Back To Top

 ಚಿತ್ರ ಕಲಾ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ಚಿತ್ರ ಕಲಾ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

Bengaluru: ಕರ್ನಾಟಕ ಲಲಿತಕಲಾ ಅಕಾಡೆಮಿಯ 60 ವರ್ಷದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಚಿತ್ರ ಕಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಮುಖಾಂತರ ವಿದ್ಯಾರ್ಥಿಗಳಿಗೆ  ಪ್ರತಿಭೆಯನ್ನು ಪ್ರದರ್ಶಿಸಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಕರ್ನಾಟಕದ ಕಲಾ ಶಾಲೆಗಳಲ್ಲಿ ಯಾವುದೇ ಹಂತದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಪೂರ್ವ ಸಿದ್ಧತೆಗಾಗಿ  ದಿನಾಂಕ: 30.04.2025 ವರೆಗೆ ಕಾಲಾವಕಾಶವನ್ನು ನೀಡಲಾಗುವುದು. ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಗಳು ತಾವು ರಚಿಸಿರುವ ಕಲಾಕೃತಿಗಳ 2 ಛಾಯಾಚಿತ್ರಗಳನ್ನು ಹಾಗೂ ತಾವು ಅಭ್ಯಾಸ ಮಾಡುತ್ತಿರುವ ಚಿತ್ರ ಕಲಾ ಶಾಲೆಯ ಪ್ರಾಂಶುಪಾಲರಿಂದ ದೃಢೀಕರಣ ಪತ್ರದೊಂದಿಗೆ ಅರ್ಜಿ ಕಳುಹಿಸಿ ಕೊಡಲು ಕೋರಿದೆ. ಅರ್ಜಿಗಳನ್ನು ಗೂಗಲ್ ಫಾರ್ಮ್ ನಲ್ಲಿ ಭರ್ತಿಮಾಡಿ ಅಕಾಡೆಮಿ ಕೋರಿರುವ ಅಗತ್ಯ ದಾಖಲೆಗಳನ್ನು ಆನ್‌ಲೈನ್‌ ಮುಖಾಂತರ ಗೂಗಲ್‌ನಲ್ಲಿ ಲಗತ್ತಿಸುವುದು.

ವೆಬ್‌ಸೈಟ್: www.lalitkala.karnataka.gov.in
ಹೆಚ್ಚಿನ ವಿವರಗಳಿಗಾಗಿ : 08022480297

ಆಯ್ಕೆಯ ಪ್ರಕ್ರಿಯೆ ಹೀಗಿರುತ್ತದೆ.

ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸುಂದರ ಪ್ರಕೃತಿಯ ಮಡಿಲಲ್ಲಿ ಚಿತ್ರ ಕಲಾ ಶಿಬಿರವನ್ನು ಏರ್ಪಡಿಸಲಾಗುವುದು. ಶಿಬಿರದಲ್ಲಿ ಅತ್ಯುತ್ತಮ ಚಿತ್ರ ರಚಿಸಿದ ವಿದ್ಯಾರ್ಥಿಗಳಿಗೆ (ಕನಿಷ್ಠ 6, ಗರಿಷ್ಠ 10 ವಿದ್ಯಾರ್ಥಿಗಳಿಗೆ) ರೂ. 15,000/- ಗಳ ನಗದಿನೊಂದಿಗೆ ಸ್ಮರಣಿಕೆ, ಪ್ರಮಾಣ ಪತ್ರವನ್ನು ಬಹುಮಾನವಾಗಿ ನೀಡಲಾಗುವುದು. ಜೊತೆಗೆ 2025ರ ಉತ್ತಮ ಕಲಾ ವಿದ್ಯಾರ್ಥಿಯೆಂಬ ಗೌರವವನ್ನು ನೀಡಲಾಗುವುದು.

Prev Post

ತೆಂಕನಿಡಿಯೂರು ಸ.ಪ್ರ.ದ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ

Next Post

ಪ್ರೀತಿ, ಪ್ರೇಮ ಎಂಬ ಮೋಹಕ್ಕೆ ಒಳಗಾಗದೆ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿ…

post-bars

Leave a Comment

Related post