ಅನನ್ಯತೆ ಅನ್ಯ

Author : ಸಿ.ಎನ್. ರಾಮಚಂದ್ರನ್

₹ 110.00




Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

‘ಅನನ್ಯತೆ ಅನ್ಯ’ ಸಿ. ಎನ್‌. ರಾಮಚಂದ್ರನ್‌ ಅವರ ಕೃತಿ. ಕಳೆದ ಆರೇಳು ವರ್ಷಗಳಲ್ಲಿ, ಪತ್ರಿಕೆಗಳಿಗೆ ಬರೆದ ಕಿರು ಲೇಖನಗಳಲ್ಲಿ ಆಯ್ದ ೨೮ ಲೇಖನಗಳ ಸಂಕಲನ “ಅನನ್ಯತೆ-ಅನ್ಯ.” ಇವುಗಳಲ್ಲಿ, “ಸ್ಮೃತಿ-ಪುರಾಣಗಳು ಮತ್ತು ಮಹಿಳೆ” ಎಂಬ ದೀರ್ಘ ಲೇಖನ, ಇಂಗ್ಲೀಷ್ ಲೇಖನದ ಅನುವಾದ; ಉಳಿದವೆಲ್ಲವೂ ಸಾಂದರ್ಭಿಕ ಲೇಖನಗಳು, ಜಾತಿ ಧರ್ಮ ಲಿಂಗ - ಭಾಷೆಗಳನ್ನಾಧರಿಸಿ - ಸಮುದಾಯಗಳು ತಮ್ಮ ಅನನ್ಯತೆಯನ್ನು ಕಟ್ಟಿಕೊಳ್ಳುವ ಹಾಗೂ ಇತರರನ್ನು 'ಅನ್ಯ'ರನ್ನಾಗಿಸುವ ಪ್ರಕ್ರಿಯೆ ಎಲ್ಲಾ ಸಮಾಜಗಳಲ್ಲಿಯೂ ಸದಾ ಕ್ರಿಯಾಶೀಲ ವಾಗಿರುವುದರಿಂದ ಈ ಸಂಕಲನದಲ್ಲಿರುವ ಲೇಖನಗಳು ಸಾಂದರ್ಭಿಕವಾಗಿದ್ದರೂ ಇಂದಿಗೂ ಅವು ಪ್ರಸ್ತುತ ಎಂಬ ನಂಬಿಕೆಯಿಂದ ಈ ಸಂಕಲನವನ್ನು ಹೊರ ತರಲಾಗಿದೆ.

About the Author

ಸಿ.ಎನ್. ರಾಮಚಂದ್ರನ್

ರಾಮಚಂದ್ರನ್ ಅವರು ಜನಿಸಿದ್ದು (ಜ ೧೯೩೬) ಮೈಸೂರು ಜಿಲ್ಲೆಯ ಚಿಲ್ಕುಂದ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಅಮೆರಿಕೆಯ ಮಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ. ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ, ಸೌದಿ ಅರೇಬಿಯಾ, ಸೋಮಾಲಿಯಾಗಳಲ್ಲಿ ಅಧ್ಯಾಪಕರಾಗಿ ಕಾರ್‍ಯ ನಿರ್ವಹಿಸಿದ್ದಾರೆ. ೧೯೯೬ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅಧ್ಯಾಪಕರಾಗಿ ನಿವೃತ್ತಿ. ಸಾಹಿತ್ಯ ವಿಮರ್ಶೆ, ವಸಾಹತೋತ್ತರ ಚಿಂತನೆ, ತೌಲನಿಕ ಸಾಹಿತ್ಯ, ಪರಂಪರೆ ಪ್ರತಿರೋಧ, ಎಡ್ವರ್ಡ್ ಸೈದ್, ಬಯಲುರೂಪ, ರಕ್ತ-ರೂಪಣೆ, ಹೊಸ ಮಡಿಯ ಮೇಲೆ ಚದುರಂಗ, ಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳು ವಿಮರ್ಶಾ ಕೃತಿಗಳು. ಶೋಧ ಕಾದಂಬರಿ, ಕಸಾಂದ್ರ ಕಥಾ ಸಂಕಲನ. ಇನಾಂದಾರ್ ಪ್ರಶಸ್ತಿ, ...

READ MORE