Published by: ಕದಂಬ ಪ್ರಕಾಶನ Address: ನಂ.834, 62ನೆ ಅಡ್ಡರಸ್ತೆ, ಕುಮಾರಸ್ವಾಮಿ ಲೇಔಟ್, 1ನೇ ಹಂತ, ಬೆಂಗಳೂರು-78\n
Share On
Synopsys
‘ಮನದೊಳಮಿಡಿತ’ ಸುನೀಲ ಹಳೆಯೂರು ಅವರ ಕೃತಿಯಾಗಿದೆ. ಕನ್ನಡದಲ್ಲಿ ತನಗ ಅವತರಿಸಿದಗಳಿಗೆ ವಿಶಿಷ್ಟವಾದದ್ದು ಎಂದು ಹೇಳಬೇಕು. ಹಲವರು ಈ ಪ್ರಕಾರದಲ್ಲಿ ಬರೆಯುತ್ತಿದ್ದಾರೆ. ಸಂಕಲನಗಳು ಬಂದಿವೆ. ಕಳೆಯ ನಡುವೆ ಬೆಳೆ ಕಾಣದಾಗುತ್ತಿದೆ ಎಂಬ ಆತಂಕವನ್ನು ಕಳೆಯುವಂತೆ ಭರವಸೆಯ ಬೆಳೆ ತೆಗೆದಿದ್ದಾರೆ ಸುನೀಲ ಹಳೆಯೂರು ಅವರು.
ಕಾವ್ಯವನ್ನು ರಮಣೀಯವಾಗಿಸುವುದು ಅವರಿಗೆ ಮುಖ್ಯವಲ್ಲ. ಬದಲಾಗಿ ಬದುಕಿನ ತಾತ್ವಿಕತೆಯ ಶೋಧನೆಗೆ, ಪರಿಶೀಲನೆಗೆ ಅವರು ಕಾವ್ಯವನ್ನು ಬಳಸಿಕೊಳ್ಳುವಂತೆ ಕಾಣಿಸುತ್ತದೆ. ಇಲ್ಲಿನ ತನಗಗಳು ಅವರ ಈ 'ಉದ್ಯಮ'ಕ್ಕೆ ಮಾದರಿಗಳಾಗಿವೆ.