Back To Top

ನಿರಾಕರಿಸಿದೆನೆಂದು ನಿರಾಸೆಯಾಗಬೇಡಾ ಚೆಲುವೆ | ಸಿದ್ಧಾರೂಢ ಎಸ್.ಜಿ.

ನಿರಾಕರಿಸಿದೆನೆಂದು ನಿರಾಸೆಯಾಗಬೇಡಾ ಚೆಲುವೆ | ಸಿದ್ಧಾರೂಢ ಎಸ್.ಜಿ.

ನಿರಾಕರಿಸಿದೆನೆಂದು ನಿರಾಸೆಯಾಗಬೇಡಾ ಚೆಲುವೆ// ಕಾಡಿಗೆಯ ಕುಳಿಯಲ್ಲಿ ಆಳದಿ ಮಿಂಚುವ ಕಂಗಳ ಹೊಳಪಿಗೆ ಸೋಲದವರಿಲ್ಲ ಅಂತದರಲ್ಲಿ ಸೋತರೂ ಸೋಲದ ಸೋಲಿಗ ನಾನು! ಭವಿಷ್ಯದ ಬಿಂಬವ ದಿನವೂ ಕಾಣದ ಕಂಗಳಿರಲಿಕ್ಕಿಲ್ಲ ಅಂತದರಲ್ಲಿ ಆಕರ್ಷಕ ಕಂಗಳ ಮಿಂಚು ಕಂಡರೂ ಕಾಣದ ಕುರುಡ ನಾನು! ಅಪಾರ ಆಕರ್ಷಣೆಗಳ ನಡುವೆ ನಂಬಿಕೆಯಿಲ್ಲದೆ ಪ್ರೇಮಿಗಳಿರಲಿಕ್ಕಿಲ್ಲ ಅಂತದರಲ್ಲಿ ನಂಬಿದರೂ ನಂಬಲಾಗದ ನಂಬಿಕಸ್ತ ನಾನು! ನಿನ್ನಂತ ಚಲುವೆ
  • 330
  • 0
  • 0
ಶೂನ್ಯ | ದೀಪ್ತಿ. ಎಮ್‌

ಶೂನ್ಯ | ದೀಪ್ತಿ. ಎಮ್‌

ಹೂಂ ಗುಟ್ಟದೆ ಇದ್ದ ಸಮಯ ಆಸರೆಯು ಸಿಗದೇ ಹೋದಾಗ ನಿನ್ನ ಕೈರುಚಿ ಬೇಕೆನಿಸಿದಾಗ ನೀನು ಹತ್ತಿರ ಇಲ್ಲದೇ ಹೋದ ಕೆಲವು ಸಮಯ ಎಲ್ಲವೂ ಶೂನ್ಯವೆನಿಸಿತು. ಅಮ್ಮಾ … ಎನ್ನುವುದು ಬೇಕೆಂದಾಗ ಮಾತ್ರ ಉಪಯೋಗಿಸುವ ಪದವಾಗದೆ, ಗೋಚರಕ್ಕೆ ಬರದಾಗಲು ಬಳಕೆಗೆ ಬರುವ ಪದ. ಎರಡಕ್ಷರದ ಈ ಪದ ಎಲ್ಲಾ ಪ್ರಶ್ನೆಗಳಿಗೂ ತೃಪ್ತಿ ಕೊಡಬಲ್ಲದು. ‘ನೀನು ನನ್ನನು ಬಿಟ್ಟು
  • 241
  • 0
  • 0
ಕಿಟಕಿ ಆಚೆಯ ನಿಗೂಢ ನೋಟ | ಶಿಲ್ಪ ಬಿ

ಕಿಟಕಿ ಆಚೆಯ ನಿಗೂಢ ನೋಟ | ಶಿಲ್ಪ ಬಿ

“ಭುಂ… ಭುಂ…ಭುಂ…. ಭುರ್ …ಭುರ್…ಭುರ್ ರ್ ರ್ ರ್…..” ಯಾರನ್ನೊ ವಿಚಲಿತಗೊಳಿಸುವ ಕರ್ಕಶ ಸದ್ದು! ಬೈಕಿಂದ ಹುಟ್ಟಿ, ಗಾಳಿಯಲ್ಲಿ ತೇಲಿ, ಕಿಟಕಿಯೊಳು ತೂರಿ mam ನ ಧ್ವನಿಯೊಡನೆ ಸ್ಪರ್ಧಿಸಿ ನಮ್ಮ ಕನ್ನಡ ಕ್ಲಾಸನ್ನು ಆವರಿಸಿಕೊಂಡಿತು. ಆಹಾ! ಎಂತಹ ಅದ್ಭುತ. ನಿರಂತರವಾಗಿ ನಡೆಯುತ್ತಿರುವ ಕ್ಲಾಸಿನಲ್ಲಿ ಇಂತಹದ್ದೊಂದು ಸದ್ದು ಕೇಳಿಸಬೇಂಕೆಂದರೇ ನಾವೆಲ್ಲರೂ ಅದೆಷ್ಟೊ ಜನುಮಗಳ ಕಾಲ ತಪಸ್ಸು ಮಾಡಿರಬೇಕು.
  • 349
  • 0
  • 0
26ರ ವಿಜಯಕ್ಕೆ ಶ್ರಮಿಸಿದ ಯೋಧ ಸುಬೇದಾರ್ ಏಕನಾಥ ಶೆಟ್ಟಿ  | ಗ್ಲೆನ್‌ ಗುಂಪಲಾಜೆ

26ರ ವಿಜಯಕ್ಕೆ ಶ್ರಮಿಸಿದ ಯೋಧ ಸುಬೇದಾರ್ ಏಕನಾಥ ಶೆಟ್ಟಿ | ಗ್ಲೆನ್‌ ಗುಂಪಲಾಜೆ

ಪ್ರತಿ ಜುಲೈ 26 ರಂದು ‘ಕಾರ್ಗಿಲ್ ವಿಜಯ್ ದಿವಸ್’ ಆಚರಣೆ ಮಾಡಲಾಗುತ್ತದೆ. ಭಾರತೀಯರು ಎಂದೂ ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡಾ ಒಂದು. ಕಾರ್ಗಿಲ್‌ ಯುದ್ಧ ಭಾರತದ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡೆದು, ಅವರು
  • 282
  • 0
  • 0
ಸ್ಮಾರ್ಟ್‌ಫೋನ್‌ನಿಂದ ಸ್ಮಾರ್ಟ್‌ನೆಸ್‌ ಕಳೆದುಕೊಳ್ಳದಿರೋಣ | ಯೋಗೀಶ್‌ ಬಿ

ಸ್ಮಾರ್ಟ್‌ಫೋನ್‌ನಿಂದ ಸ್ಮಾರ್ಟ್‌ನೆಸ್‌ ಕಳೆದುಕೊಳ್ಳದಿರೋಣ | ಯೋಗೀಶ್‌ ಬಿ

ಭಾರತ ದೇಶವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಎಲ್ಲವೂ ಡಿಜಿಟಲ್‌ ಆಗಿ ಪರಿವರ್ತನೆಯಾಗುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರೂ ಇಂಟರ್ನೆಟ್‌ನ ಫಲಾನಿಭವಿಗಳೇ! ಯುವ ಸಮುದಾಯವಂತೂ ಡಿಜಿಟಲ್‌ ಜಗತ್ತಿನಲ್ಲೇ ಮುಳುಗಿದೆ. ಸ್ಮಾರ್ಟ್‌ಫೋನ್‌, ಇಂಟರ್ನೆಟ್‌ ಇಲ್ಲದಿದ್ದರೆ, ಅವರಿಗೆ ಏನು ಮಾಡುವುದು ಎಂದೂ ತೋಚದು. ಆದರೆ ಅದು ಕಾಲನಿರ್ಣಯ. ಈಗಿನ ಕಾಲವೇ ಇಂಟರ್ನೆಟ್‌ಮಯ. ಆದ್ದರಿಂದ ಅದು
  • 418
  • 0
  • 0
ಬಾಲ್ಯ ನೆನಪಿಸಿದ ಮಳೆ | ಅಕ್ಷಿತಾ ಡಿ.

ಬಾಲ್ಯ ನೆನಪಿಸಿದ ಮಳೆ | ಅಕ್ಷಿತಾ ಡಿ.

ಬಿಡದೆ ಸುರಿಯುತ್ತಿರುವ ಈ ಜಿಟಿಜಿಟಿ ಮಳೆಯನ್ನು ಮನೆಯ ಕಿಟಕಿಯ ಹತ್ತಿರ ಕುಳಿತು ನೋಡುವಾಗಲಂತೂ ನನ್ನ ಬಾಲ್ಯವೇ ಕಣ್ಣ ಮುಂದೆ ಬರುತ್ತದೆ. ಇನ್ನೇನು ಮಳೆ ಜೋರಾಗ್ತಿದೆ ಅಂದಾಗ, ನಾಳೆ ಶಾಲೆಗೆ ರಜೆ ಇರಲಿ ದೇವರೆ ಅಂತ ಬೇಡುವುದು ಯಾವತ್ತು ನ್ಯೂಸ್‌ ನೋಡದವರೂ ರಜೆ ಇದೆಯಾ ಎಂದು ನೋಡುವುದಕ್ಕಾದರೂ ಟಿ.ವಿ ಮುಂದೆ ಕುಳಿತುಕೊಳ್ಳುವುದು, ರಜೆ ಎಂದಾಗ ಖುಷಿಯಿಂದ ಕುಣಿದಾಡುವುದು,
  • 407
  • 0
  • 0