Back To Top

 ಕೈಗಾರಿಕೆ ಹಾಗೂ ಉದ್ಯಮ ತಜ್ಞರಿಗಾಗಿ ಕ್ವಿಜ್ ಸ್ಪರ್ಧೆ

ಕೈಗಾರಿಕೆ ಹಾಗೂ ಉದ್ಯಮ ತಜ್ಞರಿಗಾಗಿ ಕ್ವಿಜ್ ಸ್ಪರ್ಧೆ

ಬೆಂಗಳೂರು: ಕೈಗಾರಿಕೆಗಳು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಸೌಹಾರ್ದ ಸಂಬಂಧ ಅತ್ಯವಶ್ಯಕ. ಇದರಿಂದ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳ ಬಗೆಗಿನ ಅರಿವು ವಿಸ್ತರಿಸುತ್ತದೆ ಮತ್ತು ಅಗತ್ಯ ಕೌಶಲ್ಯಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಈ ನಿಟ್ಟಿನಲ್ಲಿ ಕೈಗಾರಿಕಾ ತಜ್ಞರ ಸಲುವಾಗಿಯೇ ಏರ್ಪಡಿಸಿರುವ ಕ್ವಿಜ್ ಸ್ಪರ್ಧೆ ನಿಜಕ್ಕೂ ಸ್ವಾಗತಾರ್ಹ ಎಂದು ಸುರೇಶ್ ಆಂಡ್ ಅಸೋಸಿಯೇಟ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎ. ಸುರೇಶ್ ಶ್ಲಾಘಿಸಿದರು.

ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮ್ಯಾನೇಜ್‍ಮೆಂಟ್ ವಿಭಾಗ, ವಿವಿಧ ಕೈಗಾರಿಕೆ ಹಾಗೂ ಉದ್ಯಮಗಳ ತಜ್ಞರ ನಡುವೆ ಏರ್ಪಡಿಸಿದ್ದ ಕ್ವಿಜ್ ಸ್ಪರ್ಧೆಯ (ಮಾಸ್ಟರ್ ಮೈಂಡ್ಸ್-3) ಬಹುಮಾನ ವಿತರಣಾ ಸಮಾರಂಭದ ಮಾತನಾಡಿದರು.

ಇದಕ್ಕೂ ಮುನ್ನ ಕ್ವಿಜ್ ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ಚಾಲನೆಗೊಳಿಸಿದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಶೈಕ್ಷಣಿಕ ಮುಖ್ಯಸ್ಥ ಡಾ. ವಿ. ಶ್ರೀಧರ್ ಅವರು ಮಾತನಾಡಿ, ‘ಇದು ಮನರಂಜನೆ ಹಾಗೂ ಜ್ಞಾನಗಳೆರಡೂ ಒಗ್ಗೂಡಿದ ಕ್ವಿಜ್ ಕಾರ್ಯಕ್ರಮ. ಇಂತಹದ್ದು ಹೆಚ್ಚು ಹೆಚ್ಚು ಜರುಗಬೇಕು. ಇದರಿಂದ ನಾವು, ನಮ್ಮ ಯುವಜನಾಂಗ ಮೊಬೈಲ್ ವ್ಯಸನಕ್ಕೆ ತುತ್ತಾಗಬಹುದನ್ನು ತಪ್ಪಿಸಬಹುದು ಎಂದರು.

ಕರ್ನಾಟಕ ಕೈಗಾರಿಕಾ ಹಾಗೂ ವಾಣಿಜ್ಯ ಮಂಡಳಿಯ ಹಿರಿಯ ಉಪಾಧ್ಯಕ್ಷ ಎಂ.ಜಿ. ಬಾಲಕೃಷ್ಣ ಹಾಗೂ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‍ಮೆಂಟ್‍ನ ಕರ್ನಾಟಕ ಶಾಖೆಯ ಅಧ್ಯಕ್ಷ ದಿನೇಶ್ ಎ.ಯು ಹಾಗೂ ಪ್ರಧಾನ ಕಾರ್ಯದರ್ಶಿ ಪಿ.ಆರ್. ಬಸವರಾಜ್ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ನಾಡಿನ ಪ್ರಮುಖ ಉದ್ಯಮ ಮತ್ತು ಕೈಗಾರಿಕೆಗಳಿಂದ ಒಟ್ಟು 29 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಪ್ರಥಮ ಬಹುಮಾನ ವಿಜೇತ ಸಾಯಿಮಿತ್ರ ಕನ್‍ಸ್ಟ್ರಕ್ಷನ್ಸ್‌ ತಂಡ

ಸಾಯಿಮಿತ್ರ ಕನ್‍ಸ್ಟ್ರಕ್ಷನ್ಸ್‍ನ ತಂಡ ಮೊದಲ ಸ್ಥಾನ (50,000/- ರೂಗಳ ನಗದು ಬಹುಮಾನ), ಬಾರ್ಕ್‍ಲೇಸ್ ತಂಡ ಮೊದಲ ರನ್ನರ್ ಅಪ್‌ (25,000/- ರೂಗಳ ನಗದು ಬಹುಮಾನ) ಮತ್ತು ಇನ್ಫೋಸಿಸ್ ತಂಡ ಎರಡನೇ ರನ್ನರ್ ಅಪ್‌ (15,000/- ರೂಗಳ ನಗದು ಬಹುಮಾನ) ಹಾಗೂ ಕ್ಯಾಪ್‍ಜೆಮಿನಿ ತಂಡ ಮೂರನೇ ರನ್ನರ್ ಅಪ್‌ (10,000/- ರೂಗಳ ನಗದು ಬಹುಮಾನ) ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಸಮಾರಂಭದಲ್ಲಿ ಕ್ವಿಜ್ ಮಾಸ್ಟರ್ ಪ್ರೊ. ಶ್ರೀಧರ್ ಎಚ್.ಆರ್; ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮ್ಯಾನೇಜ್‍ಮೆಂಟ್ ವಿಭಾಗದ ಡೀನ್ ಡಾ. ಎಸ್. ನಾಗೇಂದ್ರ ಹಾಗೂ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪ ಅಜಯ್ ಉಪಸ್ಥಿತರಿದ್ದರು.

ಕ್ವಿಜ್‌ ಕಾರ್ಯಕ್ರಮ
Prev Post

ಅಪರ ಕ್ರಿಯೆಯ ಕರ್ಮವೇನು ಎಂಬ ಜಿಜ್ಞಾಸೆ | ದಿವ್ಯಶ್ರೀ ಹೆಗಡೆ

Next Post

ನೋವ ಬಯಸುವವನಲ್ಲಾ | ಮನೋಜ ಚಂದಾಪುರ

post-bars

Leave a Comment

Related post