ನೀವೇ ಪ್ರಮಾಣು

Author : ಚೆನ್ನವೀರ ಕಣವಿ

Pages 70

₹ 50.00




Year of Publication: 2007
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಸಂ. 9, ’ರಮ್ಯ’, ಗೋಕುಲಂ, 3ನೆಯ ಹಂತ, ಮೈಸೂರು
Phone: 2513821/9880749412

Synopsys

ಹಿರಿಯ ಕವಿ ಚೆನ್ನವೀರ ಕಣವಿಯವರ 16ನೆಯ ಸಂಕಲನ ’ನೀವೇ ಪ್ರಮಾಣು’. ಈ ಸಂಕಲನದಲ್ಲಿ 80 ಕವಿತೆಗಳಿವೆ.  20ನೆಯ ಶತಮಾನದ ಎಲ್ಲ ಸಾಹಿತ್ಯ ಚಳುವಳಿಗೆ ಸ್ಪಂದಿಸುತ್ತ ಬಂದ ಹಿರಿಯ ಜೀವ ಕಣವಿ. ಪರಂಪರೆ ಮತ್ತು ಪ್ರಗತಿಗಳೆರಡರಲ್ಲೂ ಆಸಕ್ತಿ ಹೊಂದಿರುವ ತಮ್ಮ ಎಲ್ಲ ಕವಿತೆಗಳಲ್ಲಿ ಆ ಗುಣ ಕಾಯ್ದುಕೊಂಡು ಬಂದಿದ್ದಾರೆ.

ಈ ಸಂಕಲನದಲ್ಲಿ ಕಣವಿಯವರು ಒಂಬತ್ತು ಗೇಯ ಕವಿತೆಗಳು, ಇಪ್ಪತ್ನಾಲ್ಕು ಬಿಡಿಗವನಗಳು, ಹದಿನೈದು ಅನುವಾದಿತ ಕವಿತೆಗಳಿವೆ. ಈ ಸಂಕಲನದ ಕವನಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಕವಿತೆಗಳು ಸುನೀತಗಳು ಎಂಬುದು ವಿಶೇಷ. ಸುನೀತಗಳಲ್ಲಿ ಸಾಹಿತಿ, ಸಂಗೀತ, ಕಾವ್ಯ-ಕಲಾವಿದರನ್ನು ಮೆಚ್ಚಿ ಬರೆದ ವ್ಯಕ್ತಿಗೀತಗಳು ಗಮನ ಸೆಳೆಯುತ್ತವೆ.

About the Author

ಚೆನ್ನವೀರ ಕಣವಿ
(28 June 1928)

‘ಸಮನ್ವಯ ಕವಿ’ ಎಂದು ಗುರುತಿಸಲಾಗುವ ಚೆನ್ನವೀರ ಕಣವಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಗಳೆರಡರಲ್ಲಿಯೂ ಸಕ್ರಿಯವಾಗಿ ಪಾಲುಗೊಂಡವರು. ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ. ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಗಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ 1958ರಲ್ಲಿ ಅದರ ನಿರ್ದೇಶಕರಾದರು. ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ...

READ MORE

Related Books