ವಾರೆನ್ ಹೇಸ್ಟಿಂಗ್ಸ್‌ನ ಹೋರಿ

Author : ಪ್ರಕಾಶ ಗರುಡ

Pages 96

₹ 130.00




Year of Publication: 2025
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

'ವಾರೆನ್ ಹೇಸ್ಟಿಂಗ್ಸ್‌ನ ಹೋರಿ' ಪ್ರಕಾಶ ಗರುಡ ಅವರ ಅನುವಾದ ಕೃತಿ. ಹಿಂದಿಯ ಧೀಮಂತ ಲೇಖಕ ಉದಯ ಪ್ರಕಾಶ್‌ ರ 'ವಾರೆನ್ ಹೇಸ್ಟಿಂಗ್ಸ್ ಕಾ ಸಾಂಡ್' ಎಂಬ ಕಿರು ಕಾದಂಬರಿಯ ಭಾವಾನುವಾದ. 'ವಾರೆನ್ ಹೇಸ್ಟಿಂಗ್ಸ್‌ನ ಹೋರಿ' ಇಂದು ನಮ್ಮ ಸುತ್ತ ನಡೆಯುತ್ತಿರುವ ಜಾಗತಿಕ ವಿದ್ಯಮಾನಗಳತ್ತ ನಮ್ಮನ್ನ ಕೊಂಡೊಯ್ಯುತ್ತದೆ. ಇಂದು ಭೋಗಲೋಲುಪತೆ ಮತ್ತು ಅಧಿಕಾರದಾಹ ವಿಕೃತಿಯ ರೂಪತಳೆದಿದೆ. ನಿಲ್ಲಪ್ತತೆ- ಸಂವೇದನಾರಾಹಿತ್ಯಗಳ ನಡುವೆಯೂ ಕೆಲವು ಜೀವಿಗಳು, ಕೆಲವು ಚಳುವಳಿಗಳು ಹೋರಿಯ ಕೋಡು ಹಿಡಿದು ಮಣಿಸುವ, ಜಗತ್ತಿನ ಗಡ್ಡಹಿಡಿದು ಜಗ್ಗುವ ಧೈರ್ಯ ಹೊಂದಿವೆ. ವಿನಾಶದ ಅಂಚಿನಲ್ಲಿರುವ ತಳಿಯೊಂದಕ್ಕೆ ಕೊಟ್ಟ ಪ್ರಶಸ್ತಿಯಂತಿದೆ ಈ ಕಾದಂಬರಿ. ಡಾ. ಪ್ರಕಾಶ್ ಗರುಡರ ಭಾವಾನುವಾದ ಮೂಲದೊಂದಿಗೆ ಅನುಸಂಧಾನ ಮಾಡುತ್ತಲೇ ತಿಳಿಗನ್ನಡದಲ್ಲಿ ಚೊಕ್ಕವಾಗಿ ಹರಿದು ಬಂದಿದೆ.