
ರಾಜ್ಯ ಮಟ್ಟದ ಮೀಡಿಯಾ ಫೆಸ್ಟ್ ಪೋಸ್ಟರ್ ಬಿಡುಗಡೆ
ಕರ್ನಾಟಕ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 40ನೇಯ ವರ್ಷದ ಆಚರಣೆ ಸಮಾರೋಪ ಸಮಾರಂಭದ ಅಂಗವಾಗಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ, ರಾಜ್ಯ ಮಟ್ಟದ ಮೀಡಿಯಾ ಫೆಸ್ಟ್ 2024 ಹಾಗೂ ಕವಿಪವಿ ಸಮ್ಮಿಲನ ಜುಲೈ 8 ಹಾಗೂ 9ರಂದು ನಡೆಯಲಿದೆ. ಸಲುವಾಗಿ ಕುಲಪತಿ ಪ್ರೊ. ಕೆ. ಬಿ. ಗುಡಸಿ ಶನಿವಾರ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ವಿಭಾಗದ ಮುಖ್ಯಸ್ಥ ಪ್ರೊ. ಜೆ. ಎಂ. ಚಂದುನವರ, ಸಹ ಪ್ರಾಧ್ಯಾಪಕ ಡಾ. ಸಂಜಯಕುಮಾರ್ ಮಾಲಗತ್ತಿ, ಮಹಾಂತ ಪದವಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಅಧ್ಯಾಪಕಿ ಶ್ರೀಮತಿ ಜಯಲಕ್ಷ್ಮಿ ಯಂಡಿಗೇರಿ, ಡಾ. ಪ್ರಭಾಕರ ಕಾಂಬಳೆ, ಪ್ರಕಾಶ ಚಳಗೇರಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.