Back To Top

 ವಿದ್ಯಾರ್ಥಿಗಳು ಜಾನಪದ ಕಲೆಗಳನ್ನು ಉಳಿಸಬೇಕು : ಮಲ್ಲಿಕಾರ್ಜುನ್

ವಿದ್ಯಾರ್ಥಿಗಳು ಜಾನಪದ ಕಲೆಗಳನ್ನು ಉಳಿಸಬೇಕು : ಮಲ್ಲಿಕಾರ್ಜುನ್

ಕೆ.ಆರ್.ಪೇಟೆ: ವಿದ್ಯಾರ್ಥಿಗಳು ಬೇಸಿಗೆ ರಜೆಯನ್ನು ವ್ಯರ್ಥ ಮಾಡದೆ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿ ಕಲೆ ಮತ್ತು ಸಾಂಸ್ಕೃತಿಕ ವಿಷಯಗಳನ್ನು ಅಧ್ಯಯನ ಮಾಡಬೇಕು. ಆ ಮೂಲಕ ನಮ್ಮ ಜಾನಪದ ಕಲೆಗಳನ್ನು ಉಳಿಸಬೇಕು ಎಂದು ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಅಕ್ಕಿ ಹೆಬ್ಬಾಳು ರಂಗಮಂದಿರದಲ್ಲಿ ಲೋಕಾಯನ ಕಲ್ವರಲ್ ಫೌಂಡೇಶನ್ ಆಯೋಜಿಸಿದ್ದ 14ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಕ್ಕಿ ಹೆಬ್ಬಾಳು ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಶಿಬಿರದಲ್ಲಿ ಮಕ್ಕಳಿಗೆ ಜನಪದ ಕಲೆಗಳು, ಚಿತ್ರಕಲೆ, ಕರಕುಶಲ ಕಲೆ, ನಾಟಕದಲ್ಲಿ ಅಭಿನಯ ಸೇರಿದಂತೆ ಅನೇಕ ರೀತಿಯ ಕಲಾ ಪ್ರಕಾರಗಳನ್ನು ಕಲಿಸಿಕೊಡಲಾಗಿದೆ ಎಂದು ಅವರು ತಿಳಿಸಿದರು.

ಕಸಾಪ ತಾಲ್ಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ನಮ್ಮ ಮಂಡ್ಯ ಜಿಲ್ಲೆಯಲ್ಲಿ ಅಕ್ಕಿ ಹೆಬ್ಬಾಳು ಗ್ರಾಮದಲ್ಲಿರುವ ಈ ರಂಗಮಂದಿರದ ಉಪಯೋಗವನ್ನು ಎಲ್ಲರೂ ಪಡೆದುಕೊಂಡು ನಮ್ಮ ಗ್ರಾಮೀಣ ಕಲೆಗಳನ್ನು ಕಲಿತು ಗ್ರಾಮೀಣ ಕಲೆಗಳನ್ನು ಉಳಿಸಬೇಕು ಎಂದು ಅವರು ಹೇಳಿದರು.

ವೇದಿಕೆ ಕಾರ್ಯಕ್ರಮದ ನಂತರ ರಂಗೀಲಾಲನ ನಿಲುವಂಗಿ ಮತ್ತು ಹ್ಯಾಪಿ ಬರ್ತೇ ಟು ಯು ಎಂಬ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು. ಬಳಿಕ  ಸಾಮೂಹಿಕ ಗಾಯನ ನಡೆಯಿತು.

ಲೋಕಾಯನ ಸಂಸ್ಥೆಯ ಮುಖ್ಯಸ್ಥ ಶಶಿಧರ್ ಭಾರಿಘಾಟ್, ಸಿನಿಮಾ ನಿರ್ದೇಶಕ ಉಮಾಶಂಕರ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ವಾಸು, ಮುಖ್ಯಶಿಕ್ಷಕ ಅಮಿತ್, ಯುವ ಸಾಹಿತಿ ಮೊಹಮ್ಮದ್ ಅಜರುದ್ದೀನ್ ಮತ್ತಿತರರು ಭಾಗವಹಿಸಿದ್ದರು.

Prev Post

ಬೆಳಕು | ರೂಪರಾಣಿ ಪಟಗಾರ

Next Post

ನಿಮ್ಮ ಪ್ರೀತಿ ಸುಳ್ಳಲ್ಲ | ಏಂಜಲ್ ರಾಣಿ

post-bars

Leave a Comment

Related post