May 22, 2024
ಅಪ್ಪ | ಭ್ರಮರಾಂಬಿಕ
ನನ್ನ ಹೃದಯದ ಗರ್ಭ ಗುಡಿಯಲ್ಲಿ ಹಚ್ಚಿರುವೆ ನಿನಗಾಗಿ ಒಂದು ಹಣತೆ ಆ ಗರ್ಭ ಗುಡಿಯಲ್ಲಿ ನೀನು ದೇವರಾಗಿ ಕುಳಿತೆ ಹೇಗೆ ವರ್ಣಿಸಲಿ ಈ ಮಗಳ ಮೇಲಿನ ಮಮತೆ ಬರೆದಷ್ಟು ಬಣ್ಣ ಪಡೆಯುತಿದೆ ಈ ನನ್ನಯ ಕವಿತೆ ಗಾಂಭೀರ್ಯದಲ್ಲಿ ಅಡಗಿದೆ ನಿನ್ನ ಪ್ರೀತಿಯ ಕಂತೆ ನೀ ಬಾನಂಗಳದಲ್ಲಿ ಪ್ರಕಾಶಿಸುವ ಭಾಸ್ಕರನಂತೆ ನಿನ್ನಂತ ಅಪ್ಪನನ್ನು ಪಡೆದ ನಾನೇ ಪುಣ್ಯವಂತೆ
By Book Brahma
- 696
- 0
- 0