ಗಾಂಧಿ ಎಂಬುವ ಹೆಸರು

Author : ಚಂದ್ರಶೇಖರ ಪಾಟೀಲ (ಚಂಪಾ)

Pages 353

₹ 75.00




Year of Publication: 1998
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560049
Phone: 080-22107751

Synopsys

ಗಾಂಧಿಯ ಕುರಿತು ಭಾರತೀಯ ನಾಗರೀಕ ಸಮಾಜ ಹೊಂದಿರುವ ಪ್ರಜ್ಞೆ , ಅವರ ಬಗ್ಗೆ ಹೊಂದಿರುವ ಕಲ್ಪನೆಗಳು , ಇವೆಲ್ಲದರ ಕುರಿತು ಇರುವ ಕವನಗಳ ಗುಚ್ಚವೇ ಈ “ಗಾಂಧಿ ಎಂಬುವುದು ಹೆಸರು’ ಎಂಬ ಕೃತಿ. ಚಂದ್ರ ಶೇಖರ ಪಾಟೀಲ ಮತ್ತು ಶಶಿಕಲಾ ವೀರಯ್ಯಸ್ವಾಮಿಯವರು ನಾಡಿನ ಹೆಸರಾಂತ ಕವಿಗಳು. ಗಾಂಧೀಜಿಯವರ 125 ನೇ ಹುಟ್ಟು ಹಬ್ಬ ದಿನ, ಗಾಂಧಿಯನ್ನು ಕುರಿತ ಭಾರತೀಯ ನಾಗರಿಕರು ಪ್ರಜ್ಞೆಗಳನ್ನು ವಿವರಿಸಿದ್ದಾರೆ. ಇಲ್ಲಿ ಗಾಂಧಿಯ ನೆಪದಲ್ಲಿ ಹಲವು ಕವಿಗಳನ್ನು ಸೇರಿಸಿದ್ದು ಈ ಪುಸ್ತಕದ ವಿಶೇಷತೆಯಾಗಿದೆ.

About the Author

ಚಂದ್ರಶೇಖರ ಪಾಟೀಲ (ಚಂಪಾ)
(18 July 1939 - 10 January 2022)

'ಚಂಪಾ' ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ-ನಾಟಕಕಾರ.   ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು. ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದರು (1939). ತಂದೆ ಬಸವರಾಜ ಹಿರೇಗೌಡ ಪಾಟೀಲ, ತಾಯಿ ಮುರಿಗೆವ್ವ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ, ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ 'ಚಂಪಾ' ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕರು ಕರ್ನಾಟಕ ಕಾಲೇಜಿನಲ್ಲಿದ್ದರು. ’ನಮಗೆಲ್ಲ ...

READ MORE

Related Books