"ರಾಜಧಾನಿಯಲ್ಲಷ್ಟೇ ಅಲ್ಲ, ಇಡೀ ದೇಶವೇ ಸಂತೋಷ ಪಡುತ್ತಿದೆ 2 ಮಹೋತ್ಸವದ ಘಟನೆಗಳಿಂದ. ಆದರೆ ರಾಷ್ಟ್ರಕೂಟ ರಾಜ್ಯಕ್ಕೆ ವೆಂಗವಳ್ಳಿಯ ವಿಜಯ ಹಾಗು ರಾಜಪುತ್ರನ ಜನನ ಚಕ್ರವರ್ತಿ ನೃಪತುಂಗರಿಗೆ ಭೀತಿಗೆ ಕಾರಣವಾಗಿತ್ತು ಎಂದು ಪ್ರಾರಂಭವಾಗುವ ಕತೆಯು ಬಹಳ ಕುತೂಹಲಕಾರಿಯಾಗಿ ಓದುಗನನ್ನು ಓದಿಸಿಕೊಂಡು ಹೋಗುತ್ತದೆ," ಎನ್ನುತ್ತಾರೆ ವಿಮರ್ಶಕ ಕಾರ್ತಿಕೇಯ ಭಟ್. ಅವರು ಲೇಖಕ ತ.ರಾ.ಸು ಅವರ ‘ ನೃಪತುಂಗ’ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...
ರಾಜಧಾನಿಯಲ್ಲಷ್ಟೇ ಅಲ್ಲ, ಇಡೀ ದೇಶವೇ ಸಂತೋಷ ಪಡುತ್ತಿದೆ 2 ಮಹೋತ್ಸವದ ಘಟನೆಗಳಿಂದ ಆದರೆ ರಾಷ್ಟ್ರಕೂಟ ರಾಜ್ಯಕ್ಕೆ ವೆಂಗವಳ್ಳಿಯ ವಿಜಯ ಹಾಗು ರಾಜಪುತ್ರನ ಜನನ ಚಕ್ರವರ್ತಿ ನೃಪತುಂಗರಿಗೆ ಭೀತಿಗೆ ಕಾರಣವಾಗಿತ್ತು. ಜಿನಸೇನಾಚಾರ್ಯರ ಶಿಷ್ಯರಾದ ನೃಪತುಂಗ ಚಕ್ರವರ್ತಿಗಳು ಅಹಿಂಸೆ ಗರ್ವಶ್ರೇಷ್ಠವಾದ ಧರ್ಮ ಎಂಬ ಸಿದ್ಧಾಂತದ ಮೇಲೆ ರಾಜ್ಯವನ್ನಾಳುತ್ತಿದ್ದರು. ತಾವಾಗಿ ಯುದ್ಧಕ್ಕೆ, ರಕ್ತಪಾತಕ್ಕೆ ಹಾತೊರೆಯಬಾರದು, ಆದರೆ ಪ್ರಜಾಪಾಲನೆಗೆ ಅಗತ್ಯವಾದಾಗ ಯುದ್ಧಕ್ಕೆ ಹಿಂಜರಿಯುವ ಅರಸನನ್ನು ರಾಜ್ಯಲಕ್ಷ್ಮಿ ಹೇಸಿ ದೂರವಾಗುತ್ತಾಳೆ, ಆದ್ದರಿಂದ ಶತ್ರುವನ್ನಾಗಲಿ, ದುಷ್ಟಪುತ್ರನನ್ನಾಗಲಿ ಸಮಾನವಾಗಿ ನಿಗ್ರಹಿಸಿ, ಚಕ್ರವರ್ತಿ ಪದವಿಯಿಂದ ಅಖಂಡ ಪ್ರಜಾಕೋಟಿಗಾಗಿ ಸಮಯ ಬಂದಾಗ ತಮ್ಮ ಪ್ರಾಣವನ್ನೂ ಕೊಡಲು ಸಿದ್ಧವಾಗಿ ಪ್ರಜಾಪಾಲನೆ ಮಾಡುತ್ತಿದ್ದರು.
