ಲೇಖಕಿ ಡಾ.ಲಕ್ಷ್ಮೀಶಂಕರ ಜೋಶಿ ಅವರ ಸಂಶೋಧನಾ ಕೃತಿ-ಹಿಂದುಸ್ತಾನಿ ಸಂಗೀತ ವಾಹಿನಿ. ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತ ಪ್ರವೇಶ ಪಡೆದು ಪ್ರಬುದ್ಧವಾಗಿ ಬೆಳೆದಿದೆ. ಮಹಾರಾಷ್ಟ್ರದ ನಾಟಕ ಕಂಪನಿಗಳು, ಮೈಸೂರು ಅರಸರ ಹಿಂದುಸ್ತಾನಿ ಸಂಗೀತ ಪ್ರೀತಿ, ಹಿಂದುಸ್ತಾನಿ ಸಂಗೀತಗಾರರಿಗೆ ನೀಡಿದ ರಾಜಾಶ್ರಯ, ಉತ್ತರ ಭಾರತದ ದಿಗ್ಗಜ ಸಂಗೀತಗಾರರು ಹಾಗೂ ಹಿಂದುಸ್ತಾನಿ ಗಾಯಕರಿಗೆ ಮನಸೋತ ಕನ್ನಡದ ಮನಸ್ಸುಗಳು ಈ ಎಲ್ಲ ಮೂಲಗಳಿಂದ ಉತ್ತರ ಭಾರತದ ಹಿಂದುಸ್ತಾನಿ ಸಂಗೀತ ಕರ್ನಾಟಕದಲ್ಲಿ ಪ್ರವೇಶ ಪಡೆದು ಹೆಮ್ಮರವಾಗಿ ಬೆಳೆದ ಎಲ್ಲಾ ಆಯಾಮಗಳನ್ನು ಈ ಸಂಶೋಧನಾ ಕೃತಿಯಲ್ಲಿ ಸಮೃದ್ಧವಾಗಿ ದಾಖಲಾಗಿದೆ. ಜಾಗತಿಕ ಮನ್ನಣೆಯಲ್ಲಿ ಹಿಂದುಸ್ತಾನಿ ಸಂಗೀತ, ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತಕ್ಕೆ ಮೈಸೂರು ಅರಸರ ಕೊಡುಗೆ,ಕರ್ನಾಟಕದಲ್ಲಿ ರಂಗಸಂಗೀತದ ಮೂಲಕ ಹಿಂದುಸ್ತಾನಿ ಸಂಗೀತದ ವಿಕಾಸ, ಧಾರವಾಡ ಜಿಲ್ಲೆಯಲ್ಲಿ ರಂಗಸಂಗೀತ, ಕರ್ನಾಟಕದಲ್ಲಿ ನಾಲ್ಕು ಗಣಗಳ ಮೂಲಕ ಹಿಂದುಸ್ತಾನಿ ಸಂಗೀತ, ಕರ್ನಾಟಕದಲ್ಲಿ ಸುಗಮಸಂಗೀತ, ಕರ್ನಾಟಕದಲ್ಲಿ ವಾದನಕಾರರು ಹೀಗೆ ವೈವಿಧ್ಯಮಯ ಅಧ್ಯಾಯಗಳಿದ್ದು, ಸಂಶೋಧನೆಗೆ ಉತ್ತಮ ಆಕರ ಗ್ರಂಥವಾಗುತ್ತದೆ.
©2024 Book Brahma Private Limited.