ಭಾರತದ ಸಾಮಾಜಿಕ ನ್ಯಾಯದ ಹೋರಾಟಗಾರ ಡಾ. ಬಿ.ಆರ್. ಅಂಬೇಡ್ಕರ್ : ಶಿವಾನಂದ ಮೇತ್ರೆ


ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ ಧೀಮಂತ. ಜ್ಞಾನದ ಸಂಕೇತವಾಗಿ ಬಾಬಾಸಾಹೇಬರನ್ನು ಇಡೀ ವಿಶ್ವ ಗುರುತಿಸಿದೆ ಎಂದು ತಹಸೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು. 

ಹುಲಸೂರಿನ ಎಂಕೆಕೆಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಹಮ್ಮಿಕೊಂಡಿದ್ದ ‘ಅಂಬೇಡ್ಕರ್ ಓದು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿಗೂ ಜೀವಂತವಾಗಿರುವ ಜಾತಿ ವ್ಯವಸ್ಥೆ ನಾಶ ಮಾಡುವ ಜವಾಬ್ದಾರಿ ಇಂದಿನ ಯುವಕರ ಮೇಲಿದೆ. ಅಂಬೇಡ್ಕರ್ ಬರಹ ಅಧ್ಯಯನದ ಮೂಲಕ ಹೊಸ ಸಮಾಜ ಕಟ್ಟಲು ಸಾಧ್ಯ ಎಂದರು. 

ಡಾ. ಅಂಬೇಡ್ಕರ್ ಜಗತ್ತಿನ ಮೇಧಾವಿ ವಿದ್ವಾಂಸರು. ಅವರ ಬರಹಗಳ ಅಧ್ಯಯನ ನಿರಂತರ ನಡೆಯಬೇಕು. ಮಹಾಪುರುಷರನ್ನು ಜಾತಿಯ ಚೌಕಟ್ಟಿನಲ್ಲಿ ಇಟ್ಟು ಅವರನ್ನು ಆರಾಧಿಸುತ್ತಿರುವುದು ದುರಂತ. ಅವರ ತತ್ವಸಿದ್ಧಾಂತಗಳು ಎಲ್ಲರೂ ಪಾಲೀಸಬೇಕು. ದುಂಡು ಮೇಜಿನ ಪರಿಷತ್ತಿನಲ್ಲಿ ನಿಮ್ನ ವರ್ಗದವರ ಹಕ್ಕಿಗಾಗಿ ಹೋರಾಡಿದ ಮಹಾಪುರುಷ ಅಂಬೇಡ್ಕರ್ ಎಂದು ಹೇಳಿದರು. 

ಜಿಪಂ ಮಾಜಿ ಉಪಾಧ್ಯಕ್ಷ ಲತಾ ಹಾರಕೂಡೆ ಮಾತನಾಡಿ, ಸಿನಿಮಾ ಧಾರಾವಾಹಿ ರೂಪದಲ್ಲೂ ಅಂಬೇಡ್ಕರ್ ಕಥನ ಬರುತ್ತಿದೆ. ಅದಕ್ಕಿಂತ ಮುಖ್ಯ ಅಂಬೇಡ್ಕರರ ಬರೆದ ಬರಹಗಳು ಅವುಗಳ ಓದು ವಿದ್ಯಾರ್ಥಿಗಳಿಗೆ ಅನುಕೂಲ. ಸ್ವತಃ ಅಂಬೇಡ್ಕರರು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದವರು. ನಂತರ ವಿದ್ವಾಂಸರಾಗಿ ಜಗತ್ತಿನ ಗಮನ ಸೆಳೆದರು ಎಂದರು. 

ಮುಖಂಡ ಎಮ್.ಜಿ ರಾಜೋಳೆ ಮಾತನಾಡಿ, ಸಂದಿಗ್ದ ಪರಿಸ್ಥಿತಿಯಲ್ಲಿ ಓದಿ ಮೇದಾವಿಯಾದ ಅಂಬೆಡ್ಕರವರದು ಸಂಘಷÀðದ ದಾರಿಯಾಗಿದೆ. ಅವರು ಇಡೀ ಸಮಾಜಕ್ಕೆ ಮಾದರಿ. ಅವರ ಚಿಂತನೆ ವಿಚಾರಗಳು ನಾವೆಲ್ಲರು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು. 

ಬಸವಕಲ್ಯಾಣ ಅಕ್ಕಮಹಾದೇವಿ ಕಾಲೇಜು ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಜಗತ್ತಿನ ಬಹುದೊಡ್ಡ ಬೌದ್ಧಿಕ ಮತ್ತು ವೈಚಾರಿಕ ವ್ಯಕ್ತಿತ್ವದವರಾಗಿದ್ದಾರು. ಅವರ ಬರಹಗಳು ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ಸೂಕ್ಷö್ಮವಾಗಿ ನಿರ್ವಚಿಸಿವೆ. ಅವರು ಭಾರತೀಯ ಸಂವಿಧಾನದ ಮೂಲಕ ಸಮಾಜ, ರಾಜಕೀಯ ಅಡಳಿತಾತ್ಮಕ ಸಂಗತಿಗಳು ನಿರೂಪಿಸುತ್ತಲೇ ಭಾರತೀಯ ಬಹುತ್ವದ ಮಹತ್ವವು ತಿಳಿಸುತ್ತಾರೆ. 
ಅವರೇ ಬರೆದ ಬರಹ ಭಾಷಣಗಳ ಒಟ್ಟು ಮೊತ್ತ ಸಾಂಸ್ಕೃತಿಕ ಸಂವಿಧಾನವಾಗಿದೆ. ಇದು  ಮನುಷ್ಯನ ಭಾವನಾತ್ಮಕ, ಸಮಾಜಿಕ ಬದುಕಿನ ಶೈಲಿಯನ್ನು ವಿವೇಕಪೂರ್ಣವಾಗಿ, ವಿದ್ವತ್ಪೂರ್ಣವಾಗಿ, ಪ್ರಜ್ಞಾಪೂರ್ವಕವಾಗಿ ನಿರ್ವಚಿಸಿದೆ. ಡಾ. ಅಂಬೇಡ್ಕರ್ ಅವರು ಎಲ್ಲಾ ಕಾಲದ ಅರಿವು. ಅವರ ಬರಹ ಪ್ರಜ್ಞೆಯ ಬಹುದೊಡ್ಡ ರೂಪವಾಗಿದೆ.

ಬೀದರನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ. ಅರುಣ ಜೋಳದಕೂಡ್ಲಗಿ ಯೂಟ್ಯುಬ್‌ನಲ್ಲಿ ನಡೆಸುವ ‘ಅಂಬೇಡ್ಕರ್ ಓದು’ ಹೊಸ ದಾಖಲೆ ಬರೆದಿದೆ. ನಾಡಿನ ಅನೇಕ ವಿದ್ವಾಂಸರು ಅಂಬೇಡ್ಕರ್ ಅವರ ಬರಹ ವಾಚಿಸಿರುವುದು ಶ್ಲಾಘನಿಯ.
ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾಂಸ್ಕೃತಿಕ ವಸಾಹತುಶಾಹಿಯಿಂದ ಬಿಡುಗಡೆಗೆ ಶ್ರಮಿಸಿದರು. ಅಕ್ಷರ, ಹೋರಾಟ, ವೈಚಾರಿಕ ಮತ್ತು ವೈಜ್ಞಾನಿಕ ಪ್ರಜಾಸತ್ತೆ ಹಾಗೂ ಸಾಂಸ್ಕೃತಿಕ ಸಂವಿಧಾನದ ಮೂಲಕ ಊನಗೊಂಡ ಜೀವನಕ್ರಮದ ಬಿಡುಗಡೆ ಸಾಧ್ಯ ಎಂದು ಅರುಹಿದರು ಎಂದರು. 

ಪ್ರಾಚಾರ್ಯ ಪ್ರೊ. ಮಲ್ಲಿಕಾರ್ಜುನ ಕಾಂಬಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಸ್ಪರ್ಧೆಯಲ್ಲಿ ಭಾಗ ವಹಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪ್ರಮಾಣ ಪತ್ರ ವಿತರಿಸಲಾಗಿದೆ. ಬೀದರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂದೆ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಸಿದ್ರಾಮಪ್ಪ ಬಣಗಾರ ನಿರೂಪಿಸಿದರು. ಡಾ. ಮಾರುತಿಕುಮಾರ ಸ್ವಾಗತಿಸಿದರು. ಸಂತೋಷ ಮಹಾಜನ ವಂದಿಸಿದರು.  

MORE FEATURES

ಓದಿಯೇ ಅನುಭವಿಸಬಹುದಾದ ಒಂದೊಳ್ಳೆಯ ಶುದ್ಧವಾದ ಪ್ರೇಮ

16-10-2024 ಬೆಂಗಳೂರು

"ವಿರಹದ ತಕ್ಕಡಿ ಹಿಡಿದು ತೂಗಲು, ಸಂಜೆಯ ಹೊತ್ತಿಗೆ ನೆನಪು ಮಾಡಿಕೊಂಡು ಕನಸು ಕಾಣಲು, ಎಷ್ಟು ಪ್ರೀತಿಸ್ತೀನಿ ಅಂತ ಅ...

ವೈಚಾರಿಕತೆಗಿಂತ ಕವಿಗೆ ಭಾಷೆಯೇ ಮುಖ್ಯ

16-10-2024 ಬೆಂಗಳೂರು

"ಅಡಿಗರ ಕಾವ್ಯದಲ್ಲಿ ಆದ ಈ ಬದಲಾವಣೆಗೆ ಸಾಧಾರವಾಗಿ, ನವ್ಯಕಾವ್ಯದ ಸಂದರ್ಭದಲ್ಲಿ ಅವರು ಬರೆದ ಕಾವ್ಯದಲ್ಲಿ ಅವರ rat...

ಕನ್ನಡದ ಕೊರತೆಯಿರುವ ಪ್ರದೇಶದಲ್ಲಿ, ಕನ್ನಡವನ್ನು ಎತ್ತಿ ಹಿಡಿದವರು ಭಾಲಚಂದ್ರ ಜಯಶೆಟ್ಟಿ

15-10-2024 ಬೆಂಗಳೂರು

“ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಲೋಕದಲ್ಲಿ ತಮ್ಮದೆಯಾದ ವ್ಯಕ್ತಿತ್ವದ ಛಾಪು ಮೂಡಿಸಿದ್ದಾರೆ...