ಭೂಮಿ ತೂಕದ ಕನಸು (ವಿಮರ್ಶಾ ಲೇಖನಗಳು)

Author : ಡಾ. ಪ್ರಸನ್ನ ನಂಜಾಪುರ

Pages 186

₹ 240.00




Year of Publication: 2024
Published by: B K Publishing House
Address: No-48, 3rd Cross, syndicate Bank Layout, Herohalli, Bangalore, 560091
Phone: 09844995374

Synopsys

ಮಧ್ಯಕಾಲೀನ ಸಾಹಿತ್ಯದಿಂದ ಸಮಕಾಲೀನ ಸಾಹಿತ್ಯದವರೆಗೆ ಈ ಕೃತಿಯ ವಿಸ್ತಾರ ಮತ್ತು ವೈವಿಧ್ಯತೆಯಿದೆ. ಆದರೆ ಇಲ್ಲಿನ ಎಲ್ಲ ಬರಹಗಳೂ ಕೇಂದ್ರವೊ0ದನ್ನು ದೃಢವಾಗಿ ಹೊಂದಿವೆ. ಭಾರತದ ಶ್ರೇಣಿಕೃತ ವ್ಯವಸ್ಥೆಯನ್ನೇ ಇವರು ಲೇಖಕರ ಮತ್ತು ಕೃತಿಗಳ ಶೋಧಕ್ಕೆ ಮೂಲಧಾತುವಾಗಿ ಬಳಸಿಕೊಳ್ಳುತ್ತಾ ಹೋಗುವುದೇ ಇವರ ಬರಹಗಳ ಕೇಂದ್ರ ಎನ್ನಬಹುದು. ಸಾಮಾಜಿಕ ವಿಷಮತೆಯನ್ನು ಅದರ ದುಷ್ಪರಿಣಾಮಗಳಂತೆ ಹಬ್ಬಿರುವ ಸಾಂಸ್ಕೃತಿಕ ಅನಾರೋಗ್ಯವನ್ನು ಗುರುತಿಸುವುದು ಪ್ರಸನ್ನ ಅವರ ಒಂದು ನೆಲೆಯಾದರೆ ಮತ್ತೊಂದು ಈ ಎಲ್ಲಾ ವಿಕಾರಗಳಿಂದ ಹೊರಬರುವ ದಾರಿಗಳ ಹುಡುಕಾಟ ಮತ್ತೊಂದು ನೆಲೆಯಾಗಿದೆ. ಸ್ವಾತಂತ್ರೊö್ಯÃತ್ತರ ಭಾರತೀಯ ಸಮುದಾಯವು ಎದುರಿಸಿದ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳನ್ನು ಇವರು ಗ್ರಹಿಸಲೆತ್ನಿಸುವುದು ಕೂಡ ಇದೇ ತಳಹದಿಯ ಮೇಲೆ ಘನವಾದ ಪ್ರತಿರೋಧದ ಪರಂಪರೆಯನ್ನಿಟ್ಟುಕೊ0ಡು ಇನ್ನೂ ಬದಲಾಗದ ಸಾಮಾಜಿಕ ಸನ್ನಿವೇಶಗಳನ್ನು ಕುರಿತ ದಟ್ಟ ವಿಷಾದವೊಂದು ಇವರ ವಿಮರ್ಶೆಯಲ್ಲಿ ಕಾಣಿಸಿಕೊಳ್ಳುತ್ತದೆ. ಸಿದ್ಧರಾಮನ ವಚನಗಳಿರಲಿ, ಚೌಗಲೆಯವರ ನಾಟಕವಿರಲಿ ಇದೇ ಪ್ರಧಾನ. ಇದಕ್ಕೆ ಭಿನ್ನವಾದ ಕೆಲವು ಮುಖ್ಯ ಲೇಖನಗಳೂ ಇಲ್ಲಿವೆ. ಕಟ್ಟೀಮನಿಯವರ, ಕುಂ ವೀ ಅವರ ಕಥಾ ಸಾಹಿತ್ಯವನ್ನು ಕುರಿತ ಲೇಖನಗಳು ಇವರ ಭಿನ್ನ ನೋಟಗಳನ್ನು ದಾಖಲಿಸುತ್ತವೆ. ಇವರ ಆಸಕ್ತಿ ದಲಿತ ಸಾಹಿತ್ಯದ ಚೌಕಟ್ಟನ್ನು ಮೀರಿ ಒಟ್ಟೂ ಕನ್ನಡ ಸಾಹಿತ್ಯ ಪರಂಪರೆಯ ವೈವಿಧ್ಯತೆ ಮತ್ತು ಸಮೃದ್ಧತೆಯ ಕಡೆದಿದೆ ಎನ್ನುವುದು ಇವರೊಬ್ಬ ಗಂಭೀರವಾದ ಸಾಹಿತ್ಯದ ಓದುಗ ಎನ್ನುವುದನ್ನು ಈ ಕೃತಿ ಸಾಬೀತುಪಡಿಸುತ್ತದೆ.