ಎಸ್.ಡಿ. ಬರ್ಮನ್ ಸಂಗೀತ ಪ್ರಪಂಚ

Author : ಅದಮಾರು ಶ್ರೀಪತಿ ಆಚಾರ್ಯ

Pages 336

₹ 336.00




Published by: ದೇಸಿ ಪುಸ್ತಕ
Address: ದೇಸಿ ಪುಸ್ತಕ, ವಿಜಯನಗರ, ಬೆಂಗಳೂರು

Synopsys

ಭಾರತದ ಪ್ರಸಿದ್ದ ಸಂಗೀತ ಸಂಯೋಜಕ ಸಚಿನ್ ದೇವ್ ಬರ್ಮನ್‌ರವರು ತನ್ನ ವೃತ್ತಿಬದುಕುನ್ನು ಬೆಂಗಾಲಿಯಿಂದ ಅರಂಭಿಸಿ ಹಿಂದಿ ಸಿನಿಮಾದ ವರೆಗೆ ವಿಸ್ತರಿಸಿದರು. ಹಾಡುಗಳ ಮೂಲಕ ಅವರು ಅಭಿಮಾನಿಗಳ ಹೃದಯದಲ್ಲಿ ಅಜರಾಮರರಾದರು.ಗಾಯಕರಾಗಿಯೂ ಅವರು ಜನಪ್ರಿಯರು. ಬಾಲಿವುಡ್‌ನ ಯಶಸ್ವಿ ಸಂಗೀತ ಸಂಯೋಜಕರಲ್ಲಿ ಒಬ್ಬರಾದ ಬರ್ಮನ್ ತ್ರಿಪುರದ ರಾಜಮನೆತನಕ್ಕೆ ಸೇರಿದವರು.“ಉತ್ತಮ ಕಥಾವಸ್ತು ಮತ್ತು ಸಮರ್ಥ ನಿರ್ದೇಶನವಿರುವ ಚಿತ್ರಗಳಲ್ಲಿ ಹಾಡುಗಳು, ಸಂಗೀತ ಅನಿವಾರ್ಯವೇನಲ್ಲ. ಆದರೆ ದುರ್ಬಲ ಕಥಾವಸ್ತು ಹೊಂದಿರುವ ಚಿತ್ರಗಳ ಮಟ್ಟಿಗೆ ಸಂಗೀತವೇ ಜೀವ ಉಳಿಸುವ ಸಾಧನ' ಎಂದು ಸಿನಿ ಸಂಗೀತದ ಅವಶ್ಯಕತೆಯನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

About the Author

ಅದಮಾರು ಶ್ರೀಪತಿ ಆಚಾರ್ಯ
(15 March 1943)

ಎಡಪಂಥೀಯ ಕಾರ್ಮಿಕ ಸಂಘಟನೆ ಮತ್ತು ಎಡಪಂಥೀಯ ರಾಜಕೀಯ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅದಮಾರು ಶ್ರೀಪತಿ ಆಚಾರ್ಯ ಅವರು ಮೂಲತಃ ಉಡುಪಿಯವರು. ಮೂರು ದಶಕಗಳಿಗೂ ಹೆಚ್ಚು ಕಾಲ LIC ಉಡುಪಿ ಮತ್ತು ಬೆಂಗಳೂರು  ವಿಭಾಗಗಳಲ್ಲಿಅಲ್ಲಿನ ಕಾರ್ಮಿಕ ಸಂಘಟನೆಯಾದ ಅಖಿಲ ಭಾರತ ವಿಮಾ ನೌಕರರ ಸಂಘದಲ್ಲಿ ವಿಭಾಗೀಯ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದಾರೆ.   1943ರ ಮಾರ್ಚ್‌ 15ರಂದು ಜನಿಸಿದ ಆಚಾರ್ಯರು ಇಂಗ್ಲಿಷ್ ಎಂ.ಎ ಪದವೀಧರರು. ಭಾರತೀಯ ಜೀವ ವಿಮಾ ನಿಗಮದಲ್ಲಿ ಮೂವತ್ತೆಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.  ’ಜನವಾಹಿನಿ’ ದೈನಿಕದಲ್ಲಿ ...

READ MORE