ಸಾಹಿತಿ, ಸಂಶೋಧಕ, ಸ್ವಾತಂತ್ಯ್ರ ಹೋರಾಟಗಾರರಾದ ಕಪಟರಾಳ ಕೃಷ್ಣರಾಯರು ಕನ್ನಡ ಭಾಷೆ ಮತ್ತು ಸಂಸ್ಕೃತಿ, ಸಂಶೋಧನೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟವರು.
ಕರ್ನಾಟಕದ ಧಾರ್ಮಿಕ ರಂಗದಲ್ಲಿ 11-12 ನೆಯ ಶತಮಾನಗಳ ಕನ್ನಡ ಶಿಲಾಲೇಖಗಳಲ್ಲಿ ಕಂಡು ಬಂದಿರುವ ಲಾಕುಳಶೈವರ ಬಗೆಗಿನ ಪ್ರಮುಖವಾದ ಉಲ್ಲೇಖಗಳು ಈ ಕೃತಿಯಲ್ಲಿ ದೊರೆಯುತ್ತವೆ. ಕರ್ನಾಟಕದಲ್ಲಿ ಲಾಕುಳಶೈವರ ಆಗಮನದ ಪ್ರಚಾರದ ಅವಶೇಷಗಳು ಶಿಲ್ಪದಲ್ಲಿ ಕಂಡ ಬಗ್ಗೆ, ಐಹೊಳೆ, ಪಟ್ಟದಕಲ್ಲು ಇತ್ಯಾದಿ ಸ್ಥಳಗಳಲ್ಲಿ ಆ ಕುರುಹುಗಳನ್ನು ಈಗಲೂ ಕಾಣಬಹುದಾದ ವಿವರಗಳನ್ನು ಕಪಟರಾಳರು ಪುಸ್ತಕದಲ್ಲಿ ಒದಗಿಸಿದ್ಧಾರೆ.
ಕಪಟರಾಳ ಕೃಷ್ಣರಾಯರ ಮನೆತನದ ಇತಿಹಾಸ, ಮತ್ತು ಅವರನ್ನು ಕುರಿತಂತೆ ಮಹನೀಯರ ಅಭಿಪ್ರಾಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಮತ್ತು ಮುಖ್ಯವಾಗಿ ಕನ್ನಡ ನಾಡು-ನುಡಿಯ ಇತಿಹಾಸವನ್ನು ವಿವರಿಸಿದ್ಧಾರೆ. ಕಪಟರಾಳ ಕೃಷ್ಣರಾಯರು ತಮ್ಮ ಆಳವಾದ ಅಧ್ಯಯನದಿಂದ ಸುಮಾರು 30 ಕ್ಕೂ ಅಧಿಕ ಲೇಖನಗಳನ್ನು ಬರೆದಿದ್ಧಾರೆ. ಪುಸ್ತಕದಲ್ಲಿ ದಾಖಲಾದ ಸಂಪೂರ್ಣ ಅಧ್ಯಯನ ಸಾಮಗ್ರಿಯನ್ನು ನೋಡಿದಾಗ ಕಪಟರಾಳರ ವಿದ್ವತ್ತಿನ ಪರಿಚಯವಾಗುತ್ತದೆ.
ಕಪಟರಾಳರ ಬದುಕು ಬರಹ ಕುರಿತು ಪ್ರೊ. ಧ್ರುವನಾರಾಯಣ ಅನೇಕ ಕೃತಿಗಳನ್ನು ಹೊರತಂದಿದ್ದರು ಅದರ ಭಾಗವಾಗಿ ’ನಾಡು ನುಡಿ ಲಾಕುಳಶೈವ ಇತಿಹಾಸ’ವನ್ನು ಪ್ರಕಟಿಸಿದ್ದಾರೆ.
©2024 Book Brahma Private Limited.