‘ಕೆ.ಎಸ್.ನರಸಿಂಹಸ್ವಾಮಿ ಸಾಹಿತ್ಯ ಸೂಚಿ’ ಲೇಖಕ ಶ್ರೀಧರ ಹೆಗಡೆ ಭದ್ರನ್ ಅವರು ಸಂಪಾದಿಸಿರುವ ‘ಕೆ.ಎಸ್.ನ ಕಾವ್ಯ-ಗದ್ಯ-ಅನುವಾದ ಸಾಹಿತ್ಯ ಕೃತಿಗಳ ವಿವರ’. ಈ ಕೃತಿಯನ್ನು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಪ್ರಕಟಿಸಿದ್ದು ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಈ ಕೃತಿಯ ಪ್ರಧಾನ ಸಂಪಾದಕರಾಗಿದ್ದಾರೆ. ಇದುವರೆಗೆ ಕೆ.ಎಸ್.ನ ಅವರ 17 ಕವನ ಸಂಕಲನಗಳು ಪ್ರಕಟವಾಗಿವೆ. ಮಲ್ಲಿಗೆಯ ಮಾಲೆ ಎಂಬ ಹೆಸರಿನಲ್ಲಿ ಅವರ ಸಮಗ್ರ ಕಾವ್ಯ ಸಂಪುಟ ಹಲವಾರು ಮುದ್ರಣಗಳನ್ನು ಕಂಡಿದೆ. ಮೈಸೂರ ಮಲ್ಲಿಗೆಯಂತೂ ಕನ್ನಡ ಪ್ರಕಟಣಾ ಪ್ರಪಂಚದಲ್ಲಿ ಅತಿ ಹೆಚ್ಚು ಮುದ್ರಣ ಕಂಡ ಕವನ ಸಂಕಲನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಯ್ದ ಕವನಗಳ ಹಲವು ಸಂಪುಟಗಳು ಪ್ರಕಟವಾಗಿವೆ. ಕವಿತೆಯೊಂದಿಗೆ ಗದ್ಯ ಸಾಂಗತ್ಯವನ್ನೂ ಹೊಂದಿದ್ದ ಕೆ.ಎಸ್.ನ ಒಟ್ಟೂ ಐದು ಗದ್ಯ ಬರಹಗಳ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಉಪವನ ಎಂಬ ಪ್ರಬಂಧ ಸಂಕಲನ ಕನ್ನಡದ ಮಹತ್ವದ ಪ್ರಬಂಧಗಳ ಕೃತಿಗಳ ಸಾಲಿಗೆ ಸೇರುತ್ತದೆ. ವಿ.ಸೀ.ಯವರ ವ್ಯಕ್ತಿಚಿತ್ರ ಹಾಗೂ ನುಡಿ ಮಲ್ಲಿಗೆ ಮತ್ತು ಸಿರಿ ಮಲ್ಲಿಗೆ ಎಂಬೆರಡು ಅನುಭವ ವಿಶಿಷ್ಟ ಕೃತಿಗಳು ಕೆ.ಎಸ್.ನ ಕಿರೀಟದಲ್ಲಿವೆ. ಅಂತಹ ಕೆ.ಎಸ್.ನ ಕಾವ್ಯ-ಗದ್ಯ-ಅನುವಾದ ಸಾಹಿತ್ಯ ಕೃತಿಗಳ ವಿವರವನ್ನು ಈ ಕೃತಿ ಒಳಗೊಂಡಿದೆ.
©2024 Book Brahma Private Limited.