ಕೊನೆಯ ಕುಣಿಕೆ

Author : ಬಿ. ಜೆ. ಸುವರ್ಣ

Pages 80

₹ 120.00




Year of Publication: 2024
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ಕೊನೆಯ ಕುಣಿಕೆ’ ಐ. ಎಸ್‌. ಜೋಹರ್‌ ಅವರ ಇಂಗ್ಲೀಷ್‌ ನಾಟಕವಾದ ಇದನ್ನು ಬಿ. ಜೆ. ಸುವರ್ಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದು ಮಾರ್ಚ್, 1977ರ ಸಮಯ. ಪಾಕಿಸ್ತಾನದಲ್ಲಿ ಎರಡನೆಯ ಸಾರ್ವತ್ರಿಕ ಚುನಾವಣೆ ನಡೆಯಿತು. ಆಗ ಪ್ರಧಾನಿ ಜುಲ್ಟಿಕರ್ ಆಲಿ ಭುಟ್ಟೋ ಅವರ ಜನತಾ ರಂಗ (ಪೀಪಲ್ಸ್ ಪಾರ್ಟಿ) ಪ್ರಚಂಡ ಬಹುಮತದಿಂದ ಜಯಗಳಿಸಿತು. ಇದನ್ನು ವಿರೋಧ ಪಕ್ಷಗಳಿಗೆ ಸಹಿಸಲಾಗಲಿಲ್ಲ. ಚುನಾವಣೆಯಲ್ಲಿ ಅಕ್ರಮವಾಗಿದೆ, ಭುಟ್ಟೋ ಮೋಸದಿಂದ ಗೆದ್ದಿದ್ದಾರೆ ಎಂದು ಆಪಾದಿಸಿ ಭುಟ್ಟೋ ವಿರುದ್ಧ ವಿರೋಧ ಪಕ್ಷಗಳ ಒಕ್ಕೂಟವು ಬಂಡೆದ್ದಿತು. ತೀವ್ರಗೊಂಡ ವಿರೋಧ ಪಕ್ಷಗಳ ಒಕ್ಕೂಟದ ಪ್ರತಿಭಟನೆ ಹತೋಟಿ ಮೀರಿತ್ತು. ಇಂತಹ ಪ್ರಕ್ಷುಬ್ಧ ವಾತಾವರಣದ ಸಮಯದಲ್ಲಿ ಸೇನೆಯ ಜನರಲ್ ಜಿಯಾ ಉಲ್ ಹಕ್ ಅಧಿಕಾರ ದಾಹದಿಂದ ಉರಿದೆದ್ದ. ಅರಾಜಕತೆ ಇರುವುದರಿಂದ ಬಂಡೆದ್ದ ಜನರಿಂದ ಭುಟ್ಟೋಗೆ ರಕ್ಷಣೆ ಬೇಕಾಗಿದೆ ಎಂಬ ನೆಪವೊಡ್ಡಿ 1977ರ ಜುಲೈ 5 ರಂದು ಭುಟ್ಟೋರನ್ನು ಬಂಧಿಸಿ ಸೇನೆಯ ವಶಕ್ಕೆ ತೆಗೆದುಕೊಂಡು ಸೆರೆಯಲ್ಲಿಟ್ಟ. ಹೀಗೆ ಭುಟ್ಟೋ ಜೈಲಿನ ಕೋಣೆಯ ಬಂದಿಯಾಗಬೇಕಾಯಿತು. ಅಲ್ಲಿ ಆಗುವ ಘಟನಾವಳಿಗಳನ್ನು ನಾಟಕ ರೂಪದಲ್ಲಿ ಬರೆದಿರುವ ಕೃತಿಯೇ ಕೊನೆಯ ಕುಣಿಕೆ.

About the Author

ಬಿ. ಜೆ. ಸುವರ್ಣ
(06 October 1954)

ಬರಹಗಾರ್ತಿ ಸುವರ್ಣ ಬಿ. ಜೆ. ಅವರು 1954 ಅಕ್ಟೋಬರ್‌ 06 ರಂದು ಜನಿಸಿದರು. ’ಡಾಕ್ಟರ್ ಕರೇನ್ ಹಾರ್ನಿ(ಸಂಪಾದನೆ), ಕರ್ನಾಟಕದ ಮಹಿಳೆಯರು ಸಂಪುಟ-೧ ಲೇಖಕಿಯರು, ಕರ್ನಾಟಕ ಮಹಿಳೆಯರು ಸಂ. ಆಧುನಿಕ ಕನ್ನಡ ಲೇಖಕಿಯರು, (ಪರಿಷ್ಕತ, ವಿಸ್ತ್ರತ ಆವೃತ್ತಿ), ಚಿ.ನ.ಮಂಗಳ ಬದುಕು ಬರಹ (ಅನನ್ಯ ಚೇತನಮಾಲಿಕೆ) ಹೊರತಂದಿದ್ದಾರೆ. ಐ.ಎಸ್.ಜೋಹರ್ ಅವರ ಇಂಗ್ಲಿಷ್ ನಾಟಕ ಭುಟ್ಟೋ ಅನುವಾದಿಸಿದ್ದಾರೆ. ಮನಃಶಾಸ್ತ್ರ ಮತ್ತು ಸಹಜಯೋಗ ಕುರಿತು ರಾಜ್ಯ, ರಾಷ್ಟ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ನಾಟಕ ನಿರ್ದೇಶನ ಅಭಿನಯಗಳಲ್ಲಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ...

READ MORE