
ಕಂಬಳ ಓಟಗಾರ ಶ್ರೀನಿವಾಸ ಗೌಡರ ಕುರಿತಾದ ‘ಕಂಬಳ ಶ್ರೀ’ ಕೃತಿ ಬಿಡುಗಡೆ
ಮೂಡುಬಿದಿರೆ (ದಕ್ಷಿಣ ಕನ್ನಡ): ಕಂಬಳದ ವೇಗದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರ ಬಗ್ಗೆ ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಬರೆದ ‘ಕಂಬಳ ಶ್ರೀ’ ಕೃತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಂಗಳವಾರ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಶ್ರೀನಿವಾಸ ಗೌಡರು ಶ್ರಮಜೀವಿಯಾಗಿದ್ದು ಕಂಬಳ ಓಟದಲ್ಲಿ ಮಾಡಿದ ಸಾಧನೆ ಅಗಾಧವಾದುದು.
- 355
- 0
- 0