ಮಾರ್ಚ್ 23ಕ್ಕೆ ‘ಎಲ್ಲರೊಳಗೊಂದಾಗು’ ಕೃತಿ ಲೋಕಾರ್ಪಣೆ
ಪುತ್ತೂರು: ಸುದಾನ ವಸತಿ ಶಾಲೆಯ ಅಂಗ ಸಂಸ್ಥೆಯಾದ ಸುದಾನ ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಸಂಸ್ಥೆಯ ಕನ್ನಡ ಶಿಕ್ಷಕಿ ಕವಿತಾ ಅಡೂರು ಅವರು ಬರೆದ ‘ಎಲ್ಲರೊಳಗೊಂದಾಗುʼ ಎಂಬ ಕೃತಿ ಮಾರ್ಚ್ 23, ಶನಿವಾರದಂದು ಲೋಕಾರ್ಪಣೆಗೊಳ್ಳಲಿದೆ. ‘ಮಂಕು ತಿಮ್ಮನ ಕಗ್ಗದ ಬೆಳಕುʼ ಎಂಬ ಅಂಕಣದ ಸಂಗ್ರಹ ಕೃತಿ ಇದಾಗಿದೆ.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ವಹಿಸಲಿದ್ದಾರೆ. ಹಿರಿಯ ಸಾಹಿತಿಗಳಾದ ವಿ. ಬಿ. ಅರ್ತಿಕಜೆ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಸುಬ್ರಾಯ ಸಂಪಾಜೆ ಅವರು ಕೃತಿ ಕುರಿತು ಮಾತನಾಡಲಿದ್ದಾರೆ.
ಇನ್ನು ಹಿರಿಯ ವಿದ್ವಾಂಸರಾದ ಮಂಜುಳಗಿರಿ ವೆಂಕಟರಮಣ ಭಟ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉಮೇಶ್ ನಾಯಕ್, ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್, ಸುದಾನ ಕಿಟ್ಟೆಲ್ ಸಂಶೋಧನಾ ಸಂಸ್ಥೆಯ ಕಾರ್ಯದರ್ಶಿ ಆಸ್ಕರ್ ಆನಂದ್, ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.