Back To Top

 ಆಳ್ವಾಸ್‌ ಮತ್ತು ಸರ್ಕಾರದ ಸಹಯೋಗದಲ್ಲಿ ಅಂತಿಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸಿಎಸ್‌ಎಫ್‌ಎಸ್ ತರಬೇತಿ

ಆಳ್ವಾಸ್‌ ಮತ್ತು ಸರ್ಕಾರದ ಸಹಯೋಗದಲ್ಲಿ ಅಂತಿಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಸಿಎಸ್‌ಎಫ್‌ಎಸ್ ತರಬೇತಿ

ಮೂಡುಬಿದಿರೆ (ದಕ್ಷಿಣ ಕನ್ನಡ): ಫೆಬ್ರವರಿ 19ರಿಂದ ಮಾರ್ಚ್ 22ರ ವರೆಗೆ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಆವರಣದಲ್ಲಿ ಸೈಬರ್ ಸೆಕ್ಯುರಿಟಿ ಫಿನಿಶಿಂಗ್ ಸ್ಕೂಲ್ ತರಬೇತಿ ನಡೆಯಲಿದೆ. ತರಬೇತಿ ಸಂಬಂಧ ಆಳ್ವಾಸ್ ಎಂಜಿನಿಯರಿಂಗ್, ತಂತ್ರಜ್ಞಾನ ಕಾಲೇಜು ಮತ್ತು ಕರ್ನಾಟಕ ಸರ್ಕಾರದ ಸೈಬರ್ ಸೆಕ್ಯುರಿಟಿ ಕರ್ನಾಟಕ, ಬೆಂಗಳೂರಿನ ಸೈಸೆಕ್ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ಒಪ್ಪಂದಕ್ಕೆ ಸಹಿ ಮಾಡಿವೆ.

ಒಪ್ಪಂದದ ಅನ್ವಯ ರಾಜ್ಯದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳ ಅಂತಿಮ ವರ್ಷದ ಬಿ.ಇ. ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಫಿನಿಶಿಂಗ್ ಸ್ಕೂಲ್ (ಸಿಎಸ್‌ಎಫ್‌ಎಸ್) ತರಬೇತಿಯನ್ನು ನೀಡಲಾಗುತ್ತದೆ.

ಈ ಮಹತ್ವದ ಒಡಂಬಡಿಕೆಗೆ ಸಹಿ ಮಾಡಿದ ಕರ್ನಾಟಕ ಸರ್ಕಾರದ ಐಟಿ, ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಇದು ಇನ್ನಷ್ಟು ವಿಸ್ತಾರವಾಗಿ ರೂಪಿಸಬೇಕು. ಸರ್ಕಾರ ಸದಾ ಬೆಂಬಲ ನೀಡುತ್ತದೆ. ಈ ತರಬೇತಿ ಪಡೆದ ವಿದ್ಯಾರ್ಥಿಗಳು ಸೈಬರ್ ಸೆಕ್ಯುರಿಟಿಯಲ್ಲಿ ಉದ್ಯೋಗ ಪಡೆಯಬೇಕು ಎಂಬುದು ನಮ್ಮ ಪ್ರಮುಖ ಧ್ಯೇಯವಾಗಿದೆ ಎಂದರು.

ಸೈಸೆಕ್ ಕೇಂದ್ರದ ಮುಖ್ಯಸ್ಥ ಕಾರ್ತಿಕ್ ರಾವ್ ಬಿ., ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಿಎಸ್‌ಇ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೊಠಾರಿ, ಸೈಬರ್ ಸೆಕ್ಯುರಿಟಿ ಎಂಜಿನಿಯರ್‌ಗಳಾದ ವಿನೀತ್ ಶೆಟ್ಟಿ, ಕೌಶಿಕ್, ಕೆಎಸ್‌ಸಿಎಸ್‌ಟಿ ಕಾರ್ಯದರ್ಶಿ ಡಾ. ಅಶೋಕ್ ಎಂ. ರಾಯಚೂರ್ ಉಪಸ್ಥಿತರಿದ್ದರು.

Prev Post

ಮುಗಿಲ ಮನಸ್ಸಿನ ಅರಮನೆಯಲಿ ನೀ ಅರಗಿಣಿ | ಶಿಲ್ಪ ಬಿ

Next Post

ಎಂದು ಒಂದಾಗುವುದೂ ಈ ಪ್ರೀತಿ | ರಂಜಿತ ಹೆಚ್. ಕೆ

post-bars

Leave a Comment

Related post