ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ‘ಚಿತ್ರಲೇಖಾ’ ಕೃತಿಯು ವಿವಿಧ ಲೇಖಕರ ಅನುವಾದಿತ ಕಥೆಗಳ ಸಂಕಲನವಾಗಿದೆ. ಕೃತಿಯು ಚಿತ್ರಲೇಖಾ ( ಭಗವತೀಚರಣ್ ವರ್ಮಾ), ಹೃದಯ ಒಂದು, ಕತೆ ಸಾವಿರ ( ಅಮೃತ್ ಲಾಲ್ ನಾಗರ್), ಹಾವು ( ಲಖ್ ಮೀ ಖಿಲಾಣೀ), ಮುಖವಾಡ (ಲಖ್ ಮೀ ಖಿಲಾಣೀ), ಉಪಾಯ (ಭೀಷ್ಮ ಸಾಹ್ ನೀ), ಬದಲೂ (ಮಹಾದೇವೀ ವರ್ಮಾ), ತಾಯಿ ( ಪ್ರೇಮ್ ಚಂದ್) ಕಥೆಗಳನ್ನು ಒಳಗೊಂಡಿವೆ.
ಬೇರೆ ಬೇರೆ ಸಂದರ್ಭಗಳಲ್ಲಿ ಅನುವಾದಿಸಿರುವ ಇಲ್ಲಿನ ಕತೆಗಳಲ್ಲಿ ‘ಹಾವು’ ಮತ್ತು ‘ಮುಖವಾಡ’ ಸಿಂಧೀ ಕತೆಗಳಾಗಿವೆ. ಉಳಿದವುಗಳು ಹಿಂದೀ, ಮೂಲದಿಂದ ಅನುವಾದ ಮಾಡಲಾಗಿದೆ. 1972ರಲ್ಲಿ ಕಸ್ತೂರಿಯಲ್ಲಿ ಪ್ರಕಟವಾಗಿದ್ದ ಅನುವಾದವನ್ನು ಹಾಗೂ ಸಂಗ್ರಹ ಕತೆಗಳನ್ನು ಲೇಖಕ ಚಿತ್ರಲೇಖಾ ಕೃತಿಯ ಮೂಲಕ ಹೊರ ತಂದಿರುತ್ತಾರೆ.
©2024 Book Brahma Private Limited.