ಹಾಡು, ನೃತ್ಯ, ನಟನೆ ಎಲ್ಲದರಲ್ಲೂ ಸೈ ಈ ಬಿಗ್‌ಬಾಸ್ ಬೆಡಗಿ ಚಂದನಾ ಅನಂತಕೃಷ್ಣ


ತನನ್ನು ಸುತ್ತುವರೆದ ಬೇಲಿಗಳೆಲ್ಲವನ್ನು ದಾಟಿ ರೆಕ್ಕೆ ಬಿಚ್ಚಿ ಕನಸಿನತ್ತ ಹಾರುವವರು ಕಲಾವಿದರು. ಇದೇ ರೀತಿ ಕನಸು ಹೊತ್ತು ಹಾಡು, ನೃತ್ಯ, ನಟನೆಯ ಮೂಲಕ ಚಂದನವನಕ್ಕೆ ಕಾಲಿಟ್ಟ ಚಂದದ ಮುಗುಳುನಗೆಯ ಚಂದನ ಅಂನತಕೃಷ್ಣಳ ಕುರಿತು ದಿವ್ಯ ದೇವಾಡಿಗ ಅವರು ಬರೆದ ಲೇಖನ ನಿಮ್ಮ ಓದಿಗಾಗಿ..

ಒಂದೊಳ್ಳೆ ಕಲಾವಿದೆಯಾಗಬೇಕಾದರೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನಸ್ಸು, ತಾಳ್ಮೆ ಮುಖ್ಯವಾಗಿರುತ್ತೆ, ಇದನ್ನೇ ಅನುಸರಿಸಿಕೊಂಡು ಬಂದವರು ನಟಿ ಚಂದನ. ತುಮಕೂರು ಜಿಲ್ಲೆಯಲ್ಲಿ ಜನಿಸಿ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಬಂದಾಗ ನಟನೆಯಲ್ಲಿ ಆಸಕ್ತಿ ಇದ್ದುದ್ದರಿಂದ ಧಾರಾವಾಹಿಗಳಿಗೆ ಆಡಿಷನ್ ನೀಡಲು ಪ್ರಾರಂಭಿಸಿದರು.

ಕಲರ್ ಫುಲ್ ಪ್ರಪಂಚದೆಡೆಗೆ

ಈಕೆ ಪ್ರಾರಂಭದಲ್ಲಿ ಅನೇಕ ದಾರಾವಾಹಿಗಳಿಗೆ ಆಡಿಷನ್ ನೀಡಿ ಆಯ್ಕೆಯಾಗದೇ ಸೋತಾಗ, ಇದೂ ನನ್ನ ಪಾಲಿನ ಕಪ್ ಆಫ್ ಟೀ ಅಲ್ಲವೆನೋ ಅನಿಸಿದ್ದು ಇದೆಯಂತೆ.ಆದರೂ ಛಲ ಬಿಡದೇ ಪಟ್ಟ ಪರಿಶ್ರಮಕ್ಕೆ ಒಲಿದು ಬಂದದ್ದೇ ಸುವರ್ಣವಾಹಿನಿಯ 'ಪುಟ್ಮಲ್ಲಿ ಧಾರಾವಾಹಿ'. ಈ ದಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸುವ ಪಾತ್ರ ಸಿಗದೇ ಇದ್ದರು ಸಿಕ್ಕ ಪಾತ್ರಕ್ಕೆ ಒಪ್ಪಿಕೊಂಡು ಮುಂದುವರೆದಿದ್ದೇ ಇವತ್ತಿನ ಇವರ ಯಶಸ್ಸಿಗೆ ಕಾರಣ ಎನ್ನುತ್ತಾರೆ ಈ ಬೆಡಗಿ.ಇನ್ನು ಪುಟ್ಮಲ್ಲಿ ದಾರಾವಾಹಿಯಲ್ಲಿ ತಂಗಿ ಪಾತ್ರದಲ್ಲಿ ಅಭಿನಯಿಸಿದ ಇವರಿಗೆ ನಂತರ ನಾಯಕಿಯಾಗಿ ಅಭಿನಯಿಸಲು ಅನೇಕ ದಾರವಾಹಿಗಳು ಅವಕಾಶ ನೀಡಿದವು.

ಚಂದನಾ, ಚುಕ್ಕಿಯಾಗಿ ಬದಲಾಗಿ

ಚಂದನ ಮೊದಲಿಗೆ ನಾಯಕಿಯಾಗಿ ತೆರೆಯ ಮೇಲೆ ಬಣ್ಣ ಹಚ್ಚಿದ್ದು ಕಲರ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜ ರಾಣಿ' ಧಾರಾವಾಹಿ ಮೂಲಕ. ಈ ದಾರವಾಹಿಯಲ್ಲಿ 'ಚುಕ್ಕಿ' ಪಾತ್ರದಲ್ಲಿ ಅಭಿನಯಿಸಿದ ಇವರು ಜನ ಮೆಚ್ಚಿದ ಮಗಳಾಗಿದ್ದಾರೆ. ಸದ್ಯ ,ಕಿರುತೆರೆಯಲ್ಲಿ ನಟಿಯಾಗಿ, ನೃತ್ಯಗಾರ್ತಿಯಾಗಿ, ನಿರೂಪಕಿಯಾಗಿ, ಸ್ಪರ್ಧಿಯಾಗಿ ಹಲವು ರೀತಿಯಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ.

ರಾಜಾರಾಣಿ, ಹೂ ಮಳೆ, ಧಾರಾವಾಹಿಯ ನಾಯಕಿಯಾಗಿ, ಹಾಡು ಕರ್ನಾಟಕ ರಿಯಾಲಿಟಿ ಶೋ ನಾ ನಿರೂಪಕಿಯಾಗಿ, ಬಿಗ್‌ಬಾಸ್ ಸೀಸನ್೭ ,ಬಿಗ್‌ಬಾಸ್ ಮಿನಿ ಸೀಸನ್,ಡ್ಯಾನ್ಸಿಂಗ್ ಚಾಂಪಿಯನ್, ಭರ್ಜರಿ ಬ್ಯಾಚುಲರ್ ಸೇರಿದಂತೆ ಅನೇಕ ರಿಯಾಲಿಟಿ ಶೋಗಳ ಸ್ಪರ್ಧಿಯಾಗಿ ಕಿರುತೆರೆಯಲ್ಲಿ ಒಂದೊಂದಾಗಿಯೇ ಇವರ ಹೆಜ್ಜೆ ಮುಂದೆ ಸಾಗುತ್ತಿದೆ. ಮುಖ್ಯವಾಗಿ ಈ ಹಾದಿಗೆ ಈಕೆಯ ಜೊತೆಯಾದವರೇ ತಾಯಿ ಹಾಗೂ ಅಕ್ಕ . ಆರಂಭದಲ್ಲಿ ಎಲ್ಲರಂತೆ ಇವರಿಗೂ ನಿರ್ಬಂಧಗಳಿದ್ದರೂ, ಮುಂದೆ ಬದಲಾಗಿ ತಮ್ಮ ಕನಸಿನ ಹಾದಿಯತ್ತ ಕೈ ಚಾಚುತ್ತಲೇ ಇದ್ದಾರೆ. ಮೂಲತಃ ಶಾಸ್ತ್ರೀಯ ನೃತ್ಯ ಹಾಗೂ ರಂಗ ಕಲಾವಿದೆ ಆದ ಇವರು ಕರಾವಳಿಯ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ತರಬೇತಿ ಪಡೆದಿದ್ದರು. ನಿನಾಸಂ, ರವೀಂದ್ರ ಕಲಾ ಕ್ಷೇತ್ರದಲ್ಲಿಯೂ ಸಾಧನೆಯ ಗರಿ ಹರಡಿವೆ.

'ಜೀವನದಲ್ಲಿ ನಮಗೆ ದೊಡ್ಡ ದೊಡ್ಡ ವ್ಯಕ್ತಿಗಳೇ ಪ್ರತಿ ಸಲವೂ ಸ್ಫೂರ್ತಿಯಾಗ ಬೇಕಾಗಿಲ್ಲ, ಬಾಳ ಪಯಣದ ಹಾದಿಯಲ್ಲಿ ಸಿಗುವ ಪ್ರತಿಯೊಬ್ಬರಿಂದಲೂ ಕಲಿಯಲೂ ಸಾಕಷ್ಟು ವಿಷಯಗಳಿರುತ್ತವೆ, ಹಾಗೂ ಅವುಗಳು ಬದೂಕಿಗೆ ಪ್ರೇರಣೆ ನೀಡುತ್ತವೆ ಎಂಬುದು ಚಂದನಾ ಅವರ ಅಭಿಪ್ರಾಯ'.

ತಮ್ಮ ಬಿಡುವಿನ ಸಮಯದಲ್ಲಿ ಮನೆಯವರಿಗೆ ಅಡುಗೆ ಮಾಡಿ ಬಡಿಸೋದನ್ನು ಸಕತ್ ಎಂಜಾಯ್ ಮಾಡುವ ಚಂದನಾ . ಸದ್ಯಕ್ಕೆ ಇವರ ನೆಚ್ಚಿನ ಕಲೆಯಾದ ಶಾಸ್ತ್ರೀಯ ನೃತ್ಯ ಕಾರ್ಯಕ್ರಮದಲ್ಲಿ, ಜೊತೆಗೆ ಜೀ ಕನ್ನಡ ವಾಹಿನಿಯ ಧಾರವಾಹಿಯೊಂದರಲ್ಲಿ ನಾಯಕಿಯಾಗಿ ನಟಿಸುತ್ತಾ ಸಖತ್ ಬ್ಯುಸಿಯಾಗಿದ್ದಾರೆ.

- ದಿವ್ಯ ದೇವಾಡಿಗ

 

MORE FEATURES

ಪ್ರವಾಸಿ ಸಾಹಿತ್ಯದಲ್ಲಿ ಆಶಾದಾಯಕ ಬೆಳವಣಿಗೆಯನ್ನು ಮೂಡಿಸುವ ಕೃತಿಯಿದು

17-10-2024 ಬೆಂಗಳೂರು

“ಪ್ರವಾಸ ಸಾಹಿತ್ಯ ಬರಹಗಾರನ ಕೌಶಲ್ಯತೆಯಿಂದ ಇಲ್ಲಿಯವರೆಗೆ ಏಕತಾನತೆಯ ಏಕಮುಖದ ದಿಕ್ಕನ್ನು ತಪ್ಪಿಸಿ ಎಲ್ಲಾ ದಿಕ್ಕ...

ಕೆನಡಾದಲ್ಲಿರುವ ಅಚ್ಚ ಕನ್ನಡಿಗ ಲೇಖಕ ಡಾ. ರಾಮಭಟ್ ಬಾಳಿಕೆ

17-10-2024 ಬೆಂಗಳೂರು

"ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಮುನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದರು. ಅನೇಕ ವಿಜ್ಞಾ...

ಓದಿಯೇ ಅನುಭವಿಸಬಹುದಾದ ಒಂದೊಳ್ಳೆಯ ಶುದ್ಧವಾದ ಪ್ರೇಮ

16-10-2024 ಬೆಂಗಳೂರು

"ವಿರಹದ ತಕ್ಕಡಿ ಹಿಡಿದು ತೂಗಲು, ಸಂಜೆಯ ಹೊತ್ತಿಗೆ ನೆನಪು ಮಾಡಿಕೊಂಡು ಕನಸು ಕಾಣಲು, ಎಷ್ಟು ಪ್ರೀತಿಸ್ತೀನಿ ಅಂತ ಅ...