February 5, 2024
ಟಾರ್ಚ್ ಲೈಟ್ | ಶರಣಪ್ಪ ದಿನ್ನಿ
ಸುತ್ತಲೂ ಕತ್ತಲು ರಸ್ತೆ ಬದಿಯಲಿ ನಿಂತಿರಲು, ಅಲಂಕಾರ ಸಮೇತ ಕೈಯಲ್ಲೊಂದು ಟಾರ್ಚ್ ಲೈಟ್! ಇದು ಎಷ್ಟುತಾನೇ ಬೆಳಕು ನೀಡಬಲ್ಲದು ಅವಳ ರೆಡ್ ಲೈಟ್ ಬದುಕಿಗೆ!! ಬೆರಳ ಸನ್ನೆಯಲಿ ಬೆಲೆ ನಿಗದಿ ಮಾಡುವಳು ದೇಹಕೆ, ಒಪ್ಪದ ಮನಸ್ಸು ಬಿಡದ ಸನ್ನಿವೇಶ ಮೈಯನ್ನೇ ತಣಿಸುವಳು ಮೈತುಂಬಿರುವ ಸಾಲಕೆ! ಬಾಳ ದನಿ ಕಳಚಿದರೂ ನೋವಿನ ಚಹರೆಗಳಿಗೆ ಗೋಡೆ ಕಟ್ಟಿ ನಗುತಿರಲು!!
By Book Brahma
- 416
- 0
- 1