ಛಂದಸ್ಸಿನ ಕುರಿತು ಬರೆಯಬೇಕೆಂಬುದು ಕಲಬುರ್ಗಿ ಅವರ ಬಹುದಿನದ ಆಸೆಯಾಗಿತ್ತು. ಅದೊಂದು ಅಲಂಕಾರವಾದುದರಿಂದ ಸಹಜವಾಗಿಯೇ ವಿದ್ವಾಂಸರಾದ ಕಲಬುರ್ಗಿ ಅವರಿಗೆ ಅದರತ್ತ ಆಸಕ್ತಿ ಬೆಳೆದಿತ್ತು. ಹಾಗೆ ಛಂದಸ್ಸಿನ ಕುರಿತು ಆಗಾಗ ಕಲಬುರ್ಗಿ ಅವರು ಮಾಡಿಕೊಂಡ ಸಂಶೋಧನಾ ಟಿಪ್ಪಣಿಗಳ ಸಂಗ್ರಹವೇ ಈ ಕೃತಿ. ಹಾಗೆ ಛಂದಸ್ಸಿನ ಕುರಿತು ಆಗಾಗ ಕಲಬುರ್ಗಿ ಅವರು ಮಾಡಿಕೊಂಡ ಸಂಶೋಧನಾ ಟಿಪ್ಪಣಿಗಳ ಸಂಗ್ರಹವೇ ಈ ಕೃತಿ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಕುರಿತು ಮಾತನಾಡಿದ್ದ, ಕೃತಿಯ ಸಂಪಾದಕ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಡಾ. ಎಸ್.ಎಸ್. ಅಂಗಡಿ ಅವರು ’ಷಟ್ಪದಿಯ ರಹಸ್ಯವನ್ನು ಬಹಿರಂಗ ಮಾಡಿದ ಮೊಟ್ಟಮೊದಲ ಸಂಶೋಧಕರು ಕಲಬುರ್ಗಿ. ಛಂದಸ್ಸನ್ನು ಅರಿತು ಅದನ್ನು ಮೀರಿ ಬೆಳೆದವನು ಕವಿಯಾಗುತ್ತಾನೆ ಎಂಬುದು ಕಲಬುರ್ಗಿ ಅವರ ಅಭಿಪ್ರಾಯ. ರಸ, ಭಾವ, ನಾದ, ಲಯದ ಆಧಾರದಲ್ಲಿ ಅವರು ಛಂದಸ್ಸನ್ನು ವ್ಯಾಖ್ಯಾನಿಸಿದ್ದಾರೆ’ ಎಂದು ವಿವರಿಸಿರುವುದು ಕೃತಿಯ ಮಹತ್ವವನ್ನು ಸಾರುತ್ತದೆ.
©2024 Book Brahma Private Limited.