ವಚನಹೃದಯ

Author : ಬಸವಾನಂದ ಸ್ವಾಮಿ ಸಾಲಿಮಠ

Pages 512

₹ 650.00




Published by: ಪ್ರಭುದೇವ ಪ್ರಕಾಶನ
Address: ಶ್ರೀ ಗುರುಬಸವ ಮಹಾಮನೆ, ಮನಗುಂಡಿ, ಧಾರವಾಡ
Phone: 8073979683

Synopsys

ಶ್ರೀ ಬಸವಾನಂದ ಸ್ವಾಮಿಗಳ ೧೪ನೆಯ ಸಾಹಿತ್ಯ ಕೃತಿ- 'ವಚನಹೃದಯ ವಚನಾಂಕಿತಗಳ ವೈಶಿಷ್ಟ್ಯ ಮತ್ತು ವೈವಿಧ್ಯ'. ವಚನ ಸಾಹಿತ್ಯವು ಇಂದಿಗೂ ಅನೇಕ ವಿದ್ವಾಂಸರ, ಸಂಶೋಧಕರ ಚರ್ಚೆಗೆ, ಜಿಜ್ಞಾಸೆಗೆ ಮೂಲದ್ರವ್ಯವಾಗಿದೆ. ವಿಭಿನ್ನ ನೆಲೆಗಳಿಂದ ವಚನಗಳ ಅಧ್ಯಯನ ನಡೆದಿವೆಯಾದರೂ ವಚನಾಂಕಿತಗಳ ಬಗ್ಗೆ ಯಾವುದೇ ಅಧ್ಯಯನ ಆಗಿಲ್ಲ. ವಿಶ್ವಸಾಹಿತ್ಯದ ಹಿನ್ನೆಲೆಯಲ್ಲಿ ನೋಡಿದಾಗ ಅಂಕಿತನಾಮಗಳನ್ನು ಇಟ್ಟುಕೊಂಡು ಸಾಹಿತ್ಯರಚನೆ ಮಾಡಿದ ಮೊದಲಿಗರೆಂಬ ಶ್ರೇಯಸ್ಸು ಶರಣರಿಗೇ ಸಲ್ಲುತ್ತದೆ. ಅಧ್ಯಾತ್ಮಸಾಧಕರೂ, ನಿಸರ್ಗ ಚಿಕಿತ್ಸಾತಜ್ಞರೂ ಆಗಿರುವ ಸ್ವಾಮಿಗಳು ವಚನಾಂಕಿತಗಳನ್ನು ಕುರಿತು ಸುದೀರ್ಘವಾದ ಚಿಂತನ-ಮಂಥನ ನಡೆಸಿದ್ದಾರೆ. ಈ ಅಂಕಿತಗಳು ವಚನಹೃದಯ- ಎಂಬ ಹೊಳಹಿನಿಂದ ಶೋಧನೆ ಆರಂಭಿಸಿ, ತಮ್ಮ ತಲಸ್ಪರ್ಶಿ ಅಧ್ಯಯನ, ಸೂಕ್ಷ್ಮಗ್ರಹಿಕೆ, ನಿಶ್ಚಿತ ನಿರ್ಣಯಗಳ ಮೂಲಕ ನಿಶಿತ ಅಭಿಪ್ರಾಯಕ್ಕೆ ಅವರು ತಲುಪಿದ್ದಾರೆ. ಅವು ಸ್ಥಾವರಲಿಂಗಮೂಲದವಲ್ಲ, ಜಂಗಮ ಭಾವದ ಸ್ಪೋಪಜ್ಞ ಕುರುಹುಗಳು ಎಂಬುದನ್ನು ಎತ್ತಿಹಿಡಿದಿದ್ದಾರೆ ಶರಣರ ಜೀವನ ಚರಿತ್ರೆ ಹಾಗೂ ಶರಣತತ್ತ್ವಗಳನ್ನು ಹೊಸ ದೃಷ್ಟಿಯಿಂದ ನೋಡುವ ಅವಕಾಶವನ್ನು ಇದು ನೀಡುತ್ತದೆ. ಇಲ್ಲಿ ಶರಣರ ಹೃದಯಧ್ವನಿ ಕೇಳಿಸುತ್ತದೆ. ಮುಂದಿನ ಹಲವು ವಚನಾಧ್ಯಯನಗಳಿಗೆ ಇದು ಮಾರ್ಗದರ್ಶಿಯಾಗಿದೆ. ಮಹತ್ವದ ಒಳನೋಟ ಮತ್ತು ಹೊಸ ಅರಿವು ನೀಡುವ ಈ 'ವಚನಹೃದಯ'. ಪಂಡಿತರಿಗೂ ಪಾಮರರಿಗೂ ಏಕಕಾಲಕ್ಕೆ ಹೃದ್ಗತವಾಗಬಲ್ಲ ಭಾಷೆ, ವಿಶ್ಲೇಷಣೆ, ನಿರೂಪಣೆಗಳನ್ನು ಹೊಂದಿದೆ.

About the Author

ಬಸವಾನಂದ ಸ್ವಾಮಿ ಸಾಲಿಮಠ
(03 November 1950)

ಈಗಿನ ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ 1950ರ ನವೆಂಬರ್‌ 03ರಂದು ಜನಿಸಿದ ಸ್ವಾಮೀಜಿ ಅವರ ವಿದ್ಯಾಭ್ಯಾಸ ಇಲಕಲ್ಲ ಮಹಾಂತಸ್ವಾಮಿ ಕಾಲೇಜಿನಲ್ಲಿ ನಡೆಯಿತು. ಪದವೀಧರರಾದ  ನಂತರ ಮೆಡಿಕಲ್, ಆಯುರ್ವೇದ (ಃSಂಒ) ಹುಬ್ಬಳ್ಳಿ ಹವ್ಯಾಸ ಬಾಲ್ಯದಿಂದಲೂ, ಭಜನ ಸತ್ಸಂಗ ಹಾಡುಗಳನ್ನು ಬರೆಯುವುದು, ಹಾಡುವುದು ಸಂಗೀತ, ಸಾಹಿತ್ಯಜ್ಞಾನ, ಶಿವಾನುಭವ ಪುರಾಣ, ಪ್ರವಚನ, ಉಪನ್ಯಾಸ ಕಾರ್ಯಕ್ರಮಗಳನ್ನು ನೀಡುವುದು ಸದ್ಯ ಬಳ್ಳಾರಿಯಲ್ಲಿ ವಾಸ. ...

READ MORE