’ಶ್ವೇತಭವನ ಕಥನ’ ಎರಡು ಭಾಗಗಳನ್ನು ಹೊಂದಿದೆ. ‘ಚುನಾವಣಾ ಕಥನ’ ಭಾಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ವಿವರಿಸುವ 17 ಲೇಖನಗಳು ಇವೆ. ಪ್ರಾಥಮಿಕ ಹಂತದ ಚುನಾವಣೆಗಳು ಹೇಗೆ ನಡೆಯುತ್ತವೆ, ರನ್ನಿಂಗ್ ಮೇಟ್ ಆಯ್ಕೆಗೆ ಬಳಸುವ ಮಾನದಂಡವೇನು, ಅಧ್ಯಕ್ಷೀಯ ಸಂವಾದದಲ್ಲಿ ಗಮನಿಸುವ ಅಂಶಗಳೇನು, ಅಧಿಕಾರ ಹಸ್ತಾಂತರ ಹೇಗೆ ನಡೆಯುತ್ತದೆ ಎಂಬಿತ್ಯಾದಿ ವಿವರಗಳ ಜೊತೆ ಚಾರಿತ್ರಿಕ ಘಟನೆಗಳು, ಸ್ವಾರಸ್ಯಕರ ಪ್ರಸಂಗಗಳು ಇವೆ. ‘ವ್ಯಕ್ತಿ/ವಿಚಾರ ಮಂಥನ’ ಭಾಗದಲ್ಲಿ ವಾಷಿಂಗ್ಟನ್ ಹಾಗೂ ಜೆಫರ್ಸನ್ ಅವರಿಂದ ಮೊದಲ್ಗೊಂಡು ತಮ್ಮ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿರುವ ಅಧ್ಯಕ್ಷರು ಹಾಗೂ ಅವರು ಎದುರಿಸಿದ ಸವಾಲುಗಳನ್ನು ಲೇಖಕ ಸುಧೀಂದ್ರ ಬುಧ್ಯ ಅವರು ಅವಲೋಕಿಸಿದ ಬರಹಗಳು ಇವೆ.
ರೊನಾಲ್ಡ್ ರೇಗನ್ ಅವಧಿಯಲ್ಲಿ ಸೋವಿಯತ್ ಜೊತೆ ಸಂಬಂಧ ಸುಧಾರಿಸಿಕೊಳ್ಳಲು ಅಮೆರಿಕ ಮುಂದಡಿಯಿಟ್ಟಿತು. ಆ ಪ್ರಕ್ರಿಯೆ ಮಹತ್ವದ್ದು. ಹಾಗಾಗಿ ರೇಗನ್ ಕುರಿತ ಅಧ್ಯಾಯ ವಿಸ್ತಾರವಾಗಿ ಬಂದಿದೆ. ವಿವಿಧ ರಾಜತಾಂತ್ರಿಕ ಹುದ್ದೆಗಳನ್ನು ನಿರ್ವಹಿಸಿ, 8 ವರ್ಷಗಳ ಕಾಲ ಉಪಾಧ್ಯಕ್ಷರಾಗಿ, 4 ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಬುಷ್ ಸೀನಿಯರ್ ಅಮೆರಿಕ ಕಂಡ ವಿಶಿಷ್ಟ ರಾಜಕಾರಣಿ. ಹಾಗಾಗಿ ಅವರ ಕುರಿತ ಅಧ್ಯಾಯವೂ ವಿಸ್ತೃತವಾಗಿ ಬಂದಿದೆ. ಇನ್ನುಳಿದ ಅಧ್ಯಕ್ಷರ ಜೀವನ ಕಥನವನ್ನು ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ.
‘ಶ್ವೇತ ಭವನ ಕಥನ’ ಕೃತಿಯ ಕುರಿತು ಲೇಖಕ ಸುಧೀಂದ್ರ ಬುಧ್ಯ ಅವರ ಮಾತು
©2025 Book Brahma Private Limited.