ಹಿರಿಯ ಕಿರಿಯ ಹಕ್ಕಿಗಳು-ಡಾ. ಕೆ. ಶಿವರಾಮ ಕಾರಂತ ಸವರ ಕೃತಿ. ವಿಜ್ಞಾನ-ವಿಸ್ಮಯವನ್ನು ಪರಿಚಯಿಸುವ ಕೃತಿ. ಮೈಸೂರು ವಿಶ್ವವಿದ್ಯಾಲಯದ ಗೃಹ ಸರಸ್ವತಿ ಗ್ರಂಥಮಾಲೆಗಾಗಿ ರಚಿಸಲ್ಪಟ್ಟ ಪುಸ್ತಕವಿದು. ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ವಿವಿಧ ವಂಶಗಳು, ಪಕ್ಷಿಗಳ ಅಂಗೋಪಾಂಗಗಳು, ಹೊಟ್ಟೆಯ ಪಾಡು, ಪಕ್ಷಿಗಳ ವಲಸೆ, ಸಂತಾನ ಸಂಗೋಪನೆ-ಮೊದಲಾದ ಅಧ್ಯಾಯಗಳಲ್ಲಿ ಹಕ್ಕಿಗಳ ಕುರಿತು, ಅವುಗಳ ವಿವಿಧ ತಳಿಗಳ ಕುರಿತು ಹಲವಾರು ಉಪಯುಕ್ತ ಮಾಹಿತಿಗಳನ್ನು ಲೇಖಕ ಡಾ. ಕೆ. ಶಿವರಾಮ ಕಾರಂತ ಅವರು ಒದಗಿಸಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು 1971ರಲ್ಲಿ (ಪುಟ: 129) ಮೊದಲ ಬಾರಿಗೆ ಈ ಕೃತಿಯನ್ನು ಪ್ರಕಟಿಸಿತ್ತು.
©2024 Book Brahma Private Limited.