ಬಣ್ಣಗಳ ರಂಗನ್ನು ಹೆಚ್ಚಿಸುವ ಜೈಪುರ ಸಾಹಿತ್ಯ ಉತ್ಸವ

Date: 19-01-2023

Location: ಜೈಪುರ


ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳ ಕಾಲ ಆನ್‌ ಲೈನ್‌ ಮೂಲಕ ನಡೆದಿದ್ದ ಜೈಪುರ ಸಾಹಿತ್ಯ ಉತ್ಸವ, ಇಂದು ಭೌತಿಕವಾಗಿ ಆರಂಭವಾಗುವ ಮೂಲಕ ಸಂಭ್ರಮದ ಉತ್ಸವಕ್ಕೆ ಚಾಲನೆ ದೊರೆತಿದೆ.

ಜೈಪುರದ ಹೋಟೆಲ್‌ ಕ್ಲಾರ್ಕ್‌ ಆಮೆರ್‌ ನಲ್ಲಿ ಇಂದಿನಿಂದ ಜ.23 ರವರೆಗೆ ಸಾಹಿತ್ಯ, ಸಂಸ್ಕೃತಿ, ಸಂಗೀತ, ವಿಚಾರ ವಿನಿಮಯಕ್ಕೆ ಲಕ್ಷಾಂತರ ಮಂದಿ ಸಾಹಿತ್ಯಾಸಕ್ತರು ಸಾಕ್ಷಿಯಾಗಲಿದ್ದಾರೆ.

16ನೇ ಆವೃತ್ತಿಯು, ಪ್ರಪಂಚದಾದ್ಯಂತದ ಸಾಹಿತ್ಯ, ಸಂಗೀತ, ಕಲೆ ಮತ್ತು ಚಲನಚಿತ್ರಕ್ಕೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ 350 ಭಾಷಣಕಾರರನ್ನು ಒಳಗೊಂಡಿದೆ. ಚುಮುಚುಮು ಚಳಿಯ ನಡುವೆ ಗುರುವಾರ ನೊಬೆಲ್ ಪ್ರಶಸ್ತಿ ವಿಜೇತ ಅಬ್ದುಲ್ ರಜಾಕ್ ಗುರ್ನಾ ಅವರು ಫ್ರಂಟ್ ಲಾನ್‌ನಲ್ಲಿಸಾಹಿತ್ಯೋತ್ಸವವನ್ನು ಉದ್ಘಾಟಿಸಿದರು. ರಾಜಸ್ಥಾನದ ಬಣ್ಣಗಳನ್ನು ಪ್ರದರ್ಶಿಸುವುದು ಈ ವರ್ಷದ ಥೀಮ್ ಆಗಿದೆ. ಇದು ಭಾರತೀಯ ಪದ್ಧತಿಯ ವಿವಾಹಗಳು ಮತ್ತು ಆಚರಣೆಗಳನ್ನು ಪ್ರತಿಧ್ವನಿಸಲಿದೆ.

ಜೈಪುರ ಸಾಹಿತ್ಯೋತ್ಸವದ ನಿರ್ಮಾಪಕ ಸಂಜಯ್ ರಾಯ್ ಮಾತನಾಡಿ, ಈ ಬಾರಿ ಹಸಿರು ಪರಿಕಲ್ಪನೆಯಲ್ಲಿ ಉತ್ಸವವನ್ನು ಆಯೋಜಿಸಲಾಗಿದೆ. ಆನ್‌ಲೈನ್ ನೋಂದಣಿಯ ನಂತರ ಜನರು ತಮ್ಮ ಬಾರ್‌ಕೋಡ್ ಪ್ರದರ್ಶಿಸಿ ಉತ್ಸವಕ್ಕೆ ಹಾಜರಾಗುತ್ತಿರುವುದು ಸಮ್ಮೇಳನಕ್ಕೆ ಮತ್ತಷ್ಟು ಹುರುಪು ನೀಡಿದೆ ಎಂದರು.

ಜೈಪುರದ ಪ್ರವಾಸೋದ್ಯಮ ಸಚಿವ ವಿಶ್ವೇಂದ್ರ ಸಿಂಗ್, ಟೀಮ್ ವರ್ಕ್ ಸಂಸ್ಥೆಯ ಆಡಳಿತ ನಿರ್ದೇಶಕ ಸಂಜಯ್ ಕೆ ರಾಯ್, ಸಹ ನಿರ್ದೇಶಕಿ ನಮಿತಾ ಗೋಖಲೆ ಮತ್ತು ವಿಲಿಯಂ ಡಾರ್ಲಿಂಪಲ್ ಮುಂತಾದವರು ಸಮ್ಮೇಳನದಲ್ಲಿದ್ದಾರೆ.

 

 

 

 

 

 

 

 

MORE NEWS

ಸುರಕ್ಷಿತ ಮತ್ತು ನೈರ್ಮಲ್ಯದ ಕುರಿತ ವಿಚಾರ ಸಂಕಿರಣ

05-02-2024 ಬೆಂಗಳೂರು

ಜೈಪುರ: 17ನೇ ಆವೃತ್ತಿಯ ಸಾಹಿತ್ಯ ಉತ್ಸವಕ್ಕೆ ‘ಭಾರತದ ಪಿಂಕ್ ಸಿಟಿ’ ಎಂದೇ ಹೆಸರಾಗಿರುವ ಜೈಪುರದಲ್ಲಿ ಸಂಭ...

ಯುವ ಸಾಹಿತಿಗಳ ಭರವಸೆಯ ಹುಮ್ಮಸ್ಸಿನೊಂದಿಗೆ ತೆರೆ

23-01-2023 ಜೈಪುರ

16ನೇ ಆವೃತ್ತಿಯ ಪ್ರತಿಷ್ಠಿತ, ಜೈಪುರ ಸಾಹಿತ್ಯ ಉತ್ಸವವು ಇದೇ 19ರಿಂದ ಆರಂಭಗೊಂಡು ಇಂದು ತೆರೆಕಂಡಿದೆ. ಐದು ದಿನಗಳ ಸಾಹಿ...

ಮುಂದಿನ ಪೀಳಿಗೆಯನ್ನು ಉತ್ತೇಜಿಸಿದ ಸಾಹಿತ್ಯ ಉತ್ಸವ : ಸಂಜಯ್‌ ರಾಯ್

23-01-2023 ಜೈಪುರ

ಜೈಪುರ ಸಾಹಿತ್ಯೋತ್ಸವದ 16ನೇ ಆವೃತ್ತಿಗೆ ಸೋಮವಾರ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಈ ಬಾರಿಯ ಉತ್ಸವದಲ್ಲಿ ಹೆಚ್ಚು ಯುವ...