ಐನ್‌ಸ್ಟೈನ್ ಎಂಬ ದಂತಕತೆಯ ಮೂಲಕ ಪ್ರಾರಂಭವಾಗುವ ಈ ಕೃತಿಯು ನಿಧಾನಕ್ಕೆ ವಿಜ್ಞಾನದ ಆಳಕ್ಕೆ ಹೊರಳಿಕೊಳ್ಳುತ್ತಾ ಆತ ಪ್ರತಿಪಾದಿಸಿದ ಸಾಪೇಕ್ಷತಾ ಸಿದ್ಧಾಂತದ ಆಂತರ್ಯವನ್ನು ಓದುಗರಿಗೆ ಪರಿಚಯಿಸುತ್ತದೆ. ಚಲನೆ, ಬಲ ಮತ್ತು ವೇಗೋತ್ಕರ್ಷಗಳ ಸಂಯೋಜನೆಯಲ್ಲಿ ರೂಪುಗೊಂಡ ಐನ್‌ಸ್ಟೈನ್ ನ ಈ ಸಿದ್ಧಾಂತವು ರೇಖಾಗಣಿತ, ಖಗೋಳಶಾಸ್ತ್ರ, ಗುರುತ್ವ ಶಕ್ತಿಗಳಂತಹ ವಿಜ್ಞಾನದ ಎಲ್ಲಾ ರೀತಿಯ ಮಜಲುಗಳನ್ನೂ ದಾಟಿ ನಿಲ್ಲುತ್ತದೆ. ಈ ಕೃತಿಯಲ್ಲಿ ಲೇಖಕ ಡಾ. ಬಿ. ಸಿದ್ದಲಿಂಗಪ್ಪನವರು ಐನ್‌ಸ್ಟೈನ್ ರ ,ಸಾಧನೆಯನ್ನು ಸಾಹಸವನ್ನು ಅಚ್ಚುಕಟ್ಟಾಗಿ ಒಂದುಗೂಡಿಸಿ ಈ ಕೃತಿಯನ್ನು ರಚಿಸಿದ್ದಾರೆ.
©2024 Book Brahma Private Limited.