ಇತಿಹಾಸ ದರ್ಶನ ಬೆಳ್ಳಿ ಬೆಳಸು ಲೇಖಕ-ಲೇಖನ ಸೂಚಿ

Author : ಪಿ.ವಿ.ಕೃಷ್ಣಮೂರ್ತಿ

Pages 260

₹ 150.00




Year of Publication: 2011
Published by: ಕರ್ನಾಟಕ ಇತಿಹಾಸ ಅಕಾದೆಮಿ
Address: ಬಿ. ಎಂ. ಶ್ರೀ . ಕಲಾಭವನ ಆವರಣ, ನರಸಿಂಹರಾಜ ಕಾಲನಿ, ಬೆಂಗಳೂರು - 560 019,

Synopsys

`ಇತಿಹಾಸ ದರ್ಶನ ಬೆಳ್ಳಿ ಬೆಳಸು ಲೇಖಕ-ಲೇಖನ ಸೂಚಿ’ -ಲೇಖಕ ಡಾ. ಪಿ.ವಿ. ಕೃಷ್ಣಮೂರ್ತಿ ಅವರ ಕೃತಿ. ಯಾವುದೇ ವಿಷಯದ ಬಗ್ಗೆ ಸಂಶೋಧನೆ ಮಾಡಬೇಕಾದಾಗ ಆ ವಿಚಾರದಲ್ಲಿ ಈಗಾಗಲೇ ಪರಿಣತರು ಏನು ಅಭಿಪ್ರಾಯವನ್ನು ಹೊಂದಿದ್ದಾರೆ ಎಂಬುದನ್ನು ತಿಳಿಯುವುದು ಅಗತ್ಯ. ಅಂತಹ ವಿಷಯಗಳು ಸಾಮಾನ್ಯವಾಗಿ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿರುತ್ತವೆ. ಸಂಶೋಧಕರಿಗೆ ಇಂತಹ ಸಮಯದಲ್ಲಿ ಸೂಚಿಗಳ ಅಗತ್ಯವಿರುತ್ತದೆ. ಕನ್ನಡದಲ್ಲಿ ಯಾವ ಪತ್ರಿಕೆಯಲ್ಲಿ ಯಾವ ಲೇಖನ ಎಂದು ಬಂದಿತು ಎಂಬ ಮಾಹಿತಿ ಸಿಗುವುದು ಕಷ್ಟ. ಈ ನಿಟ್ಟಿನಲ್ಲಿಅಲ್ಪ ಸ್ವಲ್ಪ ಕೆಲಸಗಳೇನೊ ಆಗಿವೆ. ಆದರೆ ಆಗಬೇಕಾದ್ದು ಸಾಕಷ್ಟು ಇದೆ. 1986ರಲ್ಲಿ ಪ್ರಾರಂಭವಾದ ಕರ್ನಾಟಕ ಇತಿಹಾಸ ಅಕಾದೆಮಿಯು ಸಂಶೋಧನ ಲೇಖನಗಳ ಪ್ರಕಟಣೆಗೆ ಅವಕಾಶ ಮಾಡಿಕೊಡುವಂತಹ 'ಇತಿಹಾಸ ದರ್ಶನ' ಎಂಬ ಸಂಪುಟಗಳನ್ನು ವರ್ಷ ವರ್ಷವೂ ಪ್ರಕಟಿಸುತ್ತಿದೆ. ಇವುಗಳಲ್ಲಿ ಪ್ರಕಟವಾಗಿರುವ ಲೇಖನಗಳಲ್ಲಿ ವಿಷಯ ವೈವಿದ್ಯ ಬಹಳವಾಗಿದ್ದು ಅನೇಕ ಹೊಸ ಹೊಸ ವಿಷಯಗಳು ಪ್ರತಿ ವರ್ಷವೂ ಬೆಳಕು ಕಾಣುತ್ತಿದ್ದು ಸಂಶೋಧಕರಿಗೆ ಆಕರ ಗ್ರಂಥಗಳಾಗಿವೆ.

ಪ್ರಸ್ತುತ ಸೂಚಿಯು ಅಕಾದೆಮಿಯ 'ಇತಿಹಾಸ ದರ್ಶನ' 25 ವರ್ಷಗಳಲ್ಲಿ , ಸಂಪುಟ.1 ರಿಂದ 25ರ ವರೆಗೆ ಸಂಕಲಿತವಾಗಿರುವ ಸಂಪ್ರಬಂಧಗಳ ಲೇಖಕ-ಲೇಖನ ಮತ್ತು ಲೇಖನ-ಲೇಖಕರ ಅಕಾರಾದಿ ಪಟ್ಟಿ ಆಗಿದೆ. ಆ ನಂತರದಲ್ಲಿ ಸಂಪುಟ 26 ರಿಂದ 30ರ ಸೂಚಿ 'ಇತಿಹಾಸ ದರ್ಶನ' -30ರಲ್ಲಿ ಸೇರ್ಪಡೆಯಾಗಿದೆ. (Refer Web: www.karnatakaitihasaacademy.org)

About the Author

ಪಿ.ವಿ.ಕೃಷ್ಣಮೂರ್ತಿ
(05 January 1951)

ಲೇಖಕ ಪಿ.ವಿ. ಕೃಷ್ಣಮೂರ್ತಿ ಅವರು ಮೂಲತಃ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಮಂದೂರು  ಗ್ರಾಮದವರು. (ಜನನ 05-01-1951) ತಂದೆ ಜಿ.ಎನ್. ಪಿಳ್ಳಪ್ಪ, ತಾಯಿ ಪಾಪಮ್ಮ. ಸಮಂದೂರು ಹಾಗೂ ಅತ್ತಿಬೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಮೈಸೂರು ವಿ.ವಿ.ಯಿಂದ ಬಿಎ ಹಾಗೂ ಎಂ.ಎ. ಪದವೀಧರರು. ‘ಬಾಣರಸರ ಶಾಸನಗಳು : ಒಂದು ಅಧ್ಯಯನ’ ವಿಷಯವಾಗಿ ಕನ್ನಡ ವಿ.ವಿ. ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಎನ್.ಜಿ.ಇ.ಎ‍.ಫ್. ನಲ್ಲಿ ತಾಂತ್ರಿಕ ತರಬೇತಿ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದರು. ಎಚ್.ಎ.ಎಲ್.ನ ವೈಮಾಂತರಿಕ್ಷ ವಿಭಾಗದಲ್ಲಿ ಎಂಜಿನಿಯರರಾಗಿ ಸೇವೆ ಸಲ್ಲಿಸಿ, ಈಗ ...

READ MORE

Related Books