‘ವ್ಯಂಗ್ಯಚಿತ್ರ ಚರಿತ್ರೆ’ ಲೇಖಕ ಜೆ. ಬಾಲಕೃಷ್ಣ ಅವರ ಕೃತಿ. ಈ ಕೃತಿಗೆ ಹಿರಿಯ ವ್ಯಂಗ್ಯಚಿತ್ರಕಾರ ವಿ.ಜಿ. ನರೇಂದ್ರ ಬೆನ್ನುಡಿ ಬರೆದಿದ್ದಾರೆ. ವ್ಯಂಗ್ಯಚಿತ್ರ ಕಲೆ ಭಾಷೆಯ ಹಂಗಿಲ್ಲದೆ ಇಡೀ ಜಗತ್ತಿನಾದ್ಯಂತ ಪಸರಿಸಿದ ಒಂದು ಅದ್ಭುತ ಕಲೆ. ವ್ಯಂಗ್ಯಚಿತ್ರ ಕಲೆ ಜನಪ್ರಿಯ ಕಲೆಯಾಗಿ ಬೆಳೆದಿದ್ದರೂ ಕನ್ನಡದಲ್ಲಿ ಈ ಕಲೆಯು ಇತಿಹಾಸದ ಬಗ್ಗೆ, ಹಿರಿಮೆಯ ಬಗ್ಗೆ ಪುಸ್ತಕಗಳು ಪ್ರಕಟವಾಗಿದ್ದು ತುಂಬ ವಿರಳ, ಜೆ. ಬಾಲಕೃಷ್ಣ ಅವರ ಈ ಕೃತಿ ಆ ಕೊರತೆಯನ್ನು ಹೋಗಲಾಡಿಸಲು ನೆರವಾದೀತು ಎನ್ನುತ್ತಾರೆ ವಿ.ಜಿ. ನರೇಂದ್ರ. ಈ ಕಲೆಯ ಇತಿಹಾಸದ ಬಗ್ಗೆ ಬಾಲಕೃಷ್ಣ ಅವರು ಸಾಕಷ್ಟು ಮಾಹಿತಿ ಕಲೆಹಾಕಿದ್ದಲ್ಲದೇ ಅದಕ್ಕೆ ಪೂರಕವಾದ ಚಿತ್ರಗಳನ್ನು ಸಂಗ್ರಹಿಸಲು ವಹಿಸಿದ ಶ್ರಮವನ್ನು ಮೆಚ್ಚಬೇಕಾದದ್ದೇ, ಅದರಲ್ಲೂ ಕನ್ನಡಿಗರಿಗೆ ಈ ಕಲೆಯನ್ನು ಪರಿಚಯಿಸಲು ಅವರು ಆಯ್ದುಕೊಂಡ ರೀತಿ ಅತ್ಯಂತ ಪ್ರಶಂಸನಾರ್ಹವಾದ್ದು, ಸಂಶೋಧನಾತ್ಮಕ ಗುಣಗಳನ್ನು ಹೊಂದಿದ ಲೇಖನಗಳ ಈ ಸಂಗ್ರಹ ವ್ಯಂಗ್ಯಚಿತ್ರಕಲೆಯ ಆಸಕ್ತರಿಗೆ ಕೊಡುಗೆಯಾಗಿದೆ ಎನ್ನುತ್ತಾರೆ ನರೇಂದ್ರ. ಈ ಕೃತಿಯಲ್ಲಿ ವ್ಯಂಗ್ಯಚಿತ್ರ - ಒಂದು ಚರಿತ್ರೆ-ಭಾರತದಲ್ಲಿ ವ್ಯಂಗ್ಯಚಿತ್ರಗಳು, ಕರ್ನಾಟಕ ವ್ಯಂಗ್ಯಚಿತ್ರ ಕ್ಷೇತ್ರ ಪರಿಚಯ, ಸ್ಥಳೀಯ ರಾಜಕಾರಣದಲ್ಲಿ ವ್ಯಂಗ್ಯಚಿತ್ರಗಳು, ಗ್ರೀಕ್ ಕುಂಬಾರಿಕೆ ಕಲೆಯಲ್ಲಿ ಆದಿಮ ವ್ಯಂಗ್ಯಚಿತ್ರಗಳು, ಸ್ಪ್ಯಾನಿಶ್ ಫ್ಲೂ- ಸಾವಿನ ನೆರಳಲ್ಲಿ ವ್ಯಂಗ್ಯದ ಚಿಗುರು, ಬಾಪು ಮತ್ತು ವ್ಯಂಗ್ಯಚಿತ್ರ, ಟಿಪ್ಪು ಸುಲ್ತಾನ್ - ಮಳೆಯ ಆಗಮನ, ಡಾ. ಅಂಬೇಡ್ಕರ್ ಮತ್ತು ವ್ಯಂಗ್ಯಚಿತ್ರ, ಡಾರ್ವಿನ್ ಮತ್ತು ವ್ಯಂಗ್ಯಿಚಿತ್ರ, ಬಾಬರಿ ಮಸೀದಿಯ ದುರಂತ ಮತ್ತು ವ್ಯಂಗ್ಯಚಿತ್ರ, ಸರ್ವಾಧಿಕಾರಿ ಹಿಟ್ಲರ್ ಮತ್ತು ವ್ಯಂಗ್ಯಚಿತ್ರ, ಸರ್ವಾಧಿಕಾರಿ ಹಿಟ್ಲರ್ ಮತ್ತು ವ್ಯಂಗ್ಯಚಿತ್ರ, ಅಸ್ಪೃಶ್ಯತೆಯ ವ್ಯಂಗ್ಯ, ನೋಟು ಅಮಾನ್ಯೀಕರಣ- ವ್ಯಂಗ್ಯಚಿತ್ರಕಾರರ ಅಚ್ಚೇ ದಿನ್. ವ್ಯಂಗ್ಯಚಿತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ. ಡಾನ್ ಕ್ವಿಕ್ಸೋಟ್- ವಾಸ್ತವತೆಯ ಮರುವ್ಯಾಖ್ಯಾನ. ಪ್ಲೇಬಾಯ್ ವ್ಯಂಗ್ಯಚಿತ್ರಗಳು, ಶಿಲೆಯಲ್ಲವೀ ಮೆಟ್ರೋ ಸ್ಟೇಶನ್ ಸೇರಿಗಂತೆ ಹಲವು ಮಹತ್ವದ ಲೇಖನಗಳು ಸಂಕಲನಗೊಂಡಿವೆ.
©2024 Book Brahma Private Limited.