ಸಂಚು ವಂಚನೆಗಳ ಲೋಕದಲ್ಲಿ

Author : ಕೆ.ಬಿ. ಸೂರ್ಯಕುಮಾರ್

Pages 196

₹ 230.00




Year of Publication: 2024
Published by: ಹರಿವು ಬುಕ್ಸ್
Address: #67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿ.ವಿ.ಜಿ ರಸ್ತೆ, ನಾಗಸಂದ್ರ ಸರ್ಕಲ್ ಹತ್ತಿರ, ಬಸವನಗುಡಿ, ಬೆಂಗಳೂರು - 560004
Phone: 8088822171

Synopsys

ಪ್ರಸ್ತುತ ಕೃತಿಯಾದ 'ಸಂಚು ವಂಚನೆಗಳ ಲೋಕದಲ್ಲಿ' ಎಂಬ ಈ ಸಂಚಿಕೆಯಲ್ಲಿ ಸಮಾಜಕ್ಕೆ ಪಾಠವಾಗಬಹುದಾದ ಕೆಲವು ಸಂದರ್ಭಗಳನ್ನು ಲೇಖಕರಾದ ಡಾ. ಮೈಸೂರು ನಾಗರಾಜ ಶರ್ಮಾ ಅವರು ಆಸಕ್ತಿಕರವಾಗಿಯೇ ನಿರೂಪಿಸಿದ್ದಾರೆ ಎನ್ನಬೇಕು. ಸ್ವತ: ಚಿತ್ರಕಲಾವಿದರು, ಛಾಯಾಗ್ರಹಕರು ಹಾಗೂ ಲೇಖಕರೂ ಆದ ಡಾ. ಮೈನಾ. ಶರ್ಮಾ ಅವರು ಎಂದಿನಂತೆ, ಈ ಕೃತಿಯಲ್ಲಿಯೂ ತಮ್ಮ ಎಲ್ಲಾ ಪ್ರತಿಭೆಗಳನ್ನೂ ಸಿಂಚನಗೊಳಿಸಿ ಪ್ರಸ್ತುತಪಡಿಸಿದ್ದಾರೆ. ಸತ್ಯಘಟನೆಗಳನ್ನು ನೀರಸವಾಗಿ ವಿವರಿಸದೆ, ಅದನ್ನು ಸ್ವಾರಸ್ಯಕರ ವಾದ ಒಂದು ಕಥಾರೂಪದಲ್ಲಿಯೇ ಸಮಾಜದ ಮುಂದಿಡುವ ಪ್ರಯತ್ನ ನಡೆಸಿದ್ದಾರೆ. ಪ್ರಾಚೀನ ಭಾರತೀಯ ನಿರೂಪಣೆಗಳಾದ; ಹಿತೋಪದೇಶ, ಪಂಚತಂತ್ರ ಹಾಗೂ ಕಾಕೋಲೋಕೀಯ ಮುಂತಾದ ಸಾಹಿತ್ಯಗಳಲ್ಲಿಯೂ ಇಂತಹುದೇ ಪಾಠ ಹಾಗೂ ರಂಜನೆಗಳ ಉಭಯ ಪ್ರಯತ್ನಗಳನ್ನು ಸ್ಪಷ್ಟವಾಗಿ ಗುರುತಿಸ ಬಹುದಾಗಿದೆ.

About the Author

ಕೆ.ಬಿ. ಸೂರ್ಯಕುಮಾರ್

ಕೆ.ಬಿ. ಸೂರ್ಯಕುಮಾರ್ ಮೂಲತಃ ಕೊಡಗಿನವರು. ವೃತ್ತಿಯಲ್ಲಿ ವೈದ್ಯರಾಗಿರುವ ಅವರು ಪ್ರವೃತ್ತಿಯಲ್ಲಿ ಬರಹಗಾರರು. ವಿಧಿ ವಿಜ್ಞಾನ ವಿಭಾಗದಲ್ಲಿ ತಜ್ಞತೆ ಹೊಂದಿರುವ ಇವರು, ಸುಮಾರು ನಾಲ್ಕು ದಶಗಳಿಗಿಂತ ಹೆಚ್ಚಿನ ವೈದ್ಯಕೀಯ ಅನುಭವಗಳನ್ನು ಹೊಂದಿದ್ದು, ಪ್ರಸ್ತುತ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಆಗಿ ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದಾರೆ. ಕೃತಿಗಳು: 'ವೈದ್ಯ ಕಂಡ ವಿಸ್ಮಯ', 'ಕೌತುಕಗಳ ಮಾಯಾಜಾಲ', 'ವೈದ್ಯ ಲೋಕದ ಕಥೆಗಳು', 'ನಿಗೂಢ ಕೊಲೆಗಳು', ‘ವೈದ್ಯಕೀಯ ಕೈಪಿಡಿ’  ...

READ MORE