March 10, 2024
ನನ್ನ ದೂರಬೇಡ ಚೋರನೆಂದು | ಶ್ರವಣ್ ನೀರಬಿದಿರೆ
ನೀ ತೂಕಡಿಸಲೆ ಕಾದು ತೋಟಕ್ಕೆ ಲಗ್ಗೆಯಿಟ್ಟು ಒಲವ ಕದಿಯುವ ಯೋಜನೆಯಿದೆ ಮುಂದೆ ನನ್ನ ದೂರಬೇಡ ಚೋರನೆಂದು ರಾತ್ರಿ ಜಾಗರಣೆಯಿದ್ದು ಕಾವಲು ಕಾಯ್ದು ಜೋಪಾನ ಮಾಡುವ ಆಯ್ಕೆ ನಿನಗಿದೆ ಆದರೂ ನನ್ನದೊಂದು ಭಿನ್ನಹ ಹುಸಿನಿದ್ದೆ ನಟಿಸಿ ಸ್ವಾಗತಿಸು ನಾಳೆ ದಿನ ನನ್ನ ತೋಟವನ್ನೆ ನಿನ್ನ ಹೆಸರಿಗೆ ಬರೆದಿಡುತ್ತೇನೆ ಸಿಗುವ ಪ್ರತಿ ಫಸಲನ್ನೂ ನಿನಗೆ ಒಪ್ಪಿಸುತ್ತೇನೆ –ಶ್ರವಣ್ ನೀರಬಿದಿರೆ
By Book Brahma
- 391
- 0
- 0