ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದ ಕಡೆ ಗಮನವಿರಬೇಕು: ಬಿ.ಎ. ಮಂಜುನಾಥ್
ಹಾಸನ: ನಾವು ಎಷ್ಟು ದಿನ ಬದುಕಿದ್ದೆವು ಎನ್ನುವುದಕ್ಕಿಂತ ಎಂತಹ ಒಳ್ಳೆಯ ಕಾರ್ಯ ಮಾಡಿ ಹೋದೆವು ಎಂಬುದು ಮುಖ್ಯ. ಮಕ್ಕಳಿಗೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಉತ್ತಮ ಸಂಸ್ಕಾರಗಳನ್ನು ಅರಿಯುವಂತೆ ಮಾಡಬೇಕು ಎಂದು ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ವಿವೇಕಾನಂದರವರ 161ನೇ ಜನ್ಮದಿನೋತ್ಸವ ಹಾಗೂ 46ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ವಿವೇಕಾನಂದ ವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಿವೇಕಾನಂದನವರ ಜೀವನಶೈಲಿ ಮತ್ತು ಒಳ್ಳೆಯ ಕಾರ್ಯಗಳನ್ನು ಸ್ಮರಿಸುತ್ತಾ ಅಧ್ಯಕ್ಷರಾದ ಉದಯಕುಮಾರ್ ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಆಡಿದರು.
ಮಣಿ ಆಸ್ಪತ್ರೆ ಮಕ್ಕಳ ತಜ್ಞರು, ಸಮಾಜ ಸೇವಕರು ದಿನೇಶ್ ಬೈರೇಗೌಡ ಮಾತನಾಡಿ, ಮಕ್ಕಳಿಗೆ ಆಹಾರ ಪದ್ಧತಿಗಳಲ್ಲಿ ಬದಲಾವಣೆಯಾಗಬೇಕು. ಮನೆಯಲ್ಲೇ ತಯಾರಿಸಿದಂತ ಆಹಾರವನ್ನು ನೀಡಿ. ಉತ್ತಮ್ಮ ಪೋಷಕಾಂಶದ ಆಹಾರ ನೀಡಿ ಮಕ್ಕಳ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದರು.
ಮಕ್ಕಳಿಗೆ ಅತಿಯಾದ ಮುದ್ದು ಸಲ್ಲದು ಶಿಸ್ತು ಬದ್ಧವಾದ ಜೀವನ ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಅವರಿಗೆ ಮುಂದಿನ ಪೀಳಿಗೆಯ ಉತ್ತಮ ಪ್ರಜೆಗಳಾಗಲು ದಾರಿ ದೀಪವಾಗುತ್ತದೆ. ಒಳ್ಳೆಯ ಸಂಸ್ಕಾರ ಬೇಕು. ಉತ್ತಮ ವಿದ್ಯಾಭ್ಯಾಸದ ಕಡೆ ಗಮನವಿರಬೇಕು. ಮುಂದಿನ ಭವಿಷ್ಯಕ್ಕೆ ಉತ್ತಮ ಕೊಡುಗೆಯಾಗಿ ಹೊರಹೊಮ್ಮ ಬೇಕು ಮಕ್ಕಳು ಎಂದು ಹಾಸನ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ. ಮಂಜುನಾಥ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂ. ಎಸ್. ಶ್ರೀಕಂಠಯ್ಯ, ಹೆಚ್. ಎಸ್. ಪ್ರತಿಮಾ ಹಾಸನ್, ಶ್ರೀಮತಿ ಶುಭ ಮಂಗಳ, ಶೇಖರ್ ಉಪಸ್ಥಿತರಿದ್ದರು.