ಕಪ್ಪು ಹಲ್ಲಿನ ಕಥೆ

Author : ಉಮೇಶ್ ತೆಂಕನಹಳ್ಳಿ

Pages 172

₹ 200.00




Year of Publication: 2024
Published by: ಪ್ರತಿಮಾ ಟ್ರಸ್ಟ್
Address: ರಂಗಲೋಕ, ರಾಘವೇಂದ್ರ ಸಾಮಿಲ್ ರಸ್ತೆ, ಗಾಯತ್ರಿ ಬಡಾವಣೆ, ಚನ್ನರಾಯಪಟ್ಟಣ, ಹಾಸನ, ಕರ್ನಾಟಕ 573116
Phone: 9448940602

Synopsys

ನಮ್ಮ ಹಿರಿಯರಿಗೆ ಎಲ್ಲಕ್ಕಿಂತ ಮುಖ್ಯವಾಗಿ ಅನುಭವದ ಜ್ಞಾನ ಹೆಚ್ಚಾಗಿತ್ತು. ಅದಕ್ಕೆ ಇಂದಿಗೂ ಜೀವಂತ ನಿದರ್ಶನಗಳು ಕಣ್ಣ ಮುಂದೆ ನಿಲ್ಲುತ್ತವೆ. ಕೆರೆ ಕಟ್ಟೆಗಳ ಪರಿಕಲ್ಪನೆ, ಎಲ್ಲರೂ ಎಲ್ಲರಿಗೋಸ್ಕರ ಎಂಬ ಸಂತೆಯ ಪರಿಕಲ್ಪನೆ. ದೇಶವಾರು, ಪ್ರಾಂತ್ಯವಾರು ಆಹಾರ ಪದ್ಧತಿ ಇರಬಹುದು. ಹವಾಮಾನಕ್ಕೆ ಅನುಗುಣವಾಗಿ ನಮ್ಮ ಉಡುಗೆ ತೊಡಿಗೆಗಳು, ಕಾಲಕ್ಕೆ ತಕ್ಕಂತೆ ಸಂಪ್ರದಾಯಗಳ ಆಚರಣೆಗಳು, ಊರಿಗೊಂದು ಅರಳಿ ಕಟ್ಟೆ, ಆಯುರ್ವೇದದ ವೈದ್ಯಕೀಯ ಪದ್ಧತಿ, ಅಧಿಕೃತ ಆಹ್ವಾನ ಇಲ್ಲದೆ ಸುತ್ತ ಮುತ್ತಲಿನ ನೂರಾರು ಹಳ್ಳಿಯ ಲಕ್ಷಾಂತರ ಜನರನ್ನು ಒಗ್ಗೂಡಿಸಿ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಜಾತ್ರೆಗಳ ಪರಿಕಲ್ಪನೆ, ಇವೆಲ್ಲವೂ ನಿಜಕ್ಕೂ ಅದ್ಭುತ. ಹೀಗೆ ಹೇಳುತ್ತ ಹೋದರೆ ಬಹಳ ವಿಷಯಗಳು ಉಂಟು. ಈ ಕಪ್ಪು ಹಲ್ಲಿನ ಕಥೆಯನ್ನು ಅದೇ ಆಶಯದೊಂದಿಗೆ ಬರೆದಿದ್ದೇನೆ. ಇಲ್ಲಿ ಯಾವುದೂ ಕಾಲ್ಪನಿಕವಲ್ಲ. ಅನುಭವದ ಕಥೆ ಎಂಬುದು ಸ್ಪಷ್ಟ, ತುಂಬು ಜೀವನ ಮಾಡಿದ ಗೌರಮ್ಮಳ ಭಾಷೆ, ಅವಳ ಬೈಗುಳ, ನಡೆ ನುಡಿಗಳು ನಮ್ಮ ನಯ ನಾಜೂಕಿನ ಬದುಕಿಗೆ ಇರಿಸು-ಮುರಿಸು ತರಬಹುದು. ಆದರೆ ಇಂದಿನ ಕಾಲದಲ್ಲಿ ಸಣ್ಣ ಸಣ್ಣ ವಿಷಯಗಳಿಗೆ, ಜಗಳಗಳಿಗೆ ಪೋಲೀಸ್ ಕಪ್ಲೇಂಟ್, ಡೈವರ್ಸ್ ಎನ್ನುತ್ತಿರುವಾಗ ಗೌರಮ್ಮಳ ಬದುಕಿಗೆ ಹೇಗೆ ಹೋಲಿಸಲು ಸಾಧ್ಯ? ಕಷ್ಟಗಳನ್ನು ಮೆಟ್ಟಿನಿಂತು ಎಂತಹ ಸಂದರ್ಭದಲ್ಲೂ ಧೃತಿಗೆಡದೆ ತನ್ನ ಬಂಜೆತನದ ಅವಮಾನಗಳನ್ನು ಸಹಿಸಿಕೊಂಡು, ತನ್ನ ಗಂಡನ ಕಿರುಕುಳಕ್ಕೆ ತಂದೆಯೇ ತವರಿಗೆ ಕರೆದಾಗ ಅದನ್ನು ಸಾರಾಸಗಟಾಗಿ ತಿರಸ್ಕರಿಸಿ, ಗಂಡನೇ ಸೋಲುವಂತೆ ಮಾಡಿ ತನ್ನ ಕುಟುಂಬವನ್ನು ಉಳಿಸಿಕೊಂಡ ಗೌರಮ್ಮ, ನನಗೆ ಹೆಮ್ಮರವಾಗಿ ಕಾಣುತ್ತಾಳೆ. ನಡೆ ನುಡಿ ತುಂಬಾ ಒರಟು ಎನ್ನುವುದು ನನಗೆ ದೊಡ್ಡ ವಿಷಯವೇ ಅಲ್ಲ. ಅವಳು ಪ್ರತಿದಿನ, ಪ್ರತಿಕ್ಷಣ, ಕೌಟುಂಬಿಕವಾಗಿ, ಸಮಾಜ ಮುಖಿಯಾಗಿ ಸಹಾನುಭೂತಿಯಾಗಿ, ಕರುಣಾಮಯಿಯಾಗಿ ಕಾಣುತ್ತಾಳೆ.