ರಾಜಪುತ್ರನ ಜನನ ಚಕ್ರವರ್ತಿ ನೃಪತುಂಗರಿಗೆ ಭೀತಿಗೆ ಕಾರಣವಾಗಿತ್ತು ಕಾರಣ ಗೋಲಯಭಟ್ಟರು ಹೇಳಿದಂತೆ ರಾಜಕುಮಾರನ ಜನ್ಮಕಾಲದ ಶಕುನ, ಗ್ರಹಗತಿಗಳಿಂದ ರಾಜ್ಯಕ್ಕೆ ಅಶುಭಶಂಕೆ ಕಂಡುಬರುತ್ತದೆಂದು, ಪತ್ನಿ ಲಕ್ಷ್ಮಾಗೆ ಬೇಸರ ತಾನು ತನ್ನ ಪತಿಗೆ ಒಳ್ಳೆಯ ಮಗನನ್ನು ಕೊಡಲಿಲ್ಲವೆಂದು, ನಂತರ ಕೃಷ್ಣಾ ಎಂದು ನಾಮಕರಣ ಮಾಡಿದರು. ಕೃಷ್ಣಾ ತಾಯಿಯ ಅತೀ ಪ್ರೀತಿಯಿಂದ ಅರಮನೆಯಲ್ಲಿ ತಾನು ಚಕ್ರವರ್ತಿಗಳ ಮಗನೆಂದು ಇತರರನ್ನು ಗೌರವಿಸದೇ ಅಹಂಭಾವದಿಂದ ಬೆಳೆಯುತ್ತಾನೆ. ರಾಷ್ಟ್ರಕೂಟದ ಸುತ್ತಾ ಭೀತಿ ಕವಿದುಬಂದ ಹೊತ್ತಿನಲ್ಲೇ ಚಕ್ರವರ್ತಿಗಳು ಚಿಂತಾಕ್ರಾಂತರಾಗುತ್ತಾರೆ, ಯುದ್ಧವನ್ನು ತಪ್ಪಿಸಲು ಹಾಗು ಉತ್ತರ ದಕ್ಷಿಣಗಳಲ್ಲಿ ತಲವನಪುರದ ಗಂಗರಾಚಮಲ್ಲ ದಾಳಿಯನ್ನು ತಪ್ಪಿಸಲು ಹಾಗು ರಾಜ್ಯಕ್ಕೆ ಪ್ರಬಲ ವೈರಿಗಳಾಗಿ ನಿಂತ ಕನ್ಯಾಕುಬ್ಜದ ಮಿಹಿರಭೋಜ ಭೃಗಕೃಚ್ಚ ನಗರವನ್ನು ಆಕ್ರಮಿಸಿ ರಾಷ್ಟ್ರಕೂಟ ರಾಜ್ಯದತ್ತ ಕಾಲು ಚಾಚುತ್ತಿರುವುದನ್ನು ಕಂಡು, ತನ್ನ ಮಗಳಾದ ಶಂಖಾದೇವಿಯನ್ನು ಪಲ್ಲವ ರಾಜಕುಮಾರ ನಂದಿವರ್ಮನಿಗೆ ವಿವಾಹಮಾಡಿಕೊಟ್ಟು ಅದರಿಂದ ಪಾಂಡ್ಯರ ವಿರುದ್ಧ ರಾಷ್ಟ್ರಕೂಟ ರಾಜ್ಯಕ್ಕೆ ಪಲ್ಲವರು ನೆರವಾಗುವಂತೆ ಮಾಡುತ್ತಾರೆ ಹಾಗು ವೆಂಗವಳ್ಳಿಯ ವಿಜಯದಿಂದ ಪೂರ್ವ ಚಾಲುಕ್ಯರೂ ಸಾಮಂತರಾಗಿ ಅವರ ಭೀತಿಯೂ ತಪ್ಪಿರುತ್ತದೆ, ಹೀಗೆ ರಾಜ್ಯದ ರಕ್ಷಣೆಗಾಗಿ ಚಕ್ರವರ್ತಿಗಳು ಚಾತುರ್ಯದಿಂದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.
ರಾಜಕುಮಾರನನ್ನು ದಾರಿಗೆ ತರಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ ಇದೇ ಸಮಯದಲ್ಲಿ ಬನವಾಸಿಯ ಬಂಕರಸರು ತಮ್ಮ ಮಗ ಲೋಕಾದಿತ್ಯನನ್ನು ಗುಣಭದ್ರಾಚಾರ್ಯರಲ್ಲಿಗೆ ವಿದ್ಯೆ ಕಲಿಯಲು ಸೇರಿಸಲು ನಿರ್ಧರಿಸಿ ಚಕ್ರವರ್ತಿಗಳ ಬಳಿ ಹೇಳಿಕೊಂಡಾಗ ಇದು ಸರಿಯಾದ ಆಯ್ಕೆ ಎಂದು ಮನಗೊಂಡು ತಮ್ಮ ಮಗ ಕೃಷ್ಣನನ್ನೂ ಅವರ ಬಳಿ ವಿದ್ಯೆ ಕಲಿಯಲು ಗುರುಕುಲಕ್ಕೆ ಕಳುಹಿಸಿಕೊಡುತ್ತಾರೆ. ಸುಖವಾಗಿ ಅರಮನೆಯಲ್ಲಿ ಬೆಳೆದ ಕೃಷ್ಣನಿಗೆ ತಂದೆಯ ಈ ನಿರ್ಧಾರದಿಂದ ಅವರ ಮೇಲೆ ಕುಪಿತನಾಗುತ್ತಾನೆ. ಇದೇ ಸಮಯದಲ್ಲಿ ಲಕ್ಷ್ಮಾ ಪುನಃ ಗರ್ಭವತಿಯಾಗುತ್ತಾಳೆ, ಆಕೆಗೆ ಬನವಾಸಿ ನೋಡಲು ಬಯಕೆಯಾಗುತ್ತದೆ, ಕಷ್ಟಪಟ್ಟು ಚಕ್ರವರ್ತಿಗಳನ್ನು ಒಪ್ಪಿಸಿ ಬನವಾಸಿಗೆ ಇಬ್ಬರೂ ತೆರಳಿ ಅಲ್ಲಿಯ ಪ್ರಕೃತಿಯ ಸೌಂದರ್ಯವನ್ನು ಕಂಡು ಹಾಗು ಪ್ರಜೆಗಳ ಸತ್ಕಾರಗಳನ್ನು ಕಂಡು ಬೆರಗಾಗುತ್ತಾರೆ. ನಂತರ ಹೆಣ್ಣುಮಗುವಿಗೆ ಜನ್ಮ ನೀಡುತ್ತಾಳೆ ಆ ಮಗುವಿಗೆ ಚಂದ್ರಕಲಾ ( ತನ್ನ ಉತ್ಕರ್ಷ ಕಾಲದಲ್ಲಿ ತಾನು ಮಾತ್ರ ಹಿಗ್ಗದೆ ಕಡಲನ್ನೂ ಹರ್ಷ ಪಡಿಸುವ ಪೂರ್ಣಿಮಾ ಚಂದ್ರನಂತೆ ಸಕಲರಿಗೂ ಆನಂದ ನೀಡಿದ ಕನ್ಯೆಗೆ) ಎಂದೂ ನಾಮಕರಣ ಮಾಡುತ್ತಾರೆ.
ಗುಣಭದ್ರಾಚಾರ್ಯರ ಶಿಷ್ಯತ್ವದಲ್ಲಿ ರಾಜಕುಮಾರನ ವಿದ್ಯಭ್ಯಾಸ ಯಾವ ಭೀತಿಯೂ ಇಲ್ಲದಯೇ ಮುಂದುವರೆಯುತ್ತಿರುತ್ತದೆ, ಕೃಷ್ಣನಿಗೆ ಯೌವರಾಜ್ಯಭಿಷೇಕ ಮಾಡಿಸಬೇಕೆಂದು ನಿರ್ಧರಿಸುವಲ್ಲಿ ರಾಜ್ಯದಲ್ಲಿ ಹಲವಾರು ಘಟನೆಗಳು ನಡೆಯುತ್ತವೆ. ಕಂಚಿ ದೇವಿಯನ್ನು ನೋಡಲು ಬಯಕೆಪಟ್ಟ ತನ್ನ ಪತ್ನಿ ಕಂಚಿಯಲ್ಲಿ ಸಾವನ್ನಪ್ಪುತ್ತಾಳೆ. ಮಿಹಿರಾಭೋಜ ರಾಷ್ಟ್ರಕೂಟದತ್ತ ಬರುತ್ತಿರುವುದನ್ನು ಕಂಡು ತನ್ನ ಸೇನೆಗೆ ತಕ್ಕ ಸೇನಾಧಿಪತಿಯನ್ನು ಆರಿಸಲು ಗುಣಭದ್ರಾಚಾರ್ಯರ ಸಲಹೆಯಿಂದ ಒಂದು ಪರೀಕ್ಷೆ ಏರ್ಪಡಿಸುತ್ತಾರೆ, ಬಂಕರಸರ ಮಗ ಲೋಕಾದಿತ್ಯ, ವೆಂಗಿಯರಸರು ಕಳಿಸಿದ ಪಾಂಡುರಂಗ, ತಗರದ ಆದಿತ್ಯವರ್ಮರ ದಂಡನಾಯಕ ದುರ್ಗಾದಿತ್ಯ, ಚೇದಿಯವರ ಪಡೆಯ ದಂಡನಾಯಕನಾಗಿ ಬಂದ ಶಂಕರಗಣ,ನೊಳಂಬಬಲದ ನಾಯಕ ಮಂಗಿ ಪಾಲ್ಗೊಂಡು ಅವರೆಲ್ಲರೂ ಸೋತು ಲೋಕದಿತ್ಯನು ಮಾತ್ರ ಗೆದ್ದಾಗ ಆತನಿಗೆ ಸೇನಾಧಿಪತ್ವವನ್ನು ವಹಿಸುತ್ತಾರೆ, ಇದರಿಂದ ಶಂಕರಗಣ, ವೆಂಗಿ ಚಕ್ರವರ್ತಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುತ್ತಾರೆ. ಚಕ್ರವರ್ತಿಗಳಿಗೂ ಮಗನಿಗೂ ಮನಸ್ತಾಪಗಳು ಇರುವುದನ್ನು ಅರಿತ ಶಂಕರಗಣ ಹಾಗು ವೆಂಗಿ ಕೃಷ್ಣನನ್ನು ಕುತಂತ್ರದಿಂದ ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ.
ಲೋಕಾದಿತ್ಯನಿಗೆ ಸೇನಾಧಿಪತ್ವವನ್ನು ವಹಿಸಿದ್ದು, ಪರೀಕ್ಷೆಯ ಸಲಹೆ ಆಚಾರ್ಯರದ್ದೂ ಇದೆಲ್ಲವೂ ತನಗೆ ಯೌವರಾಜ್ಯ ಪದವಿ ತಪ್ಪಿಸಲು ಎಲ್ಲರೂ ಹೂಡಿರುವ ಸಂಚೆಂದು ಶಂಕರಗಣ, ವೆಂಗಿ ಮಾತುಗಳನ್ನು ನಂಬಿ ತಂದೆಯ ಮೇಲೆ ಸೇಡು ತೀರಿಸಿಕೊಳ್ಳಲು ಕೃಷ್ಣಾ ಕಾಯುತ್ತಿರುತ್ತಾನೆ. ವೆಂಗಿಗೆ ಆನಂದವೋ ಆನಂದ ಅಂತೂ ಅವನ ಸಂಚು ಸಫಲನಾಗಿ ಗಂಗರಾಜ್ಯದ ನೀತಿಮಾರ್ಗನನ್ನು ರಾಷ್ಟ್ರಕೂಟದ ಮೇಲೆ ದಾಳಿಮಾಡಲು ಸೂಚಿಸುತ್ತಾನೆ. ನೀತಿಮಾರ್ಗನು ರಾಜಾರಮಡುವಿನಲ್ಲಿ ರಾಷ್ಟ್ರಕೂಟ ಪಡೆಗಳ ಮೇಲೆ ದಾಳಿಮಾಡುತ್ತಾನೆ, ರಾಷ್ಟ್ರಕೂಟ ಪಡೆಗಳಿಗೆ ಸೋಲಾಯಿತೆಂಬ ಸುದ್ಧಿ ತಿಳಿದ ಕೂಡಲೆೇ ಶಂಕರಗಣ ಕೃಷ್ಣನನ್ನೇ ರಾಷ್ಟ್ರಕೂಟ ಚಕ್ರವರ್ತಿಯಂದು ಘೋಷಿಸುತ್ತಾನೆ. ಈ ಸುದ್ಧಿ ನೃಪತುಂಗ ಚಕ್ರವರ್ತಿಗಳಿಗೆ ತಿಳಿದಾಗ ತನ್ನ ಮಗನೇ ರಾಜ್ಯದ್ರೋಹ ಮಾಡಿದನೆಂದು ದುಃಖಪಡುತ್ತಾರೆ, ಮಗನ ಮೇಲೆ ದಂಡೆತ್ತಿ ಹೋಗಲು ತಾವೇ ಸೇನಾಧಿಪತ್ಯ ಸ್ವೀಕಾರ ಮಾಡುತ್ತಾರೆ, ವಿದ್ರೋಹಿ ರಾಜಕುಮಾರನನ್ನು ಹಿಡಿದು ತಂದವರಿಗೆ ಬಹುಮಾನವೆಂದು ಘೋಷಿಸುತ್ತಾರೆ. ತಲವನಪುರವನ್ನು ಗೆದ್ದು ಚಕ್ರವರ್ತಿಗಳಿಂದ ಮೆಚ್ಚುಗೆಯ ಓಲೆ ಬರಬಹುದೆಂದು ನಿರೀಕ್ಷಿಸಿದ ಬಂಕರಸರಿಗೆ ಈ ಸುದ್ಧಿ ಬೇಸರವನ್ನುಂಟುಮಾಡುತ್ತದೆ. ಕೃಷ್ಣನನ್ನು ಹಿಡಿದು ತರುವುದಾಗಿ ತಾವೇ ಜವಾಬ್ದಾರಿ ವಹಿಸುತ್ತಾರೆ. ಗಂಗರ ದಾಳಿಯ ವಿರುದ್ಧ ಬಂಕರಸರು ದಂಡಯಾತ್ರೆ ಹೊರಟು ಕೈದಾಳವನ್ನು ವಶಪಡಿಸಿಕೊಂಡರೆಂದು ತಿಳಿದು ವೆಂಗಿ ಪಲಾಯನ ಮಾಡುತ್ತಾನೆ. ವೆಂಗಿಯ ಸಂಚನ್ನರಿತ ಶಂಕರಗಣನ ಕಣ್ಣೂ ತೆರೆಯುತ್ತದೆ. ಅನ್ಯರ ಮಾತು ಕೇಳಿ ತಂದೆಯ ಮೇಲೆ ದಂಡೆತ್ತಿ ಹೋದುದಕ್ಕಾಗಿ ಕೃಷ್ಣ ತನ್ನ ತಪ್ಪಿನ ಅರಿವಿನಿಂದ ಪಶ್ಚಾತ್ತಾಪ ಪಡುತ್ತಾನೆ.
ಚಕ್ರವರ್ತಿಗಳು ರಾಜಕುಮಾರನಿಗೆ ಮರಣದಂಡನೆ ವಿಧಿಸುತ್ತಾರೆ, ಆದರೆ ಕೃಷ್ಣನು ತನ್ನ ತಪ್ಪಿನ ಅರಿವಿನಿಂದ ಪಶ್ಚಾತ್ತಾಪಪಟ್ಟದನ್ನು ಕಂಡು ಪ್ರಜೆಗಳು ಮರಣದಂಡನೆಗೆ ಒಪ್ಪುವುದಿಲ್ಲ, ಅವೆರಲ್ಲರ ಒತ್ತಾಯದಿಂದ ಹಾಗು ಅವರೆಲ್ಲರ ಕೋರಿಕೆಯಂತೆ ಕೃಷ್ಣನನ್ನು ಬಿಡುಗಡೆ ಮಾಡುತ್ತಾರೆ, ರಾಜ್ಯಕ್ಕೆ ದ್ರೋಹ ಮಾಡಲು ಹೊರಟ ತನ್ನ ಸ್ವಂತ ಮಗನೆಂದೂ ಲೆಕ್ಕಿಸದೆ ಆತನಿಗೆ ಶಿಕ್ಷೆ ವಿಧಿಸಿದ್ದನ್ನು ಕಂಡು ಪ್ರಜೆಗಳ ಹೃದಯದಲ್ಲಿ ಚಕ್ರವರ್ತಿಗಳ ಮೇಲಿದ್ದ ಅಭಿಮಾನವೂ ಹೆಚ್ಚಿ ಚಕ್ರವರ್ತಿಗಳು ಇನ್ನೂ ಹೆಚ್ಚು ವರ್ಷ ಬಾಳಬೇಕೆಂದು ಆಶೀರ್ವಾದ ನೀಡಿದರಿಂದ ಅವರು *ಅಮೋಘವರ್ಷ ನೃಪತುಂಗ ಎಂದೇ ಪ್ರಸಿದ್ಧಿ ಹೊಂದುತ್ತಾರೆ. ರಾಷ್ಟ್ರಕೂಟ ರಾಜ್ಯಕ್ಕೆ ಕವಿದ ವೈರವನ್ನು ಅಳಿಸಲು ತನ್ನ ರಾಜಕುಮಾರಿ ಚಂದ್ರಕಲಾನನ್ನು ಮಾನ್ಯಖೇಟವನ್ನು ಬಿಟ್ಟು ತಲವನಪುರವನ್ನು ಬೆಳಗಿಸಲು ಕೇಳಿಕೊಳ್ಳುತ್ತಾರೆ, ಯುದ್ಧ ಭೀತಿ ಹೋಗಿ ಈಗ ಎಲ್ಲೆಲ್ಲೂ ಶಾಂತಿ ನೆಲಸುವುದಾಗಿ ಮನಗಂಡ ಚಕ್ರವರ್ತಿಗಳು ಆನಂದದಿಂದಿರಬೇಕಾದರೆ ಆಕಾಶದಲ್ಲಿ ಉತ್ಪಾತ ಸೂಚನೆ ಕಂಡು ಬರುತ್ತದೆ. ಇದು ಪ್ರಕೃತಿಯ ವಿಕೋಪದಿಂದ ಮುಂಬರುವ ದಿನಗಳಲ್ಲಿ ಪ್ರಜೆಗಳು ಕ್ಷಾಮದಿಂದ, ರೋಗರುಜಿನಗಳಿಂದ ಸಾಯುವರೆಂದು ಆಚಾರ್ಯರು ತಿಳಿಸಿದಾಗ ಅದಕ್ಕೆ ಪರಿಹಾರವನ್ನು ಕೇಳುತ್ತಾರೆ. ಕರವೀರಪುರದ ಮಹಾಲಕ್ಷ್ಮಿಗೆ ಅಂಗುಲಿದಾನ ಮಾಡಿ ಪ್ರಕೃತಿಯನ್ನು ಶಾಂತಗೊಳಿಸಲು ಯಜ್ಞ ಮಾಡಿ ಸನ್ಯಾಸ ಸ್ವೀಕರಿಸಿ ಕೃಷ್ಣನಿಗೆ ರಾಜ್ಯದ ಜವಾಬ್ದಾರಿ ವಹಿಸಿ ಹೊರಟುಹೋಗುತ್ತಾರೆ.
ಪ್ರಜಾಹಿತೇ ಹಿತಂ ರಾಜ್ಞಃ ಪ್ರಜೆಗಳ ಮನಸ್ಸನ್ನು ಗೆದ್ದ ಚಕ್ರವರ್ತಿಗಳು ರಾಜ ಪರಮೇಶ್ವರ, ಪರಮ ಭಟ್ಟಾರಕ,ಅಮೋಘರಾಮಂ, ಗರುಡಲಾಂಛನಂ, ಬುದ್ಧ ಮನೋಹರಂ, ಅಭಿಮಾನಮಂದಿರಂ, ಅಮೋಘವರ್ಷ ಚಕ್ರವರ್ತಿ ಉಘೇ ಉಘೇ ಎಂದು ಘೋಷಿಸಿತು.
- ಕಾರ್ತಿಕೇಯ
ಕಾರ್ತಿಕೇಯ ಭಟ್ ಅವರ ಲೇಖಕ ಪರಿಚಯಕ್ಕಾಗಿ
`200 ಪುಟಕ್ಕಿಂತ ಕಡಿಮೆ ಇದ್ದರೆ ಚಂದ. ಪ್ರಕಾಶಕರು ಲೇಖಕರಿಗೆ ಹೀಗೆ ಕಡಿಮೆ ಪುಟಗಳಲ್ಲಿ ಕಥೆ, ಕಾದಂಬರಿಗಳನ್ನು ಬರೆಯಲು ಹ...
“ಕಾದಂಬರಿಯಲ್ಲಿ ಭಾರತೀಯ ಗ್ರಾಮ್ಯ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಹಳ್ಳಿಯ ಜೀವನ, ಸಂಸ್ಕೃತಿ, ಪರಿಸರವನ್ನು ಚಿತ್ರ...
“ನೋವುಗಳು ಇಲ್ಲ ಅಂತಲ್ಲ, ಸೀರಿಯಲ್ ಹೀರೋಯಿನ್ ಥರ ಒಂದು ಫೇಕ್ ನಗು ಕೊಟ್ಟು ಇರಬೇಕು ಅಂತಲ್ಲ. ಆದರೆ 'ಬದುಕಬೇ...
©2025 Book Brahma Private Limited.