ಮಧ್ಯಕಾಲೀನ ಕನ್ನಡ ಕಾವ್ಯ ಕೃತಿಗಳಲ್ಲಿ ರತ್ನಾಕರ ವರ್ಣಿಯ ಭರತೇಶ ವೈಭವಕ್ಕೆ ಅನನ್ಯವಾದ ಸ್ಥಾನವಿದೆ. ಅದರ ದೇಸಿ ಸ್ವರೂಪ ಹಾಗೂ ಕಾವ್ಯೋನ್ಮಾದಗಳು ವಿಶಿಷ್ಟ. ಆ ಕಾವ್ಯದ ಒಂದು ಭಾಗವನ್ನು ಆಯ್ದು ಲೇಖಕರು ’ಕಿರುವೆರಳ ಸೆಟೆ’ ಕೃತಿ ರಚಿಸಿದ್ದು, ಈ ಕೃತಿಯು ತನ್ನ ನಾಟಕೀಯ ಗುಣಗಳಿಂದಾಗಿ ಕಾವ್ಯಲೋಕದಲ್ಲಿ ಗಮನ ಸೆಳೆಯುತ್ತಿದೆ. ಸಾಹಿತ್ಯ ಕಾರಣಕ್ಕಾಗಿ ಓದಿ ಆಸ್ವಾದಿಸುವ ಕೃತಿಯಾಗಿದೆ. ಸರಳ ಗದ್ಯದ ಅನುವಾದ, ಪೀಠಿಕೆ, ಸೂಕ್ತ ಟಿಪ್ಪಣಿ ಮುಂತಾದ ಶಾಸ್ತ್ರಶುದ್ಧ ಸಂಪಾದನೆಯ ನೆಲೆಯಲ್ಲಿ ಕೃತಿಯನ್ನು ಸಿದ್ಧಪಡಿಸಲಾಗಿದೆ.
©2024 Book Brahma Private Limited.