿರುವು ಚನ್ನಾಗಿತ್ತು ಅಂತ ಕಥೆಯ ಸಾರವನ್ನು ಪೂರ್ತಿಯಾಗಿ ಬರೆದು ಸ್ಪಾಯ್ಲರ್ ಮಾಡಲಾರೆ.ಖಂಡಿತ ನೀವು ಖರೀದಿಸಿ ಓದಲೇ ಬೇಕಾದ ಕಥೆಗಳು," ಮುನವ್ವರ್ ಜೋಗಿಬೆಟ್ಟು. ಅವರು ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರ ‘ಕತೆ ಜಾರಿಯಲ್ಲಿರಲಿ’ ಕೃತಿ ಕುರಿತು ಬರೆದ ವಿಮರ್ಶೆ.

ಎರಡೇ ದಿನಗಳಲ್ಲಿ ಓದಿ ಮುಗಿಸಿದೆ. ಆ ಸುಳಿಯಿಂದ ಹೊರ ಬರಲು ಸ್ವಲ್ಪ ವಿಶ್ರಾಂತಿ ಅಗತ್ಯ ಅನಿಸಿತು. ದಣಿವಾರಿಸಿಕೊಂಡು ಓದಿಕೊಳ್ಳುವಷ್ಟು ತಾಕುವಂತಹ - ಡೀಪ್ ಫೀಲ್ ಕೊಡುವ ಕಥೆಗಳೆಂದು ಕರೆದು ಉತ್ಪ್ರೇಕ್ಷೆಯಾಡುವುದಿಲ್ಲ. ಇಲ್ಲಿನ ಕಥೆಗಳೆಲ್ಲವೂ ಫೀಲ್ ಗುಡ್ ಕಥೆಗಳು. ಈ ಕಥೆ ಹೀಗೆಯೇ ಮುಗಿಸಬಹುದೆಂದು ಸಹಜವಾಗಿ ಓದುಗನು ಬಯಸುವಾಗಲೆಲ್ಲಾ ಭಾಷೆಯ ವಿದ್ವತ್ತಿಗೆ ಕಥೆಗಳು ಇನ್ನೆಲ್ಲಿಗೋ ಹೋಗಿ ಅನೂಹ್ಯವಾಗಿ ತಲುಪಿಬಿಡುತ್ತದೆ.

ಇಲ್ಲಿ ಕಥೆಗಾರ್ತಿಗೆ ನಿಜವಾಗಿಯೂ ಭಾಷೆ ಅನ್ನುವುದು ಅಷ್ಟು ಲೀಲಾಜಾಲ. ನುಡಿಗಟ್ಟುಗಳನ್ನು ಸಂಧರ್ಭೋಚಿತವಾಗಿ ಬಳಸುವ ಅವರ ಭಾಷೆ ಕಾವ್ಯತ್ಮಕ ಅನಿಸುವುದು ಸುಳ್ಳಲ್ಲ. ಆ ಕಥೆ ಹೀಗಿತ್ತು, ಈ ತಿರುವು ಚನ್ನಾಗಿತ್ತು ಅಂತ ಕಥೆಯ ಸಾರವನ್ನು ಪೂರ್ತಿಯಾಗಿ ಬರೆದು ಸ್ಪಾಯ್ಲರ್ ಮಾಡಲಾರೆ. ಖಂಡಿತ ನೀವು ಖರೀದಿಸಿ ಓದಲೇ ಬೇಕಾದ ಕಥೆಗಳು.

ಆಳ ಓದು- ಅದ್ಭುತ ಜೀವಾನುನುಭವ ಇಲ್ಲಿನ ಕಥೆಗಳ ಜೀವಾಳ. ಹೀಗೆಲ್ಲಾ ಕಥೆ ಬರೆಯಬಹುದು ಎಂದನಿಸಿದಾಗ ಸಣ್ಣಗೆ‌ ನಾನು ಬೆವರಿದ್ದೇನೆ. ಕಥೆಯ ಅಂತರಾಳವನ್ನು ಮೆಚ್ಚಿದ್ದೇನೆ. ಪಾತ್ರಗಳು ಪ್ರತ್ಯಕ್ಷವಾಗಿ ಮಾತನಾಡಿಸಿದಷ್ಟು ಬೆರಗಾಗಿದ್ದೇನೆ. ಹೀಗೆ ಕನ್ನಡದಲ್ಲಿ ಕಥಾ ಸಾಧ್ಯತೆಗಳನ್ನು ಚಂದ ಭಾಷೆಯ ಮೂಲಕ ಹರವಿ ಕುಳಿತ ಅಲ್ಪವೇ ಕಥೆಗಾರರಲ್ಲಿ ಇವರೂ ಸೇರಿಕೊಳ್ಳುತ್ತಾರೆ. ವೈಯಕ್ತಿಕವಾಗಿ ನನಗೆ ಇಷ್ಟವಾಗಿ ಎಂದೆಂದೂ ನೆನಪಿನಲ್ಲಿರಬಹುದಾದ ಕಥೆಯೆಂದರೆ " ಕಥೆ ಜಾರಿಯಲ್ಲಿರಲಿ". ಅರ್ಹವಾಗಿಯೇ " ಈ ಹೊತ್ತಿಗೆ" ಪ್ರಶಸ್ತಿಗೆ ಒಡತಿಯಾಗಿದ್ದೀರಿ."ಸಸಿ ಪ್ರಕಾಶನ" ಒಂದು ಚಂದದ ಪುಸ್ತಕವನ್ನೇ ಓದುಗರಿಗೆ ದಾಟಿಸಿದೆ‌. ಕಥೆಗಾರ್ತಿಗೂ ಪ್ರಕಾಶಕರಿಗೂ ಅನಂತ ಅಭಿನಂದನೆಗಳು.

MORE FEATURES

ರಾಜಕೀಯದಾಟಗಳ ಮಧ್ಯೆ ಕೊನೆಯವರೆಗೂ ಕುತೂಹಲ ಉಳಿಸಿಕೊಳ್ಳುವ ಕಥೆಗಳು

05-05-2025 ಬೆಂಗಳೂರು

"'ಹವೇಲಿ ದೊರೆಸಾನಿ 'ಕಥಾ ಸಂಕಲನದ ಮೊದಲ ಕಥೆ,'ಅನ್ಪಡ ಕಂಟೆವ್ವ ', ಊರಿಗೆ ಶಾಲೆ ಬರಬೇಕೆಂದು ಊರ...

ಕಣಿವೆ ನಾಡಿನೊಳಗೆ ಕಂಪಿಸುತ್ತ ಮಾಡಿದ ಪ್ರವಾಸ 

05-05-2025 ಬೆಂಗಳೂರು

"ಜಮ್ಮು-ಕಾಶ್ಮೀರದ ಬೇಸಿಗೆ ತಂಗು ಧಾಮವಾದ ದಲ್ ಲೇಕ್ ಶ್ರೀನಗರದ ಒಳಗಿರುವ ಒಂದು ಸಿಹಿನೀರಿನ ಸರೋವರ. ಪ್ರವಾಸಿಗರು ಮ...

ಇಲ್ಲಿನ ಕೆಲವು ಪ್ರಸಂಗಗಳೇ ರೋಚಕ

05-05-2025 ಬೆಂಗಳೂರು

"ಭುಜಂಗಾಚಾರ್ಯ ಎನ್ನುವುದು ಒಂದು ಶಕ್ತಿಯಾಗಿ ಆ ಕುಟುಂಬವನ್ನು ಕಾಪಾಡುತ್ತದೆ. ಒಂದು ಆದರ್ಶವಾಗಿ ಮನೆಯ ಹಿರಿ ಮಗನ ಕ